ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ
ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ
ನಮಸ್ಕಾರ,
ನಮ್ಮೆಲ್ಲ ಓದುಗರಿಗೆ ಹೃತ್ಪೂರ್ವಕ ವಂದನೆಗಳು,
ನಿಮ್ಮ ಅಪಾರ ಪ್ರೀತಿ ಹಾಗೂ ಬೆಂಬಲದಿಂದ ನಮಗೆ ಸದಾ ಶಕ್ತಿ ಮತ್ತು ಸ್ಪೂರ್ತಿ ದೊರೆಯುತ್ತಿದೆ. ಇಂತಹ ಬೆಂಬಲ ಸದಾ ಇರಲಿ ಎಂಬ ಆಶಯದೊಂದಿಗೆ, ಇಂದು ನಾವು ಕರ್ನಾಟಕದ ಕರಾವಳಿಯ ಹೃದಯ ಭಾಗದಲ್ಲಿರುವ ಒಂದು ಅಪರೂಪದ ಪ್ರವಾಸಿ ತಾಣ ಕಾರ್ಕಳದ ಬಗ್ಗೆ ಸಂಕ್ಷಿಪ್ತ ಯಾತ್ರೆ ಮಾಡೋಣ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿರುವ ಈ ನಗರವು ಪ್ರಕೃತಿ ಸೌಂದರ್ಯ, ಐತಿಹಾಸಿಕ ವೈಭವ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಬಸದಿಗಳು, ದೇವಾಲಯಗಳು, ಚರ್ಚುಗಳು, ಮಸೀದಿಗಳು — ಎಲ್ಲವನ್ನೂ ತನ್ನೊಳಗೆ ಹೊತ್ತಿರುವ ಸರ್ವಧರ್ಮ ಸೌಹಾರ್ದದ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.
1. ಕಾರ್ಕಳದ ಹೆಸರು ಮತ್ತು ಇತಿಹಾಸ ಹೊಳಪುಗಳು
ಕಾರ್ಕಳದ ಪ್ರಾಚೀನ ಇತಿಹಾಸದತ್ತ ಗಮನಹರಿಸಿದರೆ. ಈ ಪ್ರದೇಶದಲ್ಲಿ ಜನಜೀವನವು ಬಹಳ ಹಿಂದಿನ ಕಾಲದಿಂದಲು ನೆಲೆಸಿರುವುದನ್ನು ತಿಳಿಯಬಹುದು. ಶಿಲಾಯುಗದಲ್ಲಿಯೇ ಕಾರ್ಕಳದಲ್ಲಿ ವಸಿಸುತ್ತಿದ್ದರು ಎನುವುದಕ್ಕೆ ಪರ್ಪಲೆ ಬೆಟ್ಟದ ಗವಿಯಲ್ಲಿ ಬೆಳುವಾಯಿಯ ಸಮೀಪದ ದರೆಗುಡ್ಡೆಯಲ್ಲಿ, ಬೈಲೂರಿನ ಕಣಜಾರು ಬೆಟ್ಟದಲ್ಲಿ ಶಿಲಾಯುಗಕ್ಕೆ ಸಂಬಂಧ ಪಟ್ಟ ಬಹಳಷ್ಟು ಪುರಾತನ ಕುರುಹುಗಳು ಕಂಡುಬರುತ್ತವೆ. ಮುಖ್ಯವಾಗಿ ರೆಂಜಳದ ಸಮೀಪದಲ್ಲಿರುವ ಬೋರ್ಕಟ್ಟೆಯಲ್ಲಿ ಬೃಹತ್ ಶಿಲಾ ಸಮಾಧಿಯು ಕಂಡುಬರುತ್ತದೆ. ಈ ಶಿಲಾ ಸಮಾಧಿಯನ್ನು ಸ್ಥಳೀಯರು ವಿಶೇಷವಾಗಿ "ಪಾಂಡವರ ಕಲ್ಲು" ಎಂದು ಕರೆಯುತ್ತಾರೆ. ಹಾಲವರು ರಾಜವಂಶದ ಇತಿಹಾಸದಲ್ಲಿ ಕಾರ್ಕಳ ನಗರವು ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಜೈನ ಮನೆತನಗಳ ಪ್ರಭಾವವಿರುವುದರೊಂದಿಗೆ, ಹೊಯ್ಸಳರು ಮತ್ತು ವಿಜಯ ನಗರ ಸಮ್ರಾಜ್ಯದ ಆಳ್ವಿಕೆಯು ಕೂ ಡ ಕಂಡುಬರುತ್ತದೆ. ಅಳುಪ ರಾಜ ಮನೆತನ ಕಾರ್ಕಳವನ್ನು ಆಳಿದವರಲ್ಲಿ ಪ್ರಮುಖರು ನಂತರ ಸಂತರು ಆಡಳಿತ ನಡೆಸಿದರು. ಬೈರವರಸರ ಕಾಲದಲ್ಲಿ ಕಾರ್ಕಳದ ರಾಜಕೀಯ ಮತ್ತು ಸಂಸ್ಕೃತಿಕ ವೈಭವ ಇನ್ನಷ್ಟು ಹೆಚ್ಚಿಸಿದೆ. ರಾಜ ಮನೆತನವು ಬಹಳ ಶ್ರೀಮಂತವಾಗಿದ್ದು, ಶಕ್ತಿಯುತ ಸೇನಾಬಲವನ್ನು ಹೊಂದಿತ್ತು. ಕಾರ್ಕಳವು ಸರ್ವದರ್ಮಿಯರು ವಾಸಿಸುವ ಒಂದು ನಗರವಾಗಿದೆ. ಇಲ್ಲಿ ಹಿಂದು, ಕ್ರಿಶ್ಚಿಯನ್, ಮುಸ್ಲಿಂ, ಜೈನ ದರ್ಮಗಳನ್ನು ಪಾಲಿಸಲಾಗುತ್ತದೆ.
- ಕಾರ್ಕಳವನ್ನು ಹಿಂದಿನ ಕಾಲದಲ್ಲಿ ಪಾಂಡ್ಯನಗರಿ ಎಂದು ಕರೆಯಲಾಗುತ್ತಿತ್ತು.
- ಸುತ್ತಮುತ್ತಲಿನ ಕಪ್ಪು ಬಂಡೆಗಳ ಕಾರಣ ಈ ಊರನ್ನು ಹಿಂದಿನ ಕಾಲದಲ್ಲಿ “ಕರಿಕಲ್ಲು” ಎಂದು ಕರೆಯಲಾಗುತ್ತಿತ್ತು.
- ತುಳು ಭಾಷೆಯಲ್ಲಿ “ಕಾರ್ಲ” ಎಂಬ ಪದದಿಂದ ಕನ್ನಡದಲ್ಲಿ “ಕಾರ್ಕಳ” ಎಂಬ ಹೆಸರು ಬಂದಿದೆ.
- ಶಿಲಾಯುಗದ ನೆಲೆಯುಳ್ಳ ನಾಡು
- ಶಿಲಾಯುಗದಲ್ಲಿಯೇ ಕಾರ್ಕಳದಲ್ಲಿ ಜನ ವಾಸಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿ:
- ಪರ್ಪಲೆ ಬೆಟ್ಟದ ಗವಿಗಳು
- ಬೆಳುವಾಯಿಯ ಸಮೀಪದ ದರೆಗುಡ್ಡೆ
- ಬೈಲೂರಿನ ಕಣಜಾರು ಬೆಟ್ಟ
- ರೆಂಜಳ ಸಮೀಪದ ಬೋರ್ಕಟ್ಟೆಯ ಬೃಹತ್ ಶಿಲಾಸಮಾಧಿ (ಜನಪ್ರಿಯವಾಗಿ “ಪಾಂಡವರ ಕಲ್ಲು” ಎಂದು ಕರೆಯಲ್ಪಡುತ್ತದೆ)
ಇದು ವಿಶ್ವದ ಎರಡನೇ ಅತೀ ಎತ್ತದ ಬಾಹುಬಲಿ ಪ್ರತಿಮೆಯಾಗಿದೆ. ಮೊದಲನೆಯ ಎತ್ತರದ ಬಾಹುಬಲಿ ಪ್ರತಿಮೆ ಶ್ರವಣ ಬೆಳಗೊಳದಲ್ಲಿ ಕಾಣಬಹುದು ಇದು ವಿಶ್ವ ಎರಡನೆ ಅತ್ತಿ ಎತ್ತರ ಬಾಹುಬಲಿ ಪ್ರತಿಮೆಯಾಗಿದೆ. ಇದು ಕಾರ್ಕಳದ ಗೊಮ್ಮಟೇಶ್ವರ ಪ್ರತಿಮೆಯಾಗಿದ್ದು. ಜೈನ ಮಠದ ಭಟ್ಟಾರಕ ಲಲಿತ ಕೀರ್ತಿಯವರ ಸಲಹೆಯಿಂದ ವೀರಪಾಂಡ್ಯ ಬೈರವರಸನು ಸುಮಾರು ಕ್ರಿ.ಶ 1432ರಲ್ಲಿ ನಿರ್ಮಿಸಿದರು. ಈ ಪ್ರತಿಮೆಯನ್ನು ಗ್ರಾನೆಟ್ ಬಂಡೆಯಿಂದ ಕೆತ್ತಲಾಗಿದೆ.
ಇದು ಸುಮರು 42 ಅಡಿ ಎತ್ತರ 10.33 ಅಡಿ ಅಗಲವಿದ್ದು, 5ಆಡಿ ಅಕಾರದಿಂದ ಸುತ್ತುವರೆದಿದೆ. ತಲೆಯ ಮೇಲೆ ಗುಂಗುರು ಕೂದಲು, ಅಜಾನುಬಾಹು ಕೈಗಳು ಮತ್ತು ಬಳ್ಳಿಯಿಂದ ಸುತ್ತುವರೆದ ದೇಹವಿದೆ. ಈ ಪ್ರತಿಮೆ ವಿಶ್ವದ ಎರಡನೇ ಅತೀ ಅತ್ತರವಾದ ವಿಗ್ರಹವಾಗಿದೆ. ವೀರ ಶಂಬು ಕಲ್ಕುಡನು ಈ ಬಾಹುಬಲಿ ಮೂರ್ತಿಯನ್ನು ಕೆತ್ತಿದನು. ಮೂರ್ತಿ ಕೆತ್ತಿದ ನಂತರ ಅವನಿಗಾದ ಅನ್ಯಾಯದಿಂದ ಅಣ್ಣ ಬೀರ ಶಂಬು ಕಲ್ಕುಡ ಮತ್ತು ತಂಗಿ ಕಾಳಮ್ಮ (ಕಲ್ಲುಟ್ಟಿ) ದೈವ ಶಕ್ತಿಯಾಗಿ ಪರಿರ್ವತನೆಗೊಂಡು, ಸಿಟ್ಟಿನಿಂದ ದೈವ ಶಕ್ತಿಯ ಬಲದಿಂದ ಇಡೀ ಕಾರ್ಕಳವನ್ನು ಸುಟ್ಟಿದ್ದಾರೆ ಎಂದು "ಕಲ್ಕುಡ ಕಲ್ಲುಟಿ"ಯ ಪಾಡ್ದನದಲ್ಲಿ ಹೇಳಲಾಗುತ್ತದೆ.
3. ಪಡು ತಿರುಪತಿ ಕಾರ್ಕಳ ವೆಂಕಟರಮಣ ದೇವಸ್ಥಾನ
ಕಾರ್ಕಳ ವೆಂಕಟರಮಣ ದೇವಸ್ಥಾನ ಸುಮಾರು 550 ವರ್ಷದ ಇತಿಹಾಸವಿರುವ ಬಹಳ ಪುರಾತನ ದೇವಸ್ಥಾನವಾಗಿದೆ. ಆಂದ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಇರುವುದರಿಂದ, ಕಾರ್ಕಳದ ವೆಂಕಟರಮಣ ದೇವಸ್ಥಾನವನ್ನು ಪಡುತಿರುಪತಿ ಎಂದು ಕರೆಯುತ್ತರೆ. ಉತ್ತರ ಭಾರತದಿಂದ ವಲಸೆ ಬಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯವು ಗೋವಾದಲ್ಲಿ ನೆಲೆಯೂರಿತು. ನಂತರ ಈ ಕುಟುಂಬವು ಉದ್ಯೋಗ ಹುಡುಕುತ ಗೋವದಿಂದ ದಕ್ಷಿಣ ಭಾರತದ ಕಡೆ ಬರುತ್ತಾರೆ.
ಆ ಸಮಯದಲ್ಲಿ ಕಾರ್ಕಳವನ್ನು ಆಳುತಿದ್ದ ಜೈನ ಮಠದ ಅನುಯಾಯಿ ಬೈರವರಸರು ರಾಜಾಶ್ರಯ ನೀಡಿದರು ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಬಹುತೇಕರು ವೈಷ್ಣವ ಸಾಂಪ್ರದಾಯದವರಾಗಿದ್ದರು. ಆ ಸಮಯದಲ್ಲಿ ಕಾರ್ಕಳದಲ್ಲಿ ಯಾವುದೇ ವೈಷ್ಣವ ದೇವಾಲಯವಿಲ್ಲದ ಕಾರಣ, ಸೋಮ ಶರ್ಮರು ತಿರುಪತಿ ದೇವಸ್ಥಾನದಿಂದ ವೆಂಕಟರಾಮನ ವಿಗ್ರಹವನ್ನು ತಂದಿದ್ದರು. ಬಳಿಕ ಬೈರವರಸರ ಅನುಮತಿಯನ್ನು ಕೇಳಿ ನಿರ್ಮಾಣಿಸಿದರು. ಕಾರ್ಕಳದಿಂದ ವರಾಂಗಕ್ಕೆ ಹೋಗುವ ದಾರಿಯಲ್ಲಿ ಕಾಡಿನಿಂದ ಆವೃತ್ತವಾಗಿರುವ ಪ್ರದೇಶವನ್ನು ದೇವಾಲಯದ ನಿರ್ಮಾಣಕ್ಕೆ ಬೈರವರಸರು ನೀಡಿದ್ದರು. ಸೋಮ ಶರ್ಮ ಮತ್ತು ಸೋಹಿರೆ ಪ್ರಭುಗಳು ದೇವಸ್ಥಾನ ಸ್ಥಾಪಿಸುವಲ್ಲಿ ಮಹತ್ವದ ಬೆಂಬಲ ನೀಡಿದರು. ಇದ್ದರ ನಂತರ ಸೋಹಿರೆ ಪ್ರಭುಗಳ ವಂಶಸ್ಥರು ಒಂದನೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಸೋಮ ಶರ್ಮರವರ ವಂಶಸ್ಥ ಆರ್ ಪ್ರಧಾನ ಅರ್ಚಕರಾಗಿರುತ್ತಾರೆ.
4. ಕಾರ್ಕಳ ಚತುರ್ಮುಖ ಬಸದಿ
ಕಾರ್ಕಳದಲ್ಲಿರುವ ಪುರಾತನ ಚತುರ್ಮುಕ ಬಸದಿಯು ಬಹಳ ಪ್ರಮುಖ ಜೈನ ಧಾರ್ಮಿಕ ಸ್ಮಾರಕವಾಗಿದೆ. ಒಂದೂ ಈ ಬಸದಿಯನ್ನು ಆಗಿನ ಕಾಲದ ಸಂತರ ವಂಶದ ದೊರೆಯದ ಪಾಂಡ್ಯದೇವ ಮಾತು ಇಮ್ಮಡಿ ಬೈರವರಾಯರ ಕಾಲದಲ್ಲಿ ಕತ್ತಲಾಯಿತು.ಈ ಬಸದಿಯನ್ನು ಕಲ್ಲಿನಿಂದ ಕೆತ್ತಿ ನಿರ್ಮಿಸಲಾಗಿದೆ. ಚತುರ್ಮುಕ ಬಸದಿಯ ವಸ್ತುಶಿಲ್ಪವು ವಿಜಯನಗರ ಶೈಲಿಯನ್ನು ಹೊಲುತ್ತದೆ.ಬಸದಿಯು ಒಂದು ಗರ್ಭಗ್ರಹವನ್ನು ಹೊಂದಿದೆ. ಗರ್ಭಗ್ರಹವನ್ನು ಪ್ರವೇಶಿಸಲು 4 ದ್ವಾರವನ್ನು ಹೊಂದಿದೆ. ಈ ಬಸದಿ ಒಳಗಡೆ ಮಾತು ಹೊರಗಡೆ 108 ಕಂಬಗಳಿವೆ .ಈ ಕಂಬಗಳು ಸಾರಸರಿ ಸುಮರು 18 ಅಡಿ ಎತ್ತರವಿದ್ದು . ಪ್ರತಿಯೊಂದು ಕಂಬದಲ್ಲು ಶಿಲಾಕೃತಿ ಕೆತ್ತನೆಗಳನ್ನು ಕಾಣಬಹುದು . ಕೆತ್ತನೆಯ ವಿಚಾರದಲ್ಲಿ ಚತುರ್ಮುಕ ಬಸದಿಯು ಸಾಧಾರಣವಾಗಿದ್ದರು ಶಿಲಾ ವಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಬಸದಿಗೆ ಹೋಗುವ ದಾರಿ 58 ಮೇಟಿಲುಗಳನ್ನು ಹೊಂದಿದೆ.
ಚತುರ್ಮುಕ ಬಸದಿಯ ಕೆಟ್ಟನೆ ಕೆಲಸವು ಅಂದರೆ ನಿರ್ಮಾಣ ಕಾರ್ಯವು "ವೀರ ಪಾಂಡ್ಯ ದೇವನ" ಆಡಳಿತದಡಿ ಪ್ರಾರಂಭವಾಗಿ ಇಮ್ಮಡಿ ಬೈರವರಾಯನ ಕಾಲದಲ್ಲಿ ಪೂರ್ಣಗೊಂಡಿತು. ಕಾರ್ಕಳದ ಬಾಹುಬಲಿ ಮೂರ್ತಿಗೆ ಎದುರಾಗಿ ಈ ಬಸದಿಯನ್ನು ಕಟ್ಟಲಾಗಿದೆ. ಈ ಚತುರ್ಮುಕ ಬಸದಿಯನ್ನು "ತ್ರಿಭುವನ ತಿಲಕ ಚೂಡಾಮಣಿ ಬಸದಿ" ಅಥವ "ರತ್ನತ್ರಯ ಧಾಮ" ಎಂದು ಕರೆಯಲಾಗುತ್ತದೆ. ಭಾರತದ ಸರ್ಕಾರದ ಪರಾತತ್ವ ಇಲಾಕೆಯು ಈ ಬಸದಿಯನ್ನು ದೇಶದ ಅತೀ ಪುರಾತನ ಹಾಗು ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿ ಗುರುತಿಸಿದೆ.
5. ಕಾರ್ಕಳ ಶ್ರೀ ಅನಂತ ಶಯನ ದೇವಸ್ಥಾನ.
ಈ ದೇವಾಲಯವು ಶ್ರೀ ಮಹಾವಿಷ್ಣುವಿನ ರೂಪವಾದ ಭಗವಾನ್ ವಿಷ್ಣುವಿನ ಅನಂತ ಪದ್ಮನಾಭನಿಗೆ ಅರ್ಪಿತವಾಗಿದೆ. ಕಾರ್ಕಳ ಸಾಂತಾರ ಮನೆತನದವರು ಈ ದೇವಾಲಯವುನ್ನು ಸ್ಥಾಪಿಸಿದರು.ಈ ಕಾರ್ಕಳ ಅನಂತ ಪದ್ಮನಾಭ ದೇವಾಸ್ಥನವನ್ನು ಶೇಷಸಾಯಿ ಅನಂತೇಶ್ವರ ದೇವಸ್ಥಾನ ಎಂದು ಕರೆಯುತಿದ್ದರು.ಬಹಳ ಸುಂದರವಾದ ದೇವಾಲಯವಾಗಿದ್ದು, ಸಾಮ ಚತುರಸ ಮಾದರಿಯಾ , ಗರ್ಭಗ್ರಹವನ್ನು ಹೊಂದಿದೆ. ನಾಲ್ಕು ಕಂಬಗಳನ್ನು ಹೊಂದಿರುವ ತೀರ್ಥ ಮಂಟಪದ ಮುಂಬಾಗದಲ್ಲಿ ಆದಿಶೇಷನ ಮೇಲೆ ವಿಶ್ರಾಂತಿಸುವ ವಿಷ್ಣು ಮುಖ್ಯ ದೇವರು. ವಿಷ್ಣುವಿನ ಹೊಕ್ಕುಳದಿಂದ ಹೊರಬರುವ ಕಮಲದ ಮೇಲೆ ಬ್ರಹ್ಮ ನಿಂತಿದ್ದಾನೆ. ಮಾತ್ತು ವಿಷ್ಣುವಿನ ಪಾದದ ಬಳಿ ಇರುವ ಲಕ್ಮಿ ಈ ವೈಷ್ಣವ ದೇವಾಲಯವು ಹೊಯ್ಸಳ ವಾಸ್ತುಶಿಲ್ಪ ಮಾದರಿಯ ದೇವಸ್ಥಾನ ಪ್ರದಾನ ಬಲಿ ಪೀಠ, ದ್ವಜಸ್ತಂಭ ಸುಕನಾಸಿ ಮಾತು ಗರ್ಭಗುಡಿ ಪ್ರಮುಖ ಅಂಗಗಳು.
ಈ ದೇವಾಲಯವು 15ನೇ ಶತಮಾನದಲ್ಲಿ ಜೈನ ಬಸದಿಯಾಗಿತ್ತು, ಒಮ್ಮೆ ಶಿಂಗೇರಿ ಶ್ರೀಗಳು ಈ ಹೊಯ್ಸಳ ವಸ್ತುಶಿಲ್ಪ ಮಾದರಿಯ ದೇವಸ್ಥಾನ ಪ್ರದಾನ ಬಲಿ ಪೀಠ ದ್ವಜಸ್ತಂಭ, ಸುಕನಾಸಿ ಮತ್ತು ಗರ್ಭಗುಡಿ ಪ್ರಮುಖ ಅಂಗಗಳು. ಒಮ್ಮೆ ಶೃಂಗೇರಿ ಶ್ರೀಗಳು ಈ ಬಸದಿಗೆ ಭೇಟಿ ನೀಡಿದರು ಜೈನ ರಾಜರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಅವರನ್ನು ಅಲ್ಲಿಯೇ ವಾಸ್ತವ್ಯವನ್ನು ಹೂಡಲು ಹೇಳುತ್ತಾರೆ. ಆಗ ಶ್ರೀಗಳು ಇಲ್ಲಿ ಒಂದು ವಿಷ್ಣು ದೇವಾಲಯ ಇದ್ದರೆ ವಾಸ್ತವ್ಯ ಹೂಡುವುದಾಗಿ ಹೇಳುತ್ತಾರೆ, ಆ ಸಮಯದಲ್ಲಿ ಕಾರ್ಕಳದಲ್ಲಿ ವಿಷ್ಣುವಿನ ವಿಗ್ರಹ ಇರಲಿಲ್ಲ ಆಗ ಸ್ವಾಮೀಜಿಯು ರಾಜನಿಗೆ ನೆಲ್ಲಿಕಾರ್‌ನ ಸಣ್ಣ ನದಿಯಲ್ಲಿ ಅನಂತ ಪದ್ಮನಾಭ ವಿಗ್ರಹ ಇದೆ ಎಂದು ಹೇಳುತ್ತಾರೆ. ಅಲ್ಲಿ ಹೋಗಿ ನೋಡುವಾಗ ಹೇಳಿದ ಜಾಗದಲ್ಲಿ ವಿಗ್ರಹ ಕಂಡು ಬರುತದೆ. ಇದನು ಕಂಡು ರಾಜನು ಆಶ್ಚರ್ಯವಾಗಿ ತನ್ನ ಬಸದಿಯನ್ನು ಪರಮಪೂಜ್ಯ ಶ್ರೀಗಳಿ ನೀಡುತ್ತಾರೆ ಶ್ರೀ ವಿಷ್ಣುವಿನ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ.
6. ಕಾರ್ಕಳ ಅತ್ತೂರ್ ಚರ್ಚ್
ಕಾರ್ಕಳದ ಇನ್ನೊಂದು ದೊಡ್ಡ ಜಾತ್ರೆ ಎಂದರೆ ಅತ್ತೂರ್ ಜಾತ್ರೆ. ಬಹುದೊಡ್ಡ ಮಟ್ಟದಲ್ಲಿ ಜನ ಸೇರುವ ಜಾತ್ರೆಯಲ್ಲಿ ಇದು ಕೂಡ ಒಂದಾಗಿದೆ . ಅತ್ತೂರ್ ಜಾತ್ರೆಯು 5 ದಿನಗಳ ಕಾಲ ನಡೆಯುತ್ತದೆ. ಇದೊಂದು ರೋಮನ್ ಕ್ಯೆಥೋಲಿಕ್. ಭಕ್ತರ ಹರಕೆಯನ್ನು ಈಡೇರಿಸುವ ಈ ಸಂತ ಲಾರೆನ್ಸ್ ಕ್ಷೇತ್ರ ಹಲವಾರು ಪವಾಡಗಳಿಗೂ ಸಾಕ್ಷಿಯಾಗಿದೆ. ಸರ್ವಧರ್ಮ ಸಮ್ಮಿಲನವನ್ನು ನಾವು ಇಲ್ಲಿ ಕಾಣಬಹದು. ಆಗಿನ ರೋಮ್ ಚಕ್ರವರ್ತಿಯ ಧರ್ಮ ವಿರೋದ ನೀತಿಯಿಂದ ಕ್ರೈಸ್ತ ಧರ್ಮಕ್ಕಾಗಿ ಹುತತ್ಮರಾದ "ಸಂತ ಲಾರೆನ್ಸ್" ಹೆಸರಿನಿಂದ ಈ ಚರ್ಚ್ ನಿರ್ಮಿಸಲಾಗಿದೆ. ಈ ಚರ್ಚ್ 3 ಶತಮಾನಗಳ ಇತಿಹಾಸ ಹೊಂದಿದೆ. ದಕ್ಷಿಣ ಭಾರತದಲ್ಲಿ ಪುಷ್ಕರಣಿ ಇರುವ ಏಕೈಕ ಚರ್ಚ್ ಎಂದರೆ ಅದು ಸಂತ ಲಾರೆನ್ಸ್ ರ ಚರ್ಚ್ ಆಗಿದೆ.
ಇತಿಹಾಸ ನೋಡುವುದಾದರೆ ಟಿಪ್ಪು ಸುಲ್ತಾನ್ ಕೆಲವು ರಾಜಕೀಯ ಕಾರಣಗಳಿಂದ ಕರಾವಳಿಯ ಅದರಲ್ಲಿಯು ಮುಖ್ಯವಾಗಿ ಕಾರ್ಕಳ ದ ಕೆಲವು ಕ್ರೈಸ್ತರನ್ನು ಬಂದನದಲ್ಲಿ ಇಡುತ್ತಾನೆ. ಮತ್ತು ಹಳೆಯ ಚರ್ಚ್ ಸಂಪೂರ್ಣವಾಗಿ ದ್ವಾಂಸ ಮಾಡುತ್ತಾನೆ. ಈ ದ್ವಂಸ ಮಾಡಲಾದ ಚರ್ಚ್ ಈಗ ಇರುವ ಚರ್ಚ್‌ಗಿಂತ ಸ್ವಲ್ಪ ದೂರದಲ್ಲಿತ್ತು. ಟಿಪ್ಪು ಸುಲ್ತಾನನ ಮರಣ ನಂತರ ಬಂಧ ಮುಕ್ತರಾದ ಮತ್ತು ಬದುಕುಳಿದ ಕ್ರೈಸ್ತರು ಅತ್ತೂರಿನಿಂದ ನಕ್ರೆಗೆ ಹೋಗುವ ದಾರಿ ಪಕ್ಕದಲ್ಲಿ ಮುಳಿ ಹುಲ್ಲಿನ ಛವಾನಿಯ ಚರ್ಚ್ ನಿರ್ಮಿಸುತ್ತಾರೆ. ಈ ಚರ್ಚ್ ದ್ವಂಸ ಮಾಡಿದ ಚರ್ಚ್‌ಗಿಂತ 4 ಕಿ. ಮೀ. ದೂರದಲ್ಲಿತ್ತು. ಹೀಗೆ ನೀರ್ಮಿಸಿದ ಚರ್ಚ್ ಶಿಥಿಲಗೊಂಡಾಗ, ಆಗಿನ ಗೋವಾದ ಧರ್ಮ ಗುರುಗಳು ತಮ್ಮ ಸ್ವಲ್ಪ ಅನುಯಾಯಿಗಳೊಂದಿಗೆ ಸಂತ ಲಾರೆನ್ಸ್ರ ಮೂರ್ತಿಯೊಂದಿಗೆ ಕಾರ್ಕಳಕ್ಕೆ ಬರುತ್ತಾರೆ.
ಈ ಮೂರ್ತಿಯೊಂದಿಗೆ ಹೊಸ ಚರ್ಚ್ ಕಟ್ಟಲು ಸೂಕ್ತ ಸ್ಥಳವನ್ನು ನಿರೀಕ್ಷಿಸುತ್ತ ಬೆಟ್ಟ ಹತ್ತಿ ಇಳಿದು ದಣಿದ ಗುರುಗಳು ಅತ್ತೂರಿನ “ಪರ್ಪಲೆ ಗುಡ್ಡ ” ಬಳಿ ಮೂರ್ತಿಯನ್ನು ಕೆಳಗೆ ಇಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ನದಿಯಲ್ಲಿ ನೀರು ಕುಡಿದು ದಣಿವು ಆರಿಸಿಕೊಳ್ಳುತ್ತಾರೆ. ಹಿಂದಕ್ಕೆ ಬಂದು ಮೂರ್ತಿಯನ್ನು ಎತ್ತಿ ತಮ್ಮ ಪ್ರಯಾಣವನ್ನು ಮುಂದುವರೆಸಲು ಮುಂದಾದಗಾ ಮೂರ್ತಿಯು ಒಂದು ಇಂಚು ಸಹ ಅಲುಗಡುವುದಿಲ್ಲ. ಆಗ ಗುರುಗಳು ಸಂತ ಲಾರೆನ್ಸ್ರ ಬಳಿ ಪ್ರಾರ್ಥಿಸುತ್ತಾರೆ. ನಮಗೆ ಚರ್ಚ್ ಕಟ್ಟಲು ಇದೆ ಸೂಕ್ತ ಸ್ಥಳ ಆಗಿದ್ದರೆ ಸರಿ ನಾವು ಇಲ್ಲಿಯೇ ನಿಮ್ಮನ್ನು ಪ್ರತಿಷ್ಠೆ ಮಾಡಿ ಚರ್ಚ್ ಕಟ್ಟುತ್ತೆವೆ ಎಂದು ಅದೇ ಜಾಗದಲ್ಲಿ ಚರ್ಚ್ ಕಟ್ಟುತ್ತಾರೆ. ಮತ್ತೆ ಈ ಚರ್ಚ್‌ನ "ದ್ವಿ ಶತಮಾನತ್ಸವ"ದ ನೆನಪಿಗಾಗಿ 2000 ಇಸವಿಯಲ್ಲಿ ಇದನ್ನು ಮತ್ತಷ್ಟು ಜೀರ್ಣೊದ್ದಾರ ಮಾಡಿ, ಈ ಜಿಲ್ಲೆಯಿಂದ ಮಾತ್ರವಲ್ಲದೆ ದೇಶದ ವಿವಿಧ ಕಡೆಯಿಂದ ಬರುವ ಯಾತ್ರ ಕ್ಷೇತ್ರವಾಗಿ ಆಕರ್ಷಸುತ್ತದೆ.
7. ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ
ಕಾರ್ಕಳ ಸಿಟಿಯಲ್ಲಿ ಬಸ್ಸ್ಟ್ಯಾಂಡ್ ಸಮೀಪದಲ್ಲಿರುವ ಒಂದು ಪುಣ್ಯಕ್ಷೇತ್ರ ಅಂದರೆ ಅದು ಶ್ರೀ ಮಾರಿಯಮ್ಮ ದೇವಸ್ಥಾನ (ಮಾರಿಗುಡಿ). ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿರುವ ಮಾರಿಯಮ್ಮ ದೇಗುಲವು ವಿಜಯನಗರ ಅರಸರ ಕಾಲದಲ್ಲಿ ಪ್ರತಿಷ್ಠಪನೆಗೊಂಡಿದೆ. ಅಷ್ಟಮಂಗಳ ಪ್ರಷ್ನಾ ಚಿಂತನೆ ಕಂಡುಬಂದಂತೆ ಈ ಕ್ಷೇತ್ರಕ್ಕೂ ಶೃಂಗೇರಿ ಶ್ರೀ ಶರದಾಂಬೆ ಕ್ಷೇತ್ರಕ್ಕೂ ನಿಕಟಪೂರ್ವ ಸಂಬಂಧಯಿದೆ ಎನ್ನುವುದು ವಿಶೇಷ. ಕಾರ್ಕಳದ 8 ಮಾಗಣೆಗೆ ಒಡತಿಯಾದ ಕಾಳಿ ಸ್ವರೂಪಳಾದ ಶ್ರೀ ಮಾರಿಯಮ್ಮ ದೇವಿಯು ಕಾರ್ಕಳ ಸೀಮೆಯ ಕಲಾ ಶ್ರೀಮಂತಿಕೆಗೆ ಮೇರುಕಳಸವಾಗಿ ಭಕ್ತರನ್ನು ಪೊರೆಯುವ ಶಕ್ತಿದೇವತೆ ಆಗಿದ್ದಾಳೆ.
ಸುಮಾರು ವರ್ಷಗಳ ಹಿಂದೆ ಇದ್ದ ಕೋಟೆಯೂ ಭೈರವಾರಸರು, ಕೆಳದಿನಾಯಕರು ಮತ್ತು ಬ್ರಿಟಿಷ್ ಆಳ್ವಿಕೆ ಕಂಡ ಕೋಟೆಯಗಿತ್ತು. ಹಾಗು ಹಲವಾರು ಯುದ್ಧಗಳನ್ನು ಕಂಡಿತ್ತು. ಈ ಕೋಟೆ ಕಾಯಲು ಸೈನ್ಯ ಸೈನ್ಯದ ತಲೆ ಕಾಯಲು ಒಂದು ಶಕ್ತಿದೇವತೆಯಾಗಿ ಮಾರಿ ಉಪಾಸಣೆ ನಡೆದುಕೊಂಡು ಬಂದಿದೆ. ಶಕ್ತಿದೇವತೆಯ ಆರಾಧಕರಗಿದ್ದ ರಾಮಕ್ಷತ್ರಿಯ ವಂಶದವರು ಮಾರಿಯಮ್ಮನ ಆರಾಧನೆ ಆರಂಭಿಸಿದರು ಎಂಬ ಇತಿಹಾಸಯಿದೆ. ನಾಡಿಗೆ ಬಂದ ಗಂಡಂತರವನ್ನು ಎದೆಯೋಡ್ಡಿ ದೂರ ಮಾಡಿದ ಬಿಚ್ಚುಗತ್ತಿ ವೀರರು ಶ್ರೀ ಮಾರಿಯಮ್ಮನ ಉಪಾಸಣೆ ಮಾಡಿ ರಕ್ತತರ್ಪಣ ನೀಡಿ ರಣರಂಗಕ್ಕೆ ದುಮುಕ್ಕುತ್ತಿದ್ದರು . ಒಂದು ಮಾಗಣೆಗೆ 4 ರಂತೆ 32 ಕೋಣಗಳನ್ನು ಬಲಿ ಕೊಡುತ್ತಿದ್ದರು. ಪರ್ವ ಆಚಾರದಂತೆ ಬಲಿ ಕೊಡುತೀದ್ದ 8 ಕತ್ತಿಗಳನ್ನು ಇಂದಿಗೂ ಪೂಜಿಸಲಾಗುತ್ತದೆ. ಒಟ್ಟು 19 ಜಾತಿಯ ಜನರು ಸೇರಿ ಮಾರಿಯಮ್ಮನ ಮಾರಿಪೂಜಾ ಮಹೋತ್ಸವವನ್ನು ಸಂಪ್ರದಾಯ ಬದ್ದವಾಗಿ ಸಂರ್ಪೂಣಗೊಳಿಸಲಾಗುತಿತ್ತು. ಪ್ರಾಣಿಬಲಿ ನಿಷೇದದ ಹಿನ್ನಲೆಯಲ್ಲಿ ಬಲಿ ಪ್ರದಾನ ಆಗಿದ್ದ ಮಾರಿ ಆರಾಧನೆ ಸಾತ್ವಿಕರೂಪ ಪಡೆದುಕೊಂಡಿದೆ.
ಶ್ರೀ ಕ್ಷೇತ್ರವು ಅನುವಂಶಿಕವಾಗಿ ರಾಮಕ್ಷತ್ರಿಯರ ಆಡಳಿತದಲ್ಲಿದ್ದು ಶ್ರೀ ಮಾರಿಯಮ್ಮ ದೇವಿಯ ಜೊತೆಗೆ ಪರಿವಾರ ದೇವರುಗಳಾದ ಶ್ರೀ ಮುಖ್ಯಪ್ರಾಣ ದೇವರು, ನಾಗದೇವರು ಹಾಗೂ ಉಚ್ಚಂಗಿ ಅಮ್ಮನವರು. ಪರಿವಾರ ದೈವಗಳಾದ ಕಲ್ಕುಡ ,ವರ್ತೆ ತೂಕತ್ತೇರಿ ಆರಾಧನೆ ಮಾಡಿಕೊಂಡು ಬರಲಾಗುತ್ತದೆ. ಪ್ರತಿ ಮಂಗಳವಾರ ಗದ್ಧುಗೆಪೂಜೆ ಮತ್ತು ದರ್ಶನ ಸೇವೆ ವಿಶೇಷವಾಗಿದೆ. ಮೇ ತಿಂಗಳಲ್ಲಿ2 ದಿನಗಳ ಕಾಲ ಮಾರಿಪೂಜಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ನವರಾತ್ರಿಯ 9 ದಿನ ವಿಶೇಷ ಅಲಂಕಾರದೊಂದಿಗೆ ನವರಾತ್ರಿಪೂಜೆ ಹಾಗೂ ವಿಜಯದಶಮಿಯಂದು ಆಯುಧಪೂಜೆ ನೆರವೇರಿಸಲಾಗುತ್ತದೆ.
8. ಆನೆಕೆರೆ ಕಾರ್ಕಳ
ಕಾರ್ಕಳದ ಆನೆಕೆರೆಯು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಕೆರೆಯಾಗಿದೆ. ಹಚ್ಚ ಹಸಿರಿನ ನಡುವೆ ನೆಲೆಸಿರುವ ಈ ಕೆರೆಯು ಅತ್ಯಾಗತ್ಯ ಪರಿಸರ ಸಂಪನ್ಮೂಲವಾಗಿ. ಕಾರ್ಯನಿರ್ವಹಿಸುತ್ತದೆ. ಮತ್ತು ಅದರ ಶಾಂತ ಆರೋಗ್ಯಕರ ಪರಿಸರಕ್ಕೆ ಹೆಸರುವಾಸಿಯಾಗಿದೆ . ಸ್ಥಳೀಯ ಜನರಿಗೆ ಮತ್ತು ಪ್ರವಾಸಿಗರಿಗೆ ಜನಪ್ರಿಯ ತಾನಾವಾಗಿದ್ದು. ಈ ಆನೆಕೆರೆಯು ಸಮುದ್ರ ಮಟ್ಟದಿಂದ ಸುಮಾರು 1000 ಮೀಟರ್‌ಳಷ್ಟು ಎತ್ತರದಲ್ಲಿದೆ ಮತ್ತು ಸುತ್ತಮುತ್ತಲು ದಟ್ಟವಾದ ಸಸ್ಯಾವರ್ಗದಿಂದ ಅವ್ರತ್ತವಾಗಿದೆ.
ಆನೆಕೆರೆಯು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಆನೆಕೆರೆಯು 13 ನೇ ಶತಮಾನದಲ್ಲಿ ಸ್ಥಳೀಯ ಮುಖಂಡರ ಆಳ್ವಿಕೆ ಸಮಯದಲ್ಲಿ ನಿರ್ಮಾಣಮಾಡಲಾಗಿದೆ. ಇದು ಅದರ ಸುತ್ತ ಮುತ್ತಲಿನ ನಗರ ಮತ್ತು ಹಳ್ಳಿಗಳಿಗೆ ಪ್ರಮುಖ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಅನೆಕೆರೆಯ ಸುತ್ತಲಿನ ಪ್ರದೇಶವು ಶತಮಾನದಷ್ಟು ಹಿಂದಿನ ಜೈನ ಬಸದಿಯ ನೆಲೆಯಾಗಿದೆ. ಈ ಬಸದಿಯು ಕೆರೆಯ ಸಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ನಾಡಿಗೆ ಎತ್ತಿ ತೋರಿಸುತ್ತದೆ. ಜನವರಿ 18 2024ರಲ್ಲಿ ಈ ಅನೆಕೆರೆಯನ್ನು ಜಿರ್ಣೋದ್ದಾರ ಮಾಡಲಾಯಿತು.
ಜನಜೀವನ, ಹಬ್ಬಗಳು ಮತ್ತು ಜನಪದ ಕಲೆಯ ಸೋರಣೆ
ಕಾರ್ಕಳದ ಸಂಸ್ಕೃತಿ ಕೇವಲ ದೃಶ್ಯಕಲಾವಿಲ್ಲ; ಅದು ಜೀವನದೊಳಗೇ ಮರುಳು ತನ್ನನ್ನು ಬೆಳೆಸಿಕೊಂಡಿದೆ. ಯಕ್ಷಗಾನದ ರಾತ್ರಿ ಪ್ರದರ್ಶನಗಳು, ಜನಪದ ಗೀತೆಗಳು, ಸ್ಥಳೀಯ ಪಾಡ್ದನಗಳು—ಇವುಗಳಲ್ಲಿ ಕಾರ್ಕಳದ ಜೀವಮಾನ ಚಿತ್ರಿತವಾಗಿದೆ. ಅತ್ತೂರ್ ಜಾತ್ರೆಯ ಉತ್ಸವಭಾವ, ಮಾರಿಯಮ್ಮ ಹಬ್ಬದ ಭಕ್ತಿ-ಭಾವನಾತ್ಮಕ ಪ್ರವಾಹ, ಚತುರ್ಮುಖ ಬಸದಿಯ ಶಾಂತತೆಯಲ್ಲಿ ದೊರಕುವ ಆధ్యಾತ್ಮಿಕ ಸಾಂತ್ವನ—ಎಲ್ಲವು ಈ ಊರಿನ ನಿರಂತರ ಜೀವಿಸು. ಪಾಡ್ದನಗಳು ಮತ್ತು ಕಥೆಗಳುinnar—ಜನರ ದೈನಂದಿನ ಬದುಕಿನ ನೇರ ಪ್ರತಿಬಿಂಬಗಳಾಗಿ ಮುಂದುವರಿಯುತ್ತವೆ.
ಕಾರ್ಕಳದ ಆಗಮನಕ್ಕೆ ಕರೆದೊಯ್ಯುವ ಆಮಂತ್ರಣ
ಕಾರ್ಕಳದ ಹೊಳೆಯುವ ಇತಿಹಾಸ, ಶಿಲ್ಪಕಲೆಯ ಘನತೆ, ಹಿತಚಿಂತನೆಗಳ ಸೌಹಾರ್ದ ಮತ್ತು ಪ್ರಕೃತಿಯ ಶುಚಿತ್ವ—ಇವು ಒಟ್ಟಿಗೆ ಸೇರಿ ಈ ಊರನ್ನು ಪ್ರವಾಸಿಗನಿಗೆ ಒಂದು ಆಳವಾದ ಅನುಭವವಾಗಿ ಬಿಂಬಿಸುತ್ತವೆ. ಇಲ್ಲಿ ನಿಮ್ಮ ಕಣ್ಣುಗಳು ಸುಂದರ ದೃಶ್ಯಗಳಿಗೆ ತೃಪ್ತಿಯಾಗುತ್ತವೆ; ನಿಮ್ಮ ಮನಸ್ಸು ಈ ನೆಲದ ಶಾಂತತೆಯೊಳಗೆ ತಳ್ಳಿ, ಕೇವಲ ವೀಕ್ಷಕನನ್ನಾಗಿ ಅಲ್ಲ, ಭಾಗಿಯಾಗುವವನು ಆಗಿ ಮರುಬಳೆಯುತ್ತದೆ. ಕಾರ್ಕಳಕ್ಕೆ ಹೊತ್ತು ಕಳೆದುಕೊಂಡು ಬರುವುದು—ಅದು ಫೋಟೋ ಸೆಶನ್ ಮಾತ್ರವಲ್ಲ; ಅದು ಕಾಲದೊಂದಿಗೆ ಸಂವಾದ, ಪುರಾತನರೊಂದಿಗೆ ಸಂಭಾಷಣೆ, ಮತ್ತು ಭಕ್ತಿಗಳಲ್ಲಿ ಮುಳುಗುವ ಒಂದು ಅನುಭವ.
ನಮ್ಮ ಸಂಸ್ಕ್ರತಿ.... ನಮ್ಮ ಹೆಮ್ಮೆ
ಜೈ ತುಳುನಾಡ್












Nys
ReplyDelete