ಐತಿಹಾಸಿಕ ತಾಣ ಕೊಣಾಜೆ ಕಲ್ಲು

 ಐತಿಹಾಸಿಕ ತಾಣ ಕೊಣಾಜೆ ಕಲ್ಲು...!

ನಮಸ್ಕಾರ, 

1. ಮೂಡಬಿದ್ರಿಯ ಹಸಿರು ತಪ್ಪಲಿನಲ್ಲಿ ಅಡಗಿರುವ ಪುಣ್ಯಸ್ಥಳ

ನಮ್ಮೆಲ್ಲ ಪ್ರೀತಿಯ ಓದುಗರರಿಗೆ ಹೃದಯ ತುಂಬು ವಂದನೆಗಳು. ನೀವು ನಮ್ಮ ಮೇಲೆ ತೋರಿದ ಪ್ರೀತಿ ಮತ್ತು ಅಭಿಮಾನವೇ ವಿವಿಧ ವಿಷಯಗಳನ್ನು ಹುಡುಕಿ ತಿಳಿದು ಬರೆಯಲು ನಮಗೆ ಸದಾ ಪ್ರೇರಣೆಯಾಗುತ್ತದೆ.  ಇವತ್ತು ನಾವು ಪರಿಚಯಿಸಿಕೊಳ್ಳಲು ಪ್ರಯತ್ನಿಸುವ ವಿಷಯವೆಂದರೆ ಅದು ಮೂಡಬಿದ್ರಿಯ ಹಸಿರು ಪ್ರಕೃತಿ ತಪ್ಪಲಿನಲ್ಲಿ ಅಡಗಿರುವ ಕೊಣಾಜೆಕಲ್ಲು.  ಇದರ ಸ್ಥಳ, ಪುರಾಣ ಚರಿತ್ರೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಈ ಬರಹದ ಮೂಲಕ ಮಾಡುವೆವು


2. ಎತ್ತರ ಬೆಟ್ಟದ ತುದಿಯಲ್ಲಿರುವ ಗುಹಾ ದೇವಾಲಯ

ದೇವಸ್ಥಾನ, ದೇಗುಲ ಎಂದರೆ ನಮಗೆ ನೆನಪಾಗುವುದು ವಿಶಾಲ ಪ್ರದೇಶ, ರಮಣೀಯ ವಾಸ್ತುಶಿಲ್ಪಾ, ನೀರಿನ ಕಲ್ಯಾಣಿಗಳು ,ಉದ್ದವಾದ ರಥಬೀದಿ, ಸುತ್ತಮುತ್ತ ಮಾರುಕಟ್ಟೆ ಇತ್ಯಾದಿ ಎಂಬ ಕಲ್ಪನೆಗಳು.  ಆದರೆ ನಮಗೆ ಈ ಮೂಡಬಿದ್ರಿಯ ಕೊಣಾಜೆಕಲ್ಲು ದೇವಸ್ಥಾನದಲ್ಲಿ ಇದು ಯಾವುದು ಕಾಣ ಸಿಗುವುದಿಲ್ಲ.  ಎತ್ತರವಾದ ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಸ್ಥಾನವನ್ನು ನಾವಿಲ್ಲಿ ಕಾಣಬಹುದು.  ಇದನ್ನು ಹತ್ತಿ ತಲುಪಲು ನಮಗೆ ಗಂಟೆಗಳ ಪರಿಶ್ರಮವೇ ಬೇಕು.

3. ಕಾಳಭೈರವೇಶ್ವರ, ಭದ್ರಕಾಳಿ, ವನದುರ್ಗಿ – ದೇವರ ಸಾನಿಧ್ಯ

ಕಾಲ್ನಡಿಗೆ ಮೂಲಕ ಬೆಟ್ಟವನ್ನು ಏರಿ ದೇವರ ದರ್ಶನವನ್ನು ಮಾಡಬೇಕು.  ಪ್ರಕೃತಿಯ ಅನನ್ಯ ದೃಶ್ಯ ವೈಭೋಗದ ನಡುವೆ ದೇವಾಲಯ ನಿರ್ಮಿತವಾಗಿದೆ. ಈ ಕ್ಷೇತ್ರದ ದರ್ಶನವನ್ನು ಮಾಡಿದರೆ ಕಷ್ಟ ಪರಿಹಾರದ ಜೊತೆಗೆ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗುವುದು ಖಂಡಿತ. ಕಣ್ಣನ್ನು ಹಾಯಿಸಿದಷ್ಟು ದೂರಕ್ಕೆ ಹರಡಿರುವ ಹಸಿರು ಸಸ್ಯರಾಶಿ. ದಾರಿಯುದ್ದಕ್ಕೂ ಪ್ರಯಾಣಿಸುವಾಗ ಕಾಣಸಿಗುವ ಅನೇಕ ಪ್ರಾಣಿಸಂಕುಲ, ಎಲ್ಲಾವು ಪ್ರಯಾಣಿಕರ ಮನಸ್ಸನ್ನು ಕಾಡಿನ ನೈಸರ್ಗಿಕ ಮಡಿಲಲ್ಲಿ ತೊಡಗಿಸುತ್ತದೆ. ಬೃಹತ್ ಬಂಡೆ ಕಲ್ಲು ವನಮಾತೆಯ ಹಚ್ಚ ಹಸುರಿನ ನಡುವೆ ತಲೆ ಎತ್ತಿ ನಿಂತಿದೆ ಈ ದೇವಸ್ಥಾನ. ಇಂತಹ ಒಂದು ಮನಮೋಹಕ ರಮಣೀಯ ದೇವಸ್ಥಾನದ ಹೆಸರು ಕೊಣಾಜೆಕಲ್ಲು.

4. ಶ್ರೀ ಶರದಾದಾಸರ ಜೀವಂತ ಸಮಾಧಿ

ಹೌದು, ಮೂಡಬಿದ್ರಿ ಸಮೀಪದ ಕೊಣಾಜೆ ಎಂಬಲ್ಲಿ ಗುಡ್ಡದ ಮೇಲೆ ಕಲ್ಲು ಬಂಡೆಯಿಂದ ಅವರಿಸಿರುವ ಗುಹೆಯ ಒಳಗೆ ದೇವಾಲಯದ ಗೋಡೆಗಳನ್ನು ನಿರ್ಮಿಸಲಾಗಿದ್ದು. ಗುಹೆಯ ಒಳಗೆ ದೇವರನ್ನು ಪೂಜಿಸಲಾಗುತ್ತದೆ.  ಋಷಿ ಮುನಿಗಳು ತಪಸ್ಸು ಮಾಡಿರುವ ಗೂಹೆಯಲ್ಲಿ ಕಾಳಬೈರಾವೇಶ್ವರ, ಭದ್ರಕಾಳಿ, ವನದುರ್ಗಿ ,ಪಿಲಿಚಾಮುಂಡಿ, ಮಾರಿಯಮ್ಮ ದೇವರುಗಳು ನೆಲೆಸಿದ್ದಾರೆ.  ಈ ದೇವರುಗಳು ಭಕ್ತರ ಸಂಕಷ್ಟವನ್ನು ದೂರ ಮಾಡಿಕೊಂಡು ಬರುತ್ತಿದ್ದಾರೆ.  ಈ ಕ್ಷೇತ್ರದಲ್ಲಿ ಶ್ರೀ ಶರದಾದಾಸ ಎಂಬ ಮಹತ್ತಾಪಸ್ವಿಗಳ ಜೀವಂತ ಸಮಾಧಿ ಇದೆ. ಈ ದೇವಾಲಯದ ಅನತಿ ದೂರದಲ್ಲಿ ಸಿರಿಗುಂಡಿ ಎಂಬ ಪ್ರದೇಶದಲ್ಲಿ ಸಪ್ತ ದೇವಿಯರು ವಾಸವಾಗಿದ್ದರೆ ಎಂದೂ ನಂಬಲಾಗಿದೆ. 

5. ಸತ್ಯಯುಗದ ಚಿನ್ನದ ಕಿಂಡಿ ಪುರಾಣ

ಇಲ್ಲಿನ ಅಸಕ್ತಿಕರ ಕಥೆಯು ಇದೆ ಬಹಳ ಹಿಂದಿನ ಕಾಲದಲ್ಲಿ  ಸತ್ಯಯುಗದ ಸಮಯದಲ್ಲಿ  ಈ ಸುತ್ತಮತ್ತಲಿನ ಪರಿಸರದ ಜನರಿಗೆ ಮನೆಯಲ್ಲಿ ಯಾವಿದಾದರು ಶುಭ ಕಾರ್ಯದ ಸಂದರ್ಭದಲ್ಲಿ ಚಿನ್ನ ಬೇಕಾಗಿದ್ದಾರೆ, ಜನರು ಇಲ್ಲಿನ ದೇವಸ್ಥಾನದ ಕಿಂಡಿ ಒಂದರಲ್ಲಿ ಬಾಳೆ ಎಲೆ ಇಟ್ಟು ಹೋದರೆ ಮರುದಿನ ಆ ಎಲೆಯಲ್ಲಿ ಚಿನ್ನ ದೊರೆಯುತ್ತಿತ್ತು ಜನರು ಅವರ ಅಗತ್ಯ ಮುಗಿದ ನಂತರ ಚಿನ್ನವನ್ನು ಅಲ್ಲಿಯೇ ಹಿಂತಿರುಗಿಸಿ ಕಿಂಡಿಯಲ್ಲಿ ಇಡುತ್ತಿದ್ದರು.  ಕಾಲ ಕ್ರಮೇಣ ಯಾವುದೊ ಒಂದು ಅನಾಚಾರದ ಪರಿಣಾಮರಿಂದಾಗಿ ಕೋಪಗೊಂಡ ದೇವರು ಚಿನ್ನ ಕೊಡುವುದನ್ನ ನಿಲ್ಲಿಸಿದರು ಎಂದು ಹಿರಿಯರು ಹೇಳುತ್ತಾರೆ. 

6. ಮಂಗಗಳ ಪಾವನ ಶಿಕ್ಷೆ ಮತ್ತು ಪಾಯಸದ ಆಚರಣೆ

ಈ  ಕೊಣಾಜೆ ಕಲ್ಲಿನಲ್ಲಿರುವ ಎರಡು ಶಿಖರದಲ್ಲಿ ಶಿವ ಸತಿಯರು ನೆಲೆಸಿದ್ದಾರೆ ಎಂದೂ ನಂಬಲಾಗಿದೆ.  ಈ ಕ್ಷೇತ್ರದಲ್ಲಿ ಏನಾದರೂ ಅನಾಚಾರ ಮಾಡಿದರೆ ಮಂಗಗಳು ಶಿಕ್ಷೆ ನೀಡುತ್ತಾರೆ ಎಂದೂ ನಂಬಿಕೊಂಡು ಬಂದಿದ್ದಾರೆ.  ಮದುವೆ ಆಗದವರು ಜೀವನದಲ್ಲಿ ಅನೇಕ ಕಷ್ಟವನ್ನು ಅನುಭವುಸಿದವರು ಇಲ್ಲಿ ಬಂದು ಮಂಗಗಳಿಗೆ ಪಾಯಸದ ಊಟವನ್ನುನೀಡಿದರೆ ಅವರ ಕಷ್ಟಗಳು  ದೂರವಾಗುತ್ತದೆ ಎಂಬುದು ಇಲ್ಲಿನ ವಿಶೇಷ ಆಚರಣೆ. ಇಲ್ಲಿನ ಬಹಳ ಪ್ರಮುಖ ವಿಶೇಷತೆ ಎಂದರೆ ಇಲ್ಲಿನ ಭಸ್ಮ ಕೊಳದಲ್ಲಿ ಭಸ್ಮವು ತನ್ನಿಂದ ತಾನೇ ಉತ್ಪತ್ತಿಯಾಗಿ ಇದರಲ್ಲಿ ಉಬ್ಬಸ ಮತ್ತು ಚರ್ಮರೋಗ ದೂರ ಮಾಡುವ ಶಕ್ತಿಯಿದೆ.  


7. ಭಸ್ಮ ಕೊಳದ ಅದ್ಭುತ ಶಕ್ತಿ 

ಹುಣ್ಣಿಮೆ ಅಮಾವಾಸ್ಯೆಯಂದು ಅನಾರೋಗ್ಯದ ಸಮಸ್ಯೆ ಇರುವವರು ಪೂಜೆಯನ್ನು ಸಲ್ಲಿಸಿ ಇಲ್ಲಿನ ಪವಿತ್ರ ಕಲ್ಲಿನ ಮೇಲೆ ಮಲಗಿದರೆ ಅವರ ಅರೋಗ್ಯ ಸುಧಾರಿಸುತ್ತದೆ ಎಂಬ ಪ್ರತೀತಿ ಜನರಲ್ಲಿ ಗಾಢವಾಗಿದೆ. ಅನೇಕ ಪವಾಡಗಳಿಗೆ ಶಾಕ್ಷಿಯಾಗಿದೆ.  ನೊಂದು ಬೆಂದು ಬಳಲಿ ಬಂದವರಿಗೆ ಸಮಸ್ಯೆ ಪರಿಹಾರ ಆಗುತ್ತದೆ.  ಕ್ಷೇತ್ರದಲ್ಲಿ ನಿತ್ಯವು ಪೂಜೆ ನಡೆಯುತ್ತದೆ.  ಶಿವರಾತ್ರಿ ನವರಾತ್ರಿ ಸಂದರ್ಭದಲ್ಲಿ ದೇವರಿಗೆ ವಿಶೇಷವಾದ ಪೂಜೆ ಪುನಸ್ಕಾರ ಇರುತ್ತದೆ. 

ತರ್ಕಾಕ್ಕೂ ನಿಲುಕದ ಮಹಾನ್ ಸಾನಿಧ್ಯ ಇದು. ಶ್ರೀ ಶರದಾದಾಸ ಸ್ವಾಮಿಗಳು ದೈವ ಪ್ರೇರಣೆಯಿಂದ ಧ್ಯಾನ ಮುಕ್ತರಾಗಿದ್ದಾಗ ಮಹಾಶಕ್ತಿಯೊಂದು ಬೆಳಕಿಗೆ ಬಂದು ಇದರಿಂದ ಪ್ರೇರಿತರಾಗಿ ಮೊದಲ ಬಾರಿಗೆ ಬೆಟ್ಟಕ್ಕೆ ಬಂದಾಗ ಗುರುಪೀಠದಲ್ಲಿ ವಿಶೇಷವಾದ ಬೆಳಕನ್ನು ಕಂಡು ಬೆರಗಾದರು.  ಆಗ ಅಲ್ಲಿನ ರಹಸ್ಯಗಳನ್ನು ಕಂಡು ಬೆರಗಾಗಿ ಹೋದರು. ಜನರ ಕಷ್ಟಗಳನ್ನು ಬಗೆಹರಿಸುತ್ತ ಹೋದರು 1979ರಲ್ಲಿ ಶರದಾದಾಸ ಸ್ವಾಮಿಗಳು ಜೀವಂತ ಸಮಾಧಿಯಾದರೂ.  ಅವರ ಬಳಿಕ ಕೇಶವದಾಸರು  ಕಾರ್ಯವನ್ನು ಮುಂದಿವರಿಸಿದರು.

8. ಹುಣ್ಣಿಮೆ, ಅಮಾವಾಸ್ಯೆಯ ವಿಶೇಷ ಆಚರಣೆ

ದೇವಾಲಯದ ಸುತ್ತಮುತ್ತ ನಮಗೆ ಆಂಜನೇಯಾನ ಕೃಪೆ ಎದ್ದು ಕಾಣುತ್ತದೆ.  ಭಕ್ತರು ನೈವೇದ್ಯ ನೀಡಿದರೆ ಇಲ್ಲಿ ಹರಕೆಯನ್ನು ನೀಡಿದಂತೆ. ಪೂಜೆಗಳಲ್ಲಿ ವಿಘ್ನಗಳಾದರೆ ಮಂಗಗಳು ಸೂಚನೆ ನೀಡುತ್ತದೆ. ಸ್ಥಳೀಯರು ಹೇಳುವ ಪ್ರಕಾರ ರಾಮ ಎಂಬ ಕಪಿಯನ್ನು ಕೂಗಿ ಕರೆದರೆ ಬಳಿ ಬಂದು ಹೊಸ ಚೈತನ್ಯವನ್ನು ಚಿಗುರಿಸುತ್ತದೆ.  ಇಲ್ಲಿನ ಸಿರಿಗುಂಡಿಯಲ್ಲಿ ಏಳು ಜನ ಸಿರಿ ದೇವತೆಗಳ ಜಳಕ ನಡೆಯುತ್ತಿತ್ತು. ಶ್ರೀ ಭದ್ರಕಾಳಿ ಗುಹೆಯ ಒಳಗೆ ಭಸ್ಮ ಕೋಳವನ್ನು ಕಾಣಬಹುದು. ಇಲ್ಲಿ ಸುಮಾರು 25 ಜನ ಕುಳಿತುಕೊಳ್ಳಬಹುದಾದ ಜಾಗ ಇದೆ. 

9. ಶಿವರಾತ್ರಿ ಮತ್ತು ನವರಾತ್ರಿಯ ಹಬ್ಬದ ವೈಭವ

ಗಣೇಶ್ ಗುರೂಜಿಯವರ ಆಡಳಿತ ಸಮಯದಲ್ಲಿ ಮತ್ತಷ್ಟು ಏಳಿಗೆಯನ್ನು ಕ್ಷೇತ್ರವು ಪಡೆದುಕೊಂಡಿತು.  ಗುರೂಜಿಯವರ ಮೂಲಕ ಚಂಡಿಕಾಯಾಗ, ಪ್ರತ್ಯಾಗಿರಹೋಮ, ಶರಬೇಶ್ವರಹೋಮ ಪ್ರತಿದಿನ ನಡೆಯುತ್ತದೆ.  ಪೂಜಾವೇಳೆಗೆ ಹೂವಿನ ಆಶೀರ್ವಾದ ಬಹಳ ವಿಶೇಷವಾಗಿದೆ. ಪೂಜಾ ವೇಳೆಗೆ ದೇವರ ಹೂವು ಕೆಳಗೆ ಬಿದ್ದು ಭೂಮಿ ಸ್ಪರ್ಶಸುತ್ತದೆ. ದೂಮವತಿ ,ಕಲ್ಲುರ್ಟಿ ಮಹಾಶಕ್ತಿಗಳಿವೆ.  ನಾಗದೇವರ ಸನಿದ್ಯಾ ಇದೆ. 

10. ಹುಲಿ ಗರ್ಜನೆ, ಸಾಹಸ ಪಯಣ ಮತ್ತು ಪ್ರಕೃತಿ ಸೌಂದರ್ಯ

ಒಂದಲ್ಲ ಒಂದು ವಿಭಿನ್ನತೆಗಳು ದೈವಿ ಶಕ್ತಿಯ ಕಾರ್ಣಿಕ ಇದೆ, ಓಂಕಾರ ನದಾವಿದೆ, ಋಷಿಮುನಿಗಳ ಆಶೀರ್ವಾದ ಇದೆ, ನಾಗಸಾದೂಗಳ ವಾಸ್ತವ್ಯವನ್ನು ಕಾಣಬಹುದು.  ಹುಲಿ ಗರ್ಜನೆಯ ಎಚ್ಚರಿಕೆಯ ಪವಿತ್ರತೆ ಇದೆ. ಮಾನಸಿಕ ರೋಗಿಗಳಿಗೂ ಔಷದಿಯ ಸತ್ವ ಇದೆ. ಸಾಹಸ ಪಯಣ ಮಾಡಿದರು ಮನಸ್ಸಿಗೆ ನೆಮ್ಮದಿ ಇದೆ. ದಟ್ಟ ಕಾಡಿನ ನಡುವೆ ಬೃಹತ್‌ ಆಕಾರಾದ ಬಂಡೆಯನ್ನು ಏರಿದಾಗ ಪ್ರಕೃತಿಯ ನೋಟವನ್ನು ಸವಿಯುತ್ತ ಸಾಗಿದಾಗ ಬಂಡೆಗಳ ಅಡಿಯಲ್ಲಿ ಅಡಗಿರುವ ಪವಿತ್ರ ಕ್ಷೇತ್ರದ ದರ್ಶನ ಸಿಗುತ್ತದೆ.  

11. ನಂದಿಗಿರಿ ಎಂದೂ ಕರೆಯಲ್ಪಟ್ಟ ಕೊಣಾಜೆಕಲ್ಲು

ಈ ಸ್ಥಳವನ್ನು ಹಿಂದೆ ನಂದಿಗಿರಿ ಎಂದು ಕರೆಯುತ್ತಿದ್ದರು. ಈಗ ಇದನ್ನು ಕೊಣಾಜೆಕಲ್ಲು ಎಂದೂ ಕರೆಯುತ್ತಾರೆ. ಇಲ್ಲಿನ ವಿಶೇಷತೆ ಮೈರೋಮಚನ ಎನಿಸುತ್ತದೆ. ಕಷ್ಟಪಟ್ಟು ಬೆಟ್ಟವನ್ನು ಹತ್ತಿದ ನಂತರ ಮನಸ್ಸಿಗೆ ಏನೋ ಒಂದು ನೆಮ್ಮದಿ. ಕಷ್ಟ ಕಾರ್ಪಣ್ಯ ದೂರವಾಗಿ ಉತ್ತಮ ಅರೋಗ್ಯ ನಮಗೆ ದೊರೆಯುತ್ತದೆ. ಇಂತಹ ಪುಣ್ಯ ಸನಿದ್ಯಾ ನಮ್ಮ ಊರಿನಲ್ಲಿ ಇರುವುದು ನಮ್ಮ ಸೌಭಾಗ್ಯವೇ ಸರಿ. ಸಾಧ್ಯವಾದರೆ ಒಮ್ಮೆ ಎಲ್ಲರು ಕ್ಷೇತ್ರವನ್ನು ದರ್ಶನ ಮಾಡಿ ದೇವರು ನಮ್ಮೊಂದಿಗೆ ಇದ್ದಾನೆ ನಮ್ಮನ್ನು ಕಾಯುತ್ತಾನೆ. ನಮ್ಮ ದು:ಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆಯನ್ನು ಹೃದಯದಲ್ಲಿ ಸದಾ ಇರಿಸಿಕೊಳ್ಳೊಣ 

12. ಮನಸ್ಸಿಗೆ ಶಾಂತಿ, ಆರೋಗ್ಯ ನೀಡುವ ಪುಣ್ಯಸ್ಥಳ

ಹೀಗೆ ಹತ್ತು ಹಲವು ಪುಣ್ಯ ಕ್ಷೇತ್ರವನ್ನು ನಾವು ತುಳುನಾಡಿನಾಡಿನಲ್ಲಿ ಕಾಣಬಹುದು.  ಇದರಲ್ಲಿ ಕೊಣಾಜೆಕಲ್ಲು ಕ್ಷೇತ್ರವು ಹೌದು.  ಈ ಪುಣ್ಯ ಕ್ಷೇತ್ರವು ತನ್ನದೇ ಆದ ಕಾರ್ಣಿಕ ಇತಿಹಾಸವನ್ನು ಹೊಂದಿದೆ.  ನಮಗೆ ತಿಳಿದಷ್ಟು ನಿಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ.  ತಪ್ಪಿದಲ್ಲಿ ಕ್ಷಮಿಸಿ ನಮ್ಮ ಬರವಣಿಗೆಯನ್ನು ಪ್ರೋತ್ಸಾಹ ಮಾಡಿ. ಇಂತಹ ಸ್ಥಳಗಳ ಮಹತ್ವವನ್ನು ಎಲ್ಲೆಡೆ ಹರಡೋಣ...!

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 

ಜೈ ತುಳುನಾಡ್

Comments

Popular posts from this blog

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ