ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ
ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ ನಮಸ್ಕಾರ, ನಮ್ಮೆಲ್ಲ ಓದುಗರಿಗೆ ಹೃತ್ಪೂರ್ವಕ ವಂದನೆಗಳು, ನಿಮ್ಮ ಅಪಾರ ಪ್ರೀತಿ ಹಾಗೂ ಬೆಂಬಲದಿಂದ ನಮಗೆ ಸದಾ ಶಕ್ತಿ ಮತ್ತು ಸ್ಪೂರ್ತಿ ದೊರೆಯುತ್ತಿದೆ. ಇಂತಹ ಬೆಂಬಲ ಸದಾ ಇರಲಿ ಎಂಬ ಆಶಯದೊಂದಿಗೆ, ಇಂದು ನಾವು ಕರ್ನಾಟಕದ ಕರಾವಳಿಯ ಹೃದಯ ಭಾಗದಲ್ಲಿರುವ ಒಂದು ಅಪರೂಪದ ಪ್ರವಾಸಿ ತಾಣ ಕಾರ್ಕಳದ ಬಗ್ಗೆ ಸಂಕ್ಷಿಪ್ತ ಯಾತ್ರೆ ಮಾಡೋಣ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿರುವ ಈ ನಗರವು ಪ್ರಕೃತಿ ಸೌಂದರ್ಯ, ಐತಿಹಾಸಿಕ ವೈಭವ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಬಸದಿಗಳು, ದೇವಾಲಯಗಳು, ಚರ್ಚುಗಳು, ಮಸೀದಿಗಳು — ಎಲ್ಲವನ್ನೂ ತನ್ನೊಳಗೆ ಹೊತ್ತಿರುವ ಸರ್ವಧರ್ಮ ಸೌಹಾರ್ದದ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. 1. ಕಾರ್ಕಳದ ಹೆಸರು ಮತ್ತು ಇತಿಹಾಸ ಹೊಳಪುಗಳು ಕಾರ್ಕಳದ ಬಸದಿ, ದೇವಾಸ್ಥಾನ, ಚರ್ಚ್, ಮಸೀದಿ, ಹೀಗೆ ಹಲವಾರು ಪುರಾತನ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಕಳೆಯಿರುವ ಅಪರೂಪದ ನಗರವೇ ಕಾರ್ಕಳ. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ತಾಲೂಕು ಕಾರ್ಕಳ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿದ್ದು, ಶತಮಾನಗಳ ಹಿಂದೆ ಜೈನರ ಆಳ್ವಿಕೆಯ ಕಾಲದಲ್ಲಿ "ಪಾಂಡ್ಯ ನಗರಿ" ಎಂದು ಕರೆಯಲಾಗುತ್ತಿತ್ತು. ಸುತ್ತ ಮುತ್ತಲಲ್ಲಿ ಹೆಚ್ಚಾಗಿ ಕಪ್ಪು ಬಂಡೆಗಳು ಕಂಡುಬರುವ ಕಾರಣದಿಂದಾಗಿ ಈ ಪ್ರದೇಶವನ್ನು ಹಿಂದೆ ಕರಿಕಲ್ಲು ಎಂದು ಕರೆಯಲಾಗುತ್ತಿತ್ತು. ತು...