"ಆಹಾ!! ಕರಾವಳಿ ಭಾಗದ ಆಹಾರ ರುಚಿ"

 "ಆಹಾ!! ಕರಾವಳಿ ಭಾಗದ ಆಹಾರ ರುಚಿ"

ತುಳುನಾಡು - ಕರ್ನಾಟಕದ ಕರಾವಳಿ ಭಾಗ, ಹಚ್ಚ ಹಸುರಿನ ಪ್ರಕೃತಿ ಸೊಬಗು, ಸಂಸ್ಕ್ರತಿಯ ಮತ್ತು ಭಾಷಾ ವೈವಿಧ್ಯತೆಯಿಂದ ಕೂಡಿದೆ, ನದಿಗಳು ಮತ್ತು ನೈಸರ್ಗಿಕ ಸಂಪತ್ತುಗಳು ಇಲ್ಲಿನ ಜನರ ಬದುಕಿನ ಭಾಗವಾಗಿದೆ. ಅದೇ ರೀತಿ ಆಹಾರ ರುಚಿಯಲ್ಲು ತುಳುನಾಡು ತನ್ನದೇ ಆದ ಗುರುತನ್ನು ಹೊಂದಿದೆ.  ಕರಾವಳಿ ಪ್ರದೇಶದ ಆಹಾರದ ರುಚಿ ಮನೆತನದ ಪರಂಪರೆಯ ಸುವಾಸನೆಯನ್ನು ಹೊತ್ತಿರುತ್ತದೆ. ಮಂಗಳೂರು ಮತ್ತು ಉಡುಪಿ ಪ್ರದೇಶಗಳ ಆಹಾರದಲ್ಲಿ ಸಮುದ್ರ ಆಹಾರವು ಪ್ರಮುಖ ಸ್ಥಾನದಲ್ಲಿದೆ. ಈ ಭಾಗದ ಜನರು, ತೆಂಗಿನ ಎಣ್ಣೆಯನ್ನು ಹೆಚ್ಚು ಬಳಸುತ್ತಾರೆ. ಉಡುಪಿ ಮತ್ತು ಮಂಗಳೂರಿನ ಅಡುಗೆ ಶೈಲಿ ಕರ್ನಾಟಕದ ಪ್ರಸಿದ್ದ ಕರಾವಳಿ ಆಹಾರ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ಒಂದೊಂದೇ ಆಹಾರದ ಬಗ್ಗೆ ರುಚಿಸೋಣ

ನೀರ್‌ ದೋಸೆ

ತುಳುನಾಡಿನ ಮನೆ ಮತ್ತು ಹೋಟೆಲ್‌ಗಳಲ್ಲಿ ವಿಶೇಷವಾಗಿ ಬೆಳಗಿನ ತಿಂಡಿಯ ಸಮಯದಲ್ಲಿ "ನೀರ್‌ ದೋಸೆ" ಮುಖ್ಯ ಸ್ಥಾನವನ್ನು ಹೊಂದಿದೆ. ಇದನ್ನು ಅಕ್ಕಿ, ಉಪ್ಪು, ಮತ್ತು ನೀರನ್ನು ಬಳಸಿಕೊಂಡು ಸುಲಭ ವಿಧಾನದಲ್ಲಿ ತಯಾರಿಸಲಾಗುತ್ತದೆ.  ಇದನ್ನು ಕಾಯಿ ಚಟ್ನಿ, ಬೆಲ್ಲದ ಹಾಲು, ಕೋರಿ ಗಸಿ, ಮೀನು ಸಾರಿನೊಂದಿಗೆ ಸವಿಯಲು ಅದ್ಬುತವಾಗಿರುತ್ತದೆ.

ಪತ್ರೋಡೆ  

 ತುಳುನಾಡಿನ ಸಾಂಪ್ರದಾಯಿಕ ಆರೋಗ್ಯಕರ ತಿಂಡಿ. ಇದನ್ನು ಅಕ್ಕಿ, ಕೆಸುವಿನ ಎಲೆ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ.  ಇದನ್ನು ಆಟಿ ತಿಂಗಳಿನ  ಮಳೆಯ ಕಾಲದಲ್ಲಿ ಹೆಚ್ಚು ತಯಾರಿಸುತ್ತಾರೆ. ಇದೊಂದು ತುಳುನಾಡಿನ ವಿಶೇಷ ತಿಂಡಿ.

ಕಡುಬು (ಪುಂಡಿ) 

ಈ ತಿಂಡಿಗೆ ತುಳುನಾಡಿನಲ್ಲಿ ಹೆಚ್ಚಿನ ಪ್ರಮುಖ್ಯತೆ ಇದೆ. ಇದನ್ನು ಬೆಳಗಿನ ಉಪಹಾರಕ್ಕೆ ತಯಾರಿಸಲಾಗುತ್ತದೆ. ಪ್ರಮುಖವಾಗಿ ದೈವಗಳಿಗೆ ಪುಂಡಿ ಮತ್ತು ಕೋರಿ ಗಸಿ ಆಹಾರವಾಗಿ ಅರ್ಪಿಸಲಾಗುತ್ತದೆ. ಹೀಗೆಯೇ ಬಹಳಷ್ಟು ವಿಶೇಷ ಸಂದರ್ಭಗಳಲ್ಲಿ ಕಡುಬನ್ನು ತಯಾರಿಸುತ್ತಾರೆ. ಇದು ಕೇವಲ ಅಕ್ಕಿ, ಉಪ್ಪು ಮತ್ತು ನೀರನ್ನು  ಬಳಸಿಕೊಂಡು ತಯಾರಿಸಲಾಗುತ್ತದೆ. 

ಕೊಟ್ಟೆ ಕಡುಬು, ಕೊಟ್ಟಿಗೆ, ಮೂಡೆ 

 ಈ ತಿಂಡಿಯನ್ನು ಹಲವಾರು ರೀತಿಯ ಹೆಸರಿನಲ್ಲಿ ಕರೆಯಲಾಗುತ್ತದೆ. ಇದು ತುಳುನಾಡಿನ ಪ್ರಸಿದ್ಧ ಸಾಂಪ್ರದಾಯಿಕ ತಿನಿಸು. ಈ ಮೂಡೆ, ಕೊಟ್ಟಿಗೆಯನ್ನು ಬಾಳೆ ಎಲೆ, ಹಲಸಿನ ಎಲೆ, ಹಾಗೂ ಮುಂಡೆವು ಒಲಿಯಲ್ಲಿ ಕಟ್ಟಿ ಹಿಟ್ಟು ತುಂಬಿಸಿ ಇಡ್ಲಿ ಸ್ಟೀಮ್‌ನಲ್ಲಿ ತಯಾರಿಸುತ್ತಾರೆ.  ಇದನ್ನು ವಿಶೇಷವಾಗಿ ಕೃಷ್ಣ ಜನ್ಮಅಷ್ಟಮಿಗೆ ಮಾಡಿದ  ಮೂಡೆಯನ್ನು ಗಣೇಶ ಚತುರ್ಥಿಯವರೆಗೆ ಉಪಯೋಗಿಸುವ ಸಾಂಪ್ರದಾಯವು ತುಳುನಾಡಿನಲ್ಲಿ ಇರುವುದು ವಿಶೇಷ.  

ಗೋಳಿ ಬಜೆ 

 ತುಳುನಾಡಿನಲ್ಲಿ ಇದು ಬಹಳಷ್ಟು ಜನಪ್ರಿಯವಾದ ತಿಂಡಿ. ಇದನ್ನು ಮುಖ್ಯವಾಗಿ ಮೈದ ಹಿಟ್ಟು, ಮೊಸರು, ಉಪ್ಪು, ನೀರು ಮಸಾಲೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಗೋಳಿಗಳಾಗಿ ಮಾಡಿಕೊಂಡು ಎಣ್ಣೆಯಲ್ಲಿ ದಪ್ಪಗೆ ಹುರಿಯಲಾಗುತ್ತದೆ. ಇದನ್ನು ಚಟ್ನಿಯೊಂದಿಗೆ ತಿನ್ನಲು ರುಚಿಕರ

ಅರಶಿಣ ಎಲೆ ಕಡುಬು 

ಇದನ್ನು "ಮಂಜಲ್‌ ಇರೆತ ಗಟ್ಟಿ" ಎಂದು ಕರೆಯಲಾಗುತ್ತದೆ. ಇದೊಂದು ಪಾರಂಪರಿಕ ಮತ್ತೆ ಮತ್ತೆ ತಿನ್ನಬೇಕೆನಿಸುವ ಸಿಹಿ ತಿನಿಸು. ಈ ಕಡುಬಿಗೆ ಅರಶಿನ ಎಲೆಯನ್ನು ಬಳಸುದರಿಂದ ವಿಶೇಷವಾದ ಸುಗಂಧ ಮತ್ತು ಅದ್ಬುತ ರುಚಿ ದೊರೆಯುತ್ತದೆ. ಸಮಾನ್ಯವಾಗಿ ಈ ತಿಂಡಿಯನ್ನು ನಾಗರ ಪಂಚಮಿಯಂದು ಮಾಡುವುದು ವಿಶೇಷ. ಅಕ್ಕಿ ಹಿಟ್ಟಿನ ಲೇಪನವನ್ನು ಎಲೆಗೆ ಹಚ್ಚಿ ಅದರ ಮೇಲೆ ಬೆಲ್ಲ ಮತ್ತು ತೆಂಗಿನಕಾಯಿಯ ಮಿಶ್ರಣವನ್ನು ಉದುರಿಸಿ ಇಡ್ಲಿ ಸ್ಟೀಮ್‌ನಲ್ಲಿ ತಯಾರಿಸಲಾಗುತ್ತದೆ.  

ಒತ್ತು ಶಾವಿಗೆ 

  ಈ ತಿಂಡಿಗೆ ತುಳುನಾಡಿನಲ್ಲಿ ವಿಶೇಷ ಸ್ಥಾನವಿದೆ.  ಇದನ್ನು ಮದುವೆ ಹಾಗೂ ಮುಂತಾದ ಕಾರ್ಯಕ್ರಮಗಳಲ್ಲಿ ಈ ಶಾವಿಗೆ ವಿಶೇಷ ಸ್ಥಾನ ಪಡೆದಿದೆ. ಇದನ್ನು ಕುಟುಂಬದವರ ಒಡನಾಟದ ಜೊತೆ ಶಾವಿಗೆಯನ್ನು ಒತ್ತುವುದೇ ಸಂತೋಷದ ಅನುಭವ. ಇಡ್ಲಿ ಸ್ಟೀಮ್‌ನಲ್ಲಿ ಮಾಡಿದಂತಹ ಕಡುಬನ್ನು ಶಾವಿಗೆ ಯಂತ್ರದಲ್ಲಿಟ್ಟು ಒತ್ತಲಾಗುತ್ತದೆ. ಇದನ್ನು ಕಾಯಿ ಹಾಲು, ಕೋಳಿ ಸಾರು, ಅಥವ ತರಕಾರಿ ಸಾಂಬರ್‌ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. 

ಒಡು ರೊಟ್ಟಿ 

ಈ ರೊಟ್ಟಿ ತುಳುನಾಡಿನ ಕಡೆ ಬೆಳಗಿನ ತಿಂಡಿಗೆ ತಯಾರಿಸುತ್ತರೆ. ಇದನ್ನು ಮೀನು ಸಾರು, ಕೋಳಿ ಸಾರು, ಚಟ್ನಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಇದನ್ನು ಒಡು ರೊಟ್ಟಿ, ಒಡುಪಾಲೆ, ಕಪ್ಪರೊಟ್ಟಿ ಎಂದು ಹಲವಾರು ಹೆಸರಿನಿಂದ ಕರೆಯುತ್ತಾರೆ.

ಬಂಗುಡೆ ಪುಳಿಮುಂಚಿ  

ಕಡಲ ತೀರದ ತುಳುನಾಡಿನ ಜನರಿಗೆ ಮೀನು ಊಟ ಎಂದರೆ ಸ್ವರ್ಗ. ಇದನ್ನು ಮನೆಗಳಲ್ಲಿ ಮಣ್ಣಿನ ಪಾತ್ರೆಯಲ್ಲಿ (ಬಿಸಲೆ) ಖಾರ, ಹುಳಿ, ಉಪ್ಪು ಸರಿಯಾದ ಮಸಾಲೆ ಮೀನಿಗೆ ಹಿರಿಕೊಳ್ಳುವಂತೆ ಈ ಪುಳಿಮುಂಚಿಯನ್ನು ತಯಾರಿಸುತ್ತಾರೆ. ಇದು ತುಳುನಾಡಿನ ಜನರಿಗೆ ಬಹಳ ಇಷ್ಟವಾದ ಪದಾರ್ಥ, ಕುಚ್ಚಲಕ್ಕಿ, ಅನ್ನದ ಜೊತೆಗೆ ಈ ಬಂಗುಡೆ ಪುಳಿಮುಂಚಿಯ ಅದ್ಬುತ ರುಚಿ ಆಹಾ! 

ಕೋರಿ ರೊಟ್ಟಿ 

 ಇದಂತು ಮಂಗಳೂರು ಉಡುಪಿಯಲ್ಲಿ ಬಹಳಷ್ಟು ಪ್ರಚಲಿತ, ರೊಟ್ಟಿ ಜೊತೆಗೆ ಚಿಕನ್‌ ಸಾಂಬಾರ್‌ ಬೆಸ್ಟ್‌ ಕಾಂಬಿನೇಷನ್‌! ಆದಿತ್ಯವಾರ ಎಲ್ಲಾರ ಮನೆಗಳಲ್ಲು "ಕೋರಿ ರೊಟ್ಟಿ"  ಮಾಮೂಲಿ. ಸಾಮಾನ್ಯವಾಗಿ ಕೋರಿ ರೊಟ್ಟಿ ಊರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಜ. 

ಫಿಶ್‌ ಫ್ರೈ 

 ಕರಾವಳಿ ಫಿಶ್‌ ಫ್ರೈ ಮಸಾಲೆ ಖಾರವಾಗಿ ರುಚಿಕರವಾಗಿರುತ್ತದೆ. ಈ ಮಸಾಲೆ ಉಪಯೋಗಿಸಿ ತಯಾರಿಸಿದ ಮೀನು ತುಳುನಾಡಿನ ಸಾಂಪ್ರದಾಯಿಕ ರುಚಿಯನ್ನು ನೀಡುತ್ತದೆ. ಮಂಗಳೂರು ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ "ಕರಾವಳಿ ಫಿಶ್‌ ಫ್ರೈ" ಸಾಮಾನ್ಯ.  ಫಿಶ್‌ ಫ್ರೈ ಪರಿಮಳವೇ ಊಟಕ್ಕೆ ಮೊದಲು ಬಾಯಲ್ಲಿ ನೀರೂರಿಸುತ್ತದೆ. 

ಒಣಮೀನಿನ ಚಟ್ನಿ 

 ತುಳುನಾಡಿನಲ್ಲಿ "ನುಂಗೆಲ್‌ ಮೀನ್‌ ಚಟ್ನಿ" ಬಹಳ ಫೇಮಸ್‌! ತೆಂಗಿನ ಕಾಯಿ ತುರಿಯ ಜೊತೆಗೆ ಮಾಸಾಲೆ ಪದಾರ್ಥಗಳನ್ನು ಸೇರಿಸಿ ಚಟ್ನಿ ಮಾಡಲಾಗುತ್ತದೆ. ಈ ಚಟ್ನಿಯೊಂದಿಗೆ  ಕುಚ್ಚಲಕ್ಕಿ ಗಂಜಿಯ ಕಾಂಬಿನೇಷನ್ ಮೀನುಪ್ರಿಯರಿಗೆ ಪರಮಾನಂದ!

ಮರುವಾಯಿ ಸುಕ್ಕ  

ಈ ಚಿಪ್ಪಿನ ಸುಕ್ಕ ತಿನ್ನಲು ಬಹಳ ರುಚಿಯಾಗಿರುತ್ತದೆ. ಇದು ಮಂಗಳೂರು ಹೋಟೆಲ್‌ಗಳಲ್ಲಿ ಫೆಮಸ್‌ ಡಿಶ್‌! ಒಣ ಮಸಾಲೆ ಮಿಶ್ರಣ, ತೆಂಗಿನಕಾಯಿ ತುರಿ, ತೆಂಗಿನ ಎಣ್ಣೆ ಘಮ ಅದ್ಬುತ. ಬಿಸಿ ಬಿಸಿ ಅನ್ನದ ಜೊತೆ ರುಚಿಯಾಗಿರುತ್ತದೆ.

 

ಕ್ರಾಬ್‌ ಸುಕ್ಕ  ( ಏಡಿ ಸುಕ್ಕ) 

ಕಡಲ ತೀರದ ಹೋಟೆಲ್‌ಗಳಲ್ಲಿ ಕ್ರಾಬ್‌ ಸುಕ್ಕ ಬಹಳ ಜನಪ್ರಿಯ ಆಹಾರವಾಗಿದೆ. ಬೋಲ್ಡ್‌ ರೈಸ್‌ ಜೊತೆ ಕ್ರಾಬ್‌ ಸುಕ್ಕ ತಿನ್ನುವುದು ವಿಶೇಷ ಅನುಭವ. ಒಮ್ಮೆ ತಿಂದರೆ ಅದರ ರುಚಿ ಮರೆಯಲಾಗದು. 

ಪ್ರೋನ್ಸ್‌ ಗೀ ರೋಸ್ಟ್‌ (ಎಟ್ಟಿ ಗಸಿ) 

 ಈ ಡಿಶ್‌ ಖಾರದ ಮಸಾಲೆಯ ರುಚಿಯೊಂದಿಗೆ ಅದ್ಬುತವಾಗಿರುತ್ತದೆ. ಪ್ರೋನ್ಸ್‌ ಮಸಾಲೆಯನ್ನು ತುಪ್ಪದಲ್ಲಿ ರೋಸ್ಟ್‌ ಮಾಡಿದ ಪರಿಮಳದಲ್ಲೆ ಮನ ಸೆಳೆಯುತ್ತದೆ. ಬಿಸಿ ಬಿಸಿ ಅನ್ನದ ಜೊತೆಗೆ  "ಪ್ರೋನ್ಸ್‌ ಗೀ ರೋಸ್ಟ್‌" ಊಟ ಅದ್ಬುತ. ಇದು ಸ್ಥಳೀಯರಿಗಷ್ಟೆ ಅಲ್ಲ, ಪ್ರವಾಸಿಗರಿಗೂ ಫೇವರೆಟ್‌.

ಹಲಸಿನ ಕಡುಬು (ಪೆಲಕಾಯಿದ ಗಟ್ಟಿ) 

ತುಳುನಾಡಿನ ಜನರು ಹಲಸಿನ ಹಣ್ಣು ಉಪಯೋಗಿಸಿಕೊಂಡು ಹಲವಾರು ವಿಧದ ತಿನಸುಗಳನ್ನು ತಯಾರಿಸುತ್ತಾರೆ. ಅದರಲ್ಲಿ  ಹಲಸಿನ ಕಡುಬು ಒಂದು ವಿಶೇಷ ತಿಂಡಿ. ತೆಕ್ಕಿ ಎಲೆಯಲ್ಲಿ ಹಲಸಿನ ಹಣ್ಣಿನ ಮಿಶ್ರಣದ ಹಿಟ್ಟನ್ನು ತುಂಬಿ, ಎಲೆಯಲ್ಲಿ ಮಡಚಿ "ಇಡ್ಲಿ ಸ್ಟೀಮ್‌"ನಲ್ಲಿ ತಯಾರಿಸಲಾಗುತ್ತದೆ. ತೆಕ್ಕಿ ಎಲೆಯನ್ನು ಬಳಸುದರಿಂದ ಬಣ್ಣ ಹಾಗೂ ರುಚಿಯೊಂದಿಗೆ ಅದ್ಬುತ ಪರಿಮಳವಿರುತ್ತದೆ. ಇದನ್ನು ಜೇನುತುಪ್ಪಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

 ಬಾಳೆ ಎಲೆ ಕಡುಬು  

ಇದು ಸಾಮಾನ್ಯವಾಗಿ ತುಳುನಾಡಿನಲ್ಲಿ ಎಲ್ಲರ ಮನೆಯಲ್ಲು ತಯಾರಿಸುತ್ತಾರೆ. ಇದನ್ನು ಅಕ್ಕಿ, ಉಪ್ಪು, ನೀರು ಬಳಸಿ ಹಿಟ್ಟನ್ನು ತಯಾರಿಸುಲಾಗುತ್ತದೆ. ವಿಶೇಷವಾಗಿ ಬಾಳೆ ಎಲೆಯನ್ನು ಬಾಡಿಸಿ ಹಿಟ್ಟನ್ನು ಎಲೆಯಲ್ಲಿ ಮಡಚಿ "ಇಡ್ಲಿ ಸ್ಟೀಮ್‌"ನಲ್ಲಿ ಬೇಯಿಸಲಾಗುತ್ತದೆ. ಇದನ್ನು ವಿಶೇಷವಾಗಿ ಕೆಲವು ಮನೆಗಳಲ್ಲಿ ತಿಂಗಳ ಅಮವಾಸ್ಯೆ ದಿನ ರಾತ್ರಿ ವೇಳೆ  ಬೊಬ್ಬರ್ಯ ಸೇವೆಗೆ ಈ ಕಡುಬನ್ನು ಮೀನು ಸಾರಿನ ಜೊತೆಗೆ ಅರ್ಪಿಸಲಾಗುತ್ತದೆ. ಇದು ಚಟ್ನಿ, ಜೇನು ತುಪ್ಪ, ಕೋಳಿ ಸಾರು, ಮೀನು ಸಾರಿನೊಂದಿಗೆ ಸವಿಯಲು ರುಚಿಕರ.   

ಪಡ್ಡು (ಅಪ್ಪದಡ್ಡೆ) 

 ಇದನ್ನು ಮಕ್ಕಳು ತುಂಬಾ ಇಷ್ಟ ಪಡುವ ತಿಂಡಿ, ಇದು ತಿನ್ನಲು ಮೃದುವಾಗಿ ಸಿಹಿಯಾಗಿರುತ್ತದೆ. ಇದರ ಹಿಟ್ಟನ್ನು ಹಿಂದಿನ ದಿನ ರಾತ್ರಿಯೇ ತಯಾರಿಸುತ್ತಾರೆ,  ಇದನ್ನು ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ. 

ಒಂದೆಲೆ ಸೊಪ್ಪು ಚಟ್ನಿ (ತಿಮರೆ ಚಟ್ನಿ) 

 ಈ ಚಟ್ನಿ ತುಳುನಾಡಿನಲ್ಲಿ ಬಹಳ ಜನಪ್ರೀಯ. ತಿಮರೆ ಎಲೆಯೊಂದಿಗೆ ಕಾಯಿಮೆಣಸು, ಮತ್ತು ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿ ಚಟ್ನಿ ತಯಾರಿಸುತ್ತಾರೆ. ಬಿಸಿ ಬಿಸಿ ಗಂಜಿಯೊಂದಿಗೆ ಊಟ ಮಾಡುವ ಅನುಭವವೇ ಅದ್ಬುತ.

ಸಮುದ್ರ ತೀರದ ಕರಾವಳಿಯ ಆಹಾರ ಪೌಷ್ಟಿಕತೆ ಮತ್ತು ರುಚಿಯಲ್ಲಿ ಪ್ರಸಿದ್ಧ. ಇಲ್ಲಿ ಸಾಮಾನ್ಯವಾಗಿ ತೆಂಗಿನ ಹಾಲು, ತೆಂಗಿನ ತುರಿ, ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುತ್ತರೆ. ಕರಾವಳಿ ಆಹಾರದ ಮುಖ್ಯ ವೈಶಿಷ್ಟ್ಯವೆಂದರೆ ತಾಜಾ ಮಸಾಲೆಯ ಬಳಕೆ. ಇದು ಆಹಾರಕ್ಕೆ ಅಚ್ಚುಕಟ್ಟಾದ ರುಚಿ, ಸಗಂಧ, ಮತ್ತು ಆರೋಗ್ಯ ನೀಡುತ್ತದೆ. ಪ್ರವಾಸಿಗರಿಗೆ ಇಲ್ಲಿ ಸಿಗುವ ತಿನಿಸುಗಳು ಎಲ್ಲೆಡೆ ಸಿಗುವುದಿಲ್ಲ, ರುಚಿಯಲ್ಲಿ ಮಂಗಳೂರು ಉಡುಪಿಯ ಆಹಾರ ಹೊಸ ಅನುಭವವನ್ನು ಕೊಡುತ್ತದೆ. ಯಾವ ಜಿಲ್ಲೆಗಳಿಗೆ ಹೋದರು ಮಂಗಳೂರು ಹೋಟೆಲ್‌, ಉಡುಪಿ ಹೊಟೆಲ್‌ , ಎಂಬ ಹೆಸರನ್ನು ನಾವು ಕಾಣಬಹುದು. 

ನಮ್ಮ ಸಂಸ್ಕ್ರತಿ ನಮ್ಮ ಹೆಮ್ಮೆ

ಜೈ ತುಳುನಾಡ್


Comments

Post a Comment

Popular posts from this blog

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"