ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

ಕಾರ್ಕಳ ಎಕ್ಸ್ಪ್ರೆಸ್  “ಮುಕೇಶ”
  
ನಮಸ್ಕಾರ, 

ನಮ್ಮೆಲ್ಲ ಪ್ರೀತಿಯ ಓದುಗರಿಗೆ ನಾವು ಮಾಡುವ ಹೃದಯ ತುಂಬಿ ನಮಸ್ಕಾರ, ನಿಮ್ಮ ಪ್ರೀತಿ, ಬೆಂಬಲವು ನಮ್ಮ ಬರವಣಿಗೆಗೆ ಶಕ್ತಿ.  ಇಂದು ನಾವು ನಿಮ್ಮ ಮುಂದೆ  ಪರಿಚಯಿಸುವುದು ಕಂಬಳ ಕ್ಷೇತ್ರದ ಇನ್ನೊಬ್ಬ ಅದ್ಬುತ ಸಾಧಕ, ವೇಗದ ಓಟದಲ್ಲಿ ತನ್ನದೇ ಆದ ಛಪನ್ನು ಮೂಡಿಸಿದ ಸೌಮ್ಯ ಸ್ವಭಾವದಿಂದ ಸಾವಿರಾರು ಕಂಬಳಾಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ನೆನಪಾಗಿ ಉಳಿದಿರುವ  ಕಾರ್ಕಳದ ಜೀವಂಧರ್‌ ಅಡ್ಯಾಂತಾಯರ ಪ್ರೀತಿಯ ಕೋಣ “ಮುಕೇಶ”. ಬಿಸಿಲಿನ ಗದ್ದೆಯ ಹೊಳಪಿಗೆ ಜೀವ ತುಂಬಿದಂತೆ ಮುಕೇಶನ ಓಟ, ಅವನ ಓಟವೆಂದರೆ...ಕೇವಲ ಓಟವಲ್ಲ- ಅದು ಪ್ರತಿ ಪ್ರೇಕ್ಷಕನಿಗೆ ಉಸಿರು ಗಟ್ಟಿಸುವ ಕ್ಷಣ. ಆ ದೃಶ್ಯ ಕುತೂಹಲದ ನೋಟವಾಗಿ ಬದಲಾಗುತ್ತಿತ್ತು. "ಕಾರ್ಕಳದ ಮುತ್ತು"- "ಕಾರ್ಕಳ ಎಕ್ಸ್ ಪ್ರೆಸ್"ಎಂದು ಅಭಿಮಾನಿಗಳಿಂದ ಹೆಸರಿಸಲ್ಪಟ್ಟ "ಮುಕೇಶ" ಅನೇಕ ಬಾರೀ ಪ್ರಶಸ್ತಿಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡು ಯಜಮಾನರ ಹೆಸರಿಗೆ ಗೌರವ ಕಿರೀಟವನ್ನೊಪ್ಪಿಸಿದ್ದಾನೆ. ಅವನ ಪಾದಸ್ಪರ್ಶವಿಲ್ಲದ ಗದ್ದೆಯಾದರೂ ಸಹ ಅವನನ್ನು ಮರೆತವರಿಲ್ಲ.  ಆಟೋಗಳ ಹಿಂಭಾಗದಲ್ಲಿ , ಬಸ್ಸುಗಳ ಬ್ಯಾನರ್‌ಗಳಲ್ಲಿ , ಹಲವು ಜನರ ಮೊಬೈಲ್‌ ವಾಲ್ಪೇಪರ್ನಲ್ಲಿ ಅವನ ಭಾವ ಚಿತ್ರ ಇನ್ನು ಮಿಂಚುತ್ತಿದೆ. 

ಒಮ್ಮೆ ಬೆಂಗಳೂರಿಗೆ ಭೇಟಿ ನೀಡಿದಾಗ, ಊಟಕೆಂದು ತೆರಳಿದ್ದ ಒಂದು ಹೊಟೇಲ್‌ನ ಗೋಡೆಯ ಮೇಲೆ ಮಿಂಚುತ್ತಿದ್ದ ಎರಡು ಮುಖಗಳು ನನ್ನ ಗಮನ ಸೆಳೆಯಿತು - "ಮುಕೇಶ" ಮತ್ತು ತಡಂಬೈಲ್‌ ಕುಟ್ಟಿಯ ಭಾವ ಚಿತ್ರ ಕಂಡು ಹೆಮ್ಮೆ ಮತ್ತು ಸಂತೋಷವಾಯಿತು. ಕಂಬಳ ನೆಲದಿಂದ ನೂರಾರು ಕಿಲೋಮೀಟರ್‌ ದೂರದ ನಗರದಲ್ಲೂ ಸಹ  ಜನರ ಅಭಿಮಾನವನ್ನು ನೋಡಿ, ಇದು ಕೇವಲ ಕಂಬಳದ ಗೆಲುವಲ್ಲ... ಜನಮನ ಗೆದ್ದ ವಿಜಯದ ಸಂಕೇತವೆನಿಸಿತು.  "ಮುಕೇಶ"ನ ಓಟವನ್ನು ಯುಟ್ಯೂಬ್‌ ಲೈವ್‌ನಲ್ಲಿ ನೋಡಲು, ರಾತ್ರಿ 2-3 ಗಂಟೆಯಾಗಿದ್ರು ಮಲಗದೆ ಸ್ನೇಹಿತರೊಂದಿಗೆ ಕಾಯುತ್ತಿದ್ದ ಕ್ಷಣಗಳು ನೆನಪಾಗುತ್ತದೆ. ಆ ಅದ್ಬುತ ಓಟದ ಪ್ರತಿ ಗೆಲುವು ನಮ್ಮ ಹೃದಯದಲ್ಲಿ ಸಂಭ್ರಮ ಮೂಡಿಸುತ್ತಿತ್ತು.

ಕಂಬಳವು ಕೇವಲ ಮನೋರಂಜನೆಯ ಕ್ರೀಡೆಯಷ್ಟೆ ಅಲ್ಲ,  ಕರಾವಳಿ ಜನರ ಭಾವನೆಗಳಿಗೆ ಆಳವಾಗಿ ಬೆಸೆದುಕೊಂಡಿರುವ ಸಂಸ್ಕ್ರತಿಯ ಭಾಗವಾಗಿದೆ. ಇಲ್ಲಿ ಕಂಬಳದ ಕೋಣವನ್ನು ಮನೆ ಮಗನಂತೆ ಸಾಕಿ, ಸೆಲೆಬ್ರಿಟಿಯಂತೆ ಪ್ರೀತಿಸುವ ಜನರನ್ನು ನಾವು ಕಾಣಬಹುದು. ಕಾರ್ಕಳ ಭಾಗದಲ್ಲಿ ಅನೇಕ ಪ್ರಸಿದ್ಧ ಕಂಬಳ ಕೋಣಗಳಿದ್ದರು, ಎಲ್ಲಾರಿಗೂ ಚಿರಪರಿಚಿತವಾಗಿದ್ದ ಕೋಣ ಎಂದರೆ ಅದು "ಮುಕೇಶ". ಅಭಿಮಾನಿಗಳ ಹೃದಯ ಗೆದ್ದ ಕಂಬಳದ ಮೊದಲ ಸೂಪರ್ ಸ್ಟಾರ್ ಕೋಣ ಎಂದು "ಮುಕೇಶ"ನನ್ನು ಗುರುತಿಸುತ್ತಾರೆ.

"ಕಾರ್ಕಳ ಜೀವಂದಾಸ್ ಅಡ್ಯಾಂತಾಯೆರ್‌ನ  ಬಳ್ಳುದ ಮಲ್ಲ ಎರ್ಲು..!"- ಎಂಬ ಕಂಬಳದ ಕಮೆಂಟ್ರಿ ಘೋಷಣೆ ಕೇಳಿದ ಕ್ಷಣಕ್ಕೆ ಅಂಗಡಿಗಳ ವ್ಯಾಪಾರವೆಲ್ಲ ಮರೆಯಾಗಿ, ಪ್ರತಿಯೊಬ್ಬರೂ ಕಂಬಳದ ಗದ್ದೆಯತ್ತ ಮುಕೇಶನ  ಓಟದ ಕಡೆ ಬರುವ ಜನ ಸಾಗರ - ಪ್ರತಿ ಮುಖದಲ್ಲೂ ಕಾತುರದ ತೀವ್ರತೆ..! ಕೋಟದ ಜಾನುವಾರು ಪೈರಿನಿಂದ ಜೀವನ್ ದಾಸ್ ಅಡ್ಯಾಂತಾಯರ ಆತ್ಮೀಯ ಮಿತ್ರರಾದ ಕರುಣಾಕರ ಶೆಟ್ಟಿಯವರು ಆಯ್ಕೆ ಮಾಡಿ ಅಡ್ಯಾಂತಯಾರಾ ಹಟ್ಟಿಗೆ ತಂದರು. ಕಂಬಳ ಕೋಣದ ಎಲ್ಲಾ ಲಕ್ಷಣವನ್ನು ಮುಕೇಶ ಹೊಂದಿದ್ದ.

ಉದ್ದದ ಕುತ್ತಿಗೆ, ಅಗಲ ಎದೆ - ಕಂಬಳ ಕೋಣನಲ್ಲಿರಬೇಕಾದ ಎಲ್ಲಾ ಲಕ್ಷಣಗಳು "ಮುಕೇಶ"ನಲ್ಲಿದ್ದವು. ಅವನ ರೂಪ ನಿಜಕ್ಕೂ ಅತ್ಯಂತ ಸುಂದರವಾಗಿತ್ತು. ಆದರೆ ಮೂಗಿಗೆ ಹಗ್ಗ ಹಾಕುವ ಸಂದರ್ಭದಲ್ಲಿ ನಡೆದ ಒಂದು ಎಡವಟ್ಟಿನಿಂದಾಗಿ ಮೂಗಿನ ಹೊಳ್ಳೆ ಹರಿದು ತುಸು  ದೊಡ್ಡದಾಗಿತ್ತು. ಅದೇ ಕಾರಣದಿಂದಾಗಿ ಅವನಿಗೆ “ಮುಕೇಶ “ ಎಂಬ ಹೆಸರು ನೀಡಲಾಯಿತು. ಮುದ್ದಾಗಿ, ವಿಭಿನ್ನವಾದ ಆಕರ್ಷಣೆ ಹೊಂದಿದ್ದಾನೆ. ಮೂಲ್ಕಿಯ ಕಂಬಳದಲ್ಲಿ "ಮುಕೇಶ"ನನ್ನು ಮೀರಿಸುವವರು ಇರಲಿಲ್ಲ. "ಮೂಲ್ಕಿ ಎಂದರೆ ಮುಕೇಶ" ಎಂಬ ಮಾತು ಜನಮಟ್ಟದಲ್ಲಿ ಪ್ರಚಲಿತವಾಗಿತ್ತು. ಅವನ ಓಟ,  ಶಕ್ತಿ, ಸಾಧನೆ , ಎಲ್ಲವೂ ಕಂಬಳದ ಇತಿಹಾಸದಲ್ಲಿ ಒಂದು ಅಧ್ಯಾಯವಾಗಿ ಉಳಿಯುವಂತದ್ದು. "ಮುಕೇಶ" ಸತತವಾಗಿ ಸುಮಾರು  ಏಳು ವರ್ಷ ನಿರಂತರ ಹಗ್ಗ ಹಿರಿಯ ವಿಭಾಗದಲ್ಲಿ ಬಹುಮಾನ ಪಡೆದುಕೊಂಡ ಕೋಣ, ತಡಂಬೈಲ್ ಕುಟ್ಟಿಯೊಂದಿಗೆ ಮುಕೇಶನ ಸಾಧನೆ ಅಪಾರ. ಈ ಜೋಡಿಯನ್ನು ಒಂದು ವರ್ಷದಲ್ಲಿ ಸುಮಾರು 13 ಜನ ಓಡಿಸಿದ್ದಾರೆ. ತಡಂಬೈಲ್ ಕುಟ್ಟಿಯ ತಾಳ ಮೇಳಕ್ಕೆ, ಮುಕೇಶನ ತಾಳ ಬದಲಾಗದೆ ಓಡಿದನು, ಅವುಗಳ ಓಟ ಕೇವಲ ಓಟವಲ್ಲ, ಅದು ಮಿಂಚಿನ ಸ್ಪರ್ಧೆಯಾಗಿತ್ತು. 

ಬೇಸರದ ಸಂಗತಿಯೆಂದರೆ ಅಷ್ಟೊಂದು ಹೆಸರು, ಮತ್ತು ಕೀರ್ತಿಗಳಿಸಿದ್ದ ಮುಕೇಶನ ಜೋಡಿಗಾರ ತಡಂಬೈಲ್ ಕುಟ್ಟಿ ನಮ್ಮ ನೆನಪಿನಲ್ಲಿ ಮಾತ್ರ ಜೀವಂತವಾಗಿದ್ದಾನೆ. ಅವನು ಕಂಬಳ ಕೂಟವನ್ನಗಲಿ ಹಲವು ವರ್ಷಗಳೇ ಕಳೆದಿವೆ..! ಕಂಬಳ ಗದ್ದೆಯಲ್ಲಿ ಆ ಜೋಡಿಯ ಹೆಜ್ಜೆ ಗುರುತುಗಳು ಇಂದಿಗೂ ನೆನಪಿನ ಹೊಳಪಾಗಿ ಉಳಿದಿವೆ. ಕಾರ್ಕಳದ ರಾಜನೊಂದಿಗೆ ಮುಕೇಶ ಅನೇಕ ಬಹುಮಾನವನ್ನು ಗೆದ್ದು ಹೆಸರು ಮಾಡಿದ್ದಾನೆ.  ಕೇರ್ವಶೆಯ ಅರುಣ್ ಕುಮಾರ್ ಜೈನ್, ಅಲೆವೂರು ತೆಂಕು ಮನೆ ರಾಘು ಶೆಟ್ರು , ತಡಂಬೈಲ್ ನಾಗೇಶ್ ದೇವಾಡಿಗ ,ಕಾರ್ಕಳ ಜೀವನ್ ದಾಸ್ ಅಡ್ಯಾಂತಯಾರು, ಪದವು ಕನಡ್ಕ ಪ್ರಾಂನ್ಸಿಸ್ ಪ್ಲೇವಿ ಡೆಸೋಜ, ಮಾಳ ಆನಂದ ನಿಲಯ ಹೀಗೆ ಹಲವು ಜನರಿಗೆ ಪ್ರಶಸ್ತಿ ತಂದು ಕೊಟ್ಟಿದೆ. ಪದವು ಕನಡ್ಕ ದೂಜಾನೊಂದಿಗೆ ಮುಕೇಶನನ್ನು ಜೋಡಿ ಮಾಡಿದ ಸಂದರ್ಭದಲ್ಲಿ, ಅದರ ಸುದ್ದಿಯೇ ಪ್ರೇಕ್ಷಕರಲ್ಲಿ ಕಾತುರ ಹುಟ್ಟಿಸಿತ್ತು.  ನಂದಳಿಕೆ ಶ್ರೀಕಾಂತ್ ಭಟ್ರ ಪಾಂಡುನೊಂದಿಗೆ ಜತೆ ಮಾಡಿ ಬಹುಮಾನ ಪಡೆದುಕೊಂಡಿದೆ. ದೂಜ -ಮುಕೇಶ, ತಾಟೆ -ಮುಕೇಶ, ರಾಜೇ -ಮುಕೇಶ, ಪಾಂಡು -ಮುಕೇಶ ,ಮಿಜಾರು ಅಪ್ಪು -ಮುಕೇಶ ,ತಡಂಬೈಲ್ ಕುಟ್ಟಿ -ಮುಕೇಶ ,ಈ ಜೋಡಿಯೊಂದಿಗೆ "ಮುಕೇಶ" ಓಡುವ ದೃಶ್ಯವೇ ಏನೋ ವಿಶೇಷ ವಾತಾವರಣವನ್ನೆ ಮೂಡಿಸುತ್ತಿತ್ತು..!

ನಂದಳಿಕೆ ಶ್ರೀಕಾಂತ್ ಭಟ್ರು -  ಕಂಬಳ ಕ್ಷೇತ್ರದಲ್ಲಿ ಬಹುಮಾನ ಗಳಿಸಿದ ಜನಪ್ರೀಯ ಕೋಣಗಳ ಯಜಮಾನರು, ಒಂದು ಬಾರಿ ಪತ್ರಿಕಾಗೋಷ್ಠಿಯಲ್ಲಿ "ಮುಕೇಶ"ನ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಮಾತನಾಡಿದರು. ಅವರ ಮಾತುಗಳು ಇಂದು ಕೂಡ ಕಂಬಳಭಿಮಾನಿಗಳ ನೆನಪಿನಲ್ಲಿ ಉಳಿದಿದೆ. ನನ್ನ ಮನೆಯ ಕೋಣಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು, ಸಹ ನಾನು ಮುಕೇಶನ ಓಟವನ್ನೆ ಕಣ್ತುಂಬಿಕೊಳ್ಳುತ್ತೆನೆ,  ಎಂದೂ ಮುಕೇಶನನ್ನು ಹಾಡಿ ಹೊಗಳಿದ್ದಾರೆ. ಮೂಲ್ಕಿ ಅರಸು ಕಂಬಳದಲ್ಲಿ ಮುಕೇಶ ತನ್ನದೇ ಆದ ಇತಿಹಾಸ ನಿರ್ಮಿಸಿದ್ದಾನೆ. ಏಳು ವರ್ಷ ನಿರಂತರ ಬಹುಮಾನ ಪಡೆದುಕೊಂಡಿದ್ದಾನೆ. ಒಂದು ಬಾರಿ ಹಗ್ಗ ಹಿರಿಯ ಫೈನಲ್ನಲ್ಲಿ ಕೊಳಕೆ ಇರ್ವತ್ತೂರ್ ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಮತ್ತು ಜೀವನ್ದರ್ ಅಡ್ಯಾಂತಯಾರ ಮುಕೇಶ ಮೂರೂ ಬಾರಿ ಸಮ -ಸಮಬಲ ಸಾಧಿಸಿದವು. ನಂತರ ಕಂಬಳದ ನಿಯಮದ ಪ್ರಕಾರ ಕರೆ ಆದಲು ಬದಲು ಮಾಡುವ ಕ್ರಮದಲ್ಲಿ ಬಹುಮಾನ ಪಡೆದುಕೊಂಡನು. 

ಮುಕೇಶನ ಓಟಗಳಲ್ಲಿ ಕೆಲವು ಕ್ಷಣಗಳು - ನಾವೆಂದೂ ಮರೆಯಲಾಗದು. ಓಡಿಸುವಾತ ಬಿದ್ದರು ಅದೆಷ್ಟೋ ಬಾರಿ ಮುಕೇಶ ಗುರಿಮುಟ್ಟಿದಾನೆ. ಇದೆಲ್ಲ ನೆನಪಿಸಿಕೊಳ್ಳುವಾಗ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ. ಈಗ ಕಂಬಳ ಕೂಟದಲ್ಲಿ "ಮುಕೇಶ"  ಕಾಣಸಿಗುವುದು ಅಪರೂಪ. ಆದರೂ ಅವನ ಬಗ್ಗೆ ಕೇಳುವ ಮಾತು, ಅವನ ಓಟದ ನೆನಪು, ಅವನ ಹೆಸರು ಕೂಗುವ ಹಳೇ ಅಭಿಮಾನಿಗಳನ್ನು ಕಂಬಳ ಕೂಟದಲ್ಲಿ ಕಾಣಬಹುದು. ಕೆಲವು ವರ್ಷದ ಹಿಂದೆ, ಕೇವಲ "ಮುಕೇಶ"ನ ಓಟವನ್ನೆ ನೋಡುವ ಆಶಯದಿಂದ ಕಂಬಳದ ಕಡೆಗೆ ಹೆಜ್ಜೆ ಹಾಕಿದ ನಮ್ಮ ನೆನಪಿನ ದಿನಗಳು ಮರುಕಳಿಸುತ್ತಿವೆ..!  ಏನೆ ಆದರೂ "ಮುಕೇಶ ಕಾರ್ಲದ ಮುತ್ತು - ಕಂಬಳದ ಮೊದಲ ಸೂಪರ್ ಸ್ಟಾರ್" ಮುಕೇಶನ ಆಗಮನಕ್ಕೆ ನೂರಾರು ಅಭಿಮಾನಿಗಳು ಕಾದು ಕುಳಿತಿದ್ದಾರೆ.  ಹಳೆಯ ಓಟವನ್ನು ಮೊಬೈಲ್ನಲ್ಲಿ ನೋಡಿ ಆನಂದ ಪಡುವವರಿದ್ದಾರೆ.  ಮತ್ತೊಮ್ಮೆ ನೀನು ಕಂಬಳದ ಗದ್ದೆಗೆ ಕಾಲಿಡಬೇಕು... ಜನರು ತಮ್ಮ ಉಸಿರು ಮರೆತು ಕಾದು ನಿಲ್ಲಬೇಕು "ಕಂಬಳ ಕೂಟದಲ್ಲಿ ನಿನ್ನನ್ನು ನೇರವಾಗಿ ನೋಡುವ ಭಾಗ್ಯ ನಮ್ಮದಾಗಲಿ...!" 
  

"ಜೈ ಕಂಬಳ"

ನಮ್ಮ ಸಂಸ್ಕೃತಿ....ನಮ್ಮ ಹೆಮ್ಮೆ 
ಜೈ ತುಳುನಾಡ್ 




Comments

  1. ಬಾರಿ ಪೊರ್ಲುದ ಪಾತೆರ ❤️

    ReplyDelete
  2. ಮುಕೇಶ ❤️

    ReplyDelete
  3. ❤️❤️❤️

    ReplyDelete
  4. ಮುಕೇಶ 💛

    ReplyDelete
  5. Abhimanilena saradhare ..👑🥰🔥♥️

    ReplyDelete
  6. Mukesha abhimanigala saradara

    ReplyDelete
  7. ನಮ್ಮ ಬರಹವನ್ನು ಮೆಚ್ಚಿ ಕಾಮೆಂಟ್ ಮಾಡಿ ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು♥️🙏🏻

    ReplyDelete
  8. ಮುಕೇಶ ❤️

    ReplyDelete
  9. ಜೈ ಮುಕೇಶ 😍

    ReplyDelete
  10. ಮಸ್ತ್ ಲಾಯ್ಕ್ ಅತ್ನ್ಡ್ ❤️😍mukesha❤️

    ReplyDelete

Post a Comment

Popular posts from this blog

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ