ಆಟಿ ಅಮವಾಸ್ಯೆ - ಸಂಸ್ಕ್ರತಿ ಪಾಠ, ಆರೋಗ್ಯದ ಮಾರ್ಗ
ಆಟಿ ಅಮವಾಸ್ಯೆ - ಸಂಸ್ಕ್ರತಿ ಪಾಠ, ಆರೋಗ್ಯದ ಮಾರ್ಗ ನಮಸ್ಕಾರ, 1. ಆಟಿ ಅಮವಾಸ್ಯೆ – ಕಷ್ಟದ ತಿಂಗಳ ವಿಶೇಷತೆ ತುಳುನಾಡು - ಮಣ್ಣಿನ ಮಡಿಲಲ್ಲಿ ಬೆಳೆದ ನಾಡು...ಇಲ್ಲಿನ ಭಾಷೆ, ಪರಂಪರೆ, ಈ ನಾಡಿನ ಜೀವಾಳ... ದೈವಾರಾಧನೆ ವೇಳೆ ದೈವ ನರ್ತಕನ ಸಂದೇಶದಲ್ಲಿ ಭಕ್ತರು ಹುಡುಕುವ ನಂಬಿಕೆಯ ಬೆಳಕು....ಕಂಬಳದ ಗದ್ದೆಯಲ್ಲಿ ಕೋಣಗಳ ಓಟ, ಕೃಷಿಕರ ಜೀವನಕ್ಕೆ ಸಲ್ಲಿಸುವ ಗೌರವದ ಕ್ರೀಡೆ... ನಾಗದೇವರ ಪುಣ್ಯ ಭೂಮಿಯಾಗಿ ಪ್ರಸಿದ್ದವಾದ, ಈ ತುಳುನಾಡು. ಇಲ್ಲಿ ನಡೆಯುವ ಆಚರಣೆಗಳು ಕೇವಲ ಧಾರ್ಮಿಕ ವಿಧಿವಿಧಾನಗಳು ಮಾತ್ರವಲ್ಲ, ಅವು ನಮ್ಮ ಹಿರಿಯರ ಬದುಕಿನ ಮೌಲ್ಯಗಳು ಹಾಗೂ ಜೀವನ ಪಾಠ, ಪ್ರಕೃತಿಗೆ ನೀಡುವ ಗೌರವದ ಸಂಕೇತ. 2. ತುಳುನಾಡಿನ ಸಂಸ್ಕ್ರತಿ – ಬದುಕಿನ ಪಾಠ ಈ ನಾಡಿನಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಜನರ ನಿತ್ಯ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಅಂತಹ ಹಬ್ಬಗಳಲ್ಲಿ ಒಂದು ವಿಶೇಷ ಸ್ಥಾನ ಪಡೆದಿರುವುದು ಆಟಿ ಅಮವಾಸ್ಯೆ. ಇದು ತುಳುನಾಡಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಪ್ರಮುಖವಾದದ್ದು. ಈ ಹಬ್ಬವು ಜುಲೈ ತಿಂಗಳ ಸಂಕ್ರಮಣದ 16ರಂದು ಪ್ರಾರಂಭವಾಗಿ ಮುಂದಿನ ತಿಂಗಳ ಆಗಸ್ಟ್ 14 ರ, ಒಂದು ಸಂಕ್ರಮಣದಿಂದ ಇನ್ನೊಂದು ಸಂಕ್ರಮಣದವರೆಗೆ ಆಚರಿಸಲಾಗುತ್ತದೆ. 3. ಮನೆ ಶುದ್ಧೀಕರಣ – ಮನಸ್ಸಿನ ಶುದ್ಧೀಕರಣ ಈ ತಿಂಗಳನ್ನು ಆಟಿ ಎಂದೇ ಕರೆಯಲಾಗುತ್ತದೆ. ಹಿಂ...