"ಪೌರಾಣಿಕ ಕಥೆಗಳ ಜೀವಂತ ರೂಪ- ಯಕ್ಷಗಾನ"
"ಪೌರಾಣಿಕ ಕಥೆಗಳ ಜೀವಂತ ರೂಪ- ಯಕ್ಷಗಾನ" ನಮಸ್ಕಾರ, 1. ಕರ್ನಾಟಕದ ಪ್ರಸಿದ್ದವಾದ ಜಾನಪದ ಕಲೆ ಯಕ್ಷಗಾನವು ಕರ್ನಾಟಕದ ಪ್ರಸಿದ್ದವಾದ ಜಾನಪದ ಕಲೆಯೊಂದಾಗಿದೆ. ಇದು ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕುಂದಾಪುರ ಭಾಗಗಳಲ್ಲಿ ಹಿಚ್ಚಿನ ಪ್ರಸಿದ್ದಿಯನ್ನು ಪಡೆದಿದೆ. "ಯಕ್ಷ" ಎಂದರೆ ಪರಮಶಕ್ತಿಯ ಪ್ರತಿನಿಧಿ, ಗಾನ ಎಂದರೆ ಹಾಡು. ಈ ಕಲೆಯು ನಾಟಕ, ಸಂಗೀತ, ವೇಷಭೂಷಣ, ನೃತ್ಯ ಎಲ್ಲವೂ ಒಳಗೊಂಡಿರುವ ಒಂದು ಸಮಗ್ರ ಕಲಾರೂಪವಾಗಿದೆ. ಯಕ್ಷಗಾನವು ಸಾಮಾನ್ಯ ನಾಟಕವಲ್ಲ, ಇದು ಜನಸಾಮಾನ್ಯರ ಭಕ್ತಿ, ಭಾವನೆ, ಸಂಸ್ಕ್ರತಿ ಮತ್ತು ಮನರಂಜನೆಗಳ ಸಂಕಲನ. ಹಳ್ಳಿಗಳಲ್ಲಿ ದೇವರ ಜಾತ್ರೆ, ದೇಗುಲೋತ್ಸವ, ದೈವಾರಾಧನೆಗಳ ಸಮಯದಲ್ಲಿ ದಿನಪೂರ್ತಿ ನಡೆಯುವ ಯಕ್ಷಗಾನ ಪ್ರಸಂಗಗಳು ಗ್ರಾಮೀಣ ಸಮಾಜಕ್ಕೆ ಒಂದು ಮಹತ್ತರ ಸಾಂಸ್ಕ್ರತಿಕ ಹಬ್ಬವಾಗಿರುತ್ತವೆ. ಅದಕ್ಕಾಗಿ ಈ ಕಲೆಯನ್ನು "ಜೀವಂತ ನಾಟಕ" ಎಂದು ಹಲವರು ವರ್ಣಿಸುತ್ತಾರೆ. ಮಹಿಷಾಸುರನ ವೇಷವು ಅತೀ ವೈಭವಶಾಲಿ, ದೊಡ್ಡ ಕಿರೀಟ, ಗಜಕೇಸರದಂತೆ ಭುಜಬಲ ಪ್ರದರ್ಶನ, ಗರಿಷ್ಠ ಆಭರಣಗಳಿಂದ ಕೂಡಿರುತ್ತದೆ. ಅವನ ವೇದಿಕೆಗೆ ಆಗಮನವು ಸಾಮಾನ್ಯವಾಗಿ ತಾಳಮದ್ದಳೆಯ ಘೋಷ, ಚಂಡೆಯ ಭರ್ಜರಿ ನಾದ, ಪಾತ್ರದಾರಿಯ ಗಂಭೀರ ಸಂಭಾಷಣೆ ಮತ್ತು ಭಯಾನಕ ನೃತ್ಯದೊಂದಿಗೆ ನಡೆಯುತ್ತದೆ. ಈ ದೃಶ್ಯವನ್ನು ನೋಡಲು ಜನರು ಮುಗಿ ಬಿದ್ದು ಸೇರುತ್ತಾರೆ. ವಿಶೇಷವಾಗಿ ಹಳ್ಳಿ ಜಾತ್ರೆಗಳಲ್ಲಿ ...