ತುಳುನಾಡ ಹೆಮ್ಮೆಯ ಜಾನಪದ ಕಲೆ ಹುಲಿವೇಷ
ತುಳುನಾಡ ಹೆಮ್ಮೆಯ ಜಾನಪದ ಕಲೆ ಹುಲಿವೇಷ
ನಮಸ್ಕಾರ,
1. ತುಳುನಾಡಿನ ಜನಪದ ಕಲೆಗಳ ನೆಲೆ – ಹುಲಿವೇಷದ ವೈಶಿಷ್ಟ್ಯ
ನಮ್ಮೆಲ್ಲ ಪ್ರೀತಿಯ ಓದುಗರರಿಗೆ ನಾವು ಮಾಡುವ ಹೃದಯ ತುಂಬು ನಮಸ್ಕಾರಗಳು. ನೀವು ನಮ್ಮ ಮೇಲೆ ತೋರಿದ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಚಿರಋಣಿ. ತುಳುನಾಡಿನ ಜಾನಪದ ಕಲೆಯ ಮಹತ್ವಪೂರ್ಣ ಸ್ಥಾನ ಹೊಂದಿರುವ ಹುಲಿವೇಷದ ಬಗ್ಗೆ ಅರಿತುಕೊಳ್ಳೊಣ. ತುಳುನಾಡು ಪರಶುರಾಮ ಸೃಷ್ಟಯ ಅತ್ಯಂತ ಸುಂದರವಾದ ನಾಡು ಎಂದು ವಿಶೇಷ ಪ್ರಸಿದ್ದಿಯನ್ನು ಹೊಂದಿದೆ.
2. ಬಹಳಷ್ಟು ಹಳೆಯ ಬಾಷ ಪರಂಪರೆಯನ್ನು ಹೊಂದಿದೆ.
ನಾಗದೇವರ ದೈವಗಳ ಅನೇಕ ಶಕ್ತಿ ದೇವರುಗಳ ದೇವಸ್ಥಾನವನ್ನು ನಾವಿಲ್ಲಿ ಕಾಣಬಹುದು. ತುಳುನಾಡು ಬಹಳಷ್ಟು ಹಳೆಯ ಬಾಷ ಪರಂಪರೆಯನ್ನು ಹೊಂದಿದೆ. ತನ್ನದೇ ಆದ ಲಿಪಿಯನ್ನು ಸಹ ಒಳಗೊಂಡು ಬಹಳ ಪುರತನ ಸಂಸ್ಕೃತಿಯನ್ನು ಹೊಂದಿದ ಶ್ರೀಮಂತ ನಾಡಾಗಿರುವ ತುಳುನಾಡು ಅನೇಕ ಜಾನಪದ ಕಲೆಗಳ ನೆಲೆಯಾಗಿದ್ದು, ವೈವಿದ್ಯಮಯ ಜನಪದ ಪರಂಪರೆಯ ಧರೆಯಾಗಿದೆ. ಪ್ರತಿಷ್ಠಿತ ಕಂಬಳ, ದೈವ ದೇವರುಗಳಿಗೆ ಅರ್ಪಣೆಯಾದ ಬಲಿ ಕೋಲಾ, ಸಾಂಪ್ರದಾಯಿಕ ಜಾನಪದ ಕಲೆಯಾದ ಯಕ್ಷಗಾನದಂತೆ, ತುಳುನಾಡಿನಲ್ಲಿ ಹಲವಾರು ಆಚರಣೆಗಳು ಮನೆಮಾತಾಗಿವೆ. ಅದೇ ರೀತಿ, ಬಹಳ ಹಿಂದಿನಿಂದಲೂ ಪ್ರಸಿದ್ದಿಯಲ್ಲಿರುವ ಮತ್ತೊಂದು ಜನಪದ ನೃತ್ಯ ಎಂದರೆ ಅದು ತುಳುನಾಡಿನ ಹುಲಿವೇಷ.
4. ಹರಕೆಯಿಂದ ಹುಟ್ಟಿದ ನಂಬಿಕೆ – ಮನೆ ಶಾಂತಿ, ಆರೋಗ್ಯ
ಹುಲಿವೇಷ ಹಾಕುವಾಗ ದೇವಿಯ ಹೆಸರಿನಲ್ಲಿ ವೃತವಿದ್ದು "ಮನೆಯ ಶಾಂತಿಗಾಗಿ" ಮತ್ತು ಆರೋಗ್ಯದಲ್ಲಿ ಸೌಖ್ಯ ಇಲ್ಲದಾಗ ಸುದಾರಣೆಯಾದರೆ ಹುಲಿವೇಷ ಹಾಕುವುದಾಗಿ ದೇವಿಗೆ ಹರಕೆಯ ಮೂಲಕ ಪ್ರಾರ್ಥಿಸುತ್ತಾರೆ. ಈ ರೀತಿಯ ಹರಕೆಗಳಿಗೆ ಪ್ರತಿಯಾಗಿ ಹುಲಿವೇಶ ಪ್ರಾರಂಭವಾಯಿತು. ಹುಲಿವೇಶವನ್ನು ಹಾಕುವ ಮುಂಚೆ ಕೆಲವು ಕ್ರಮಗಳಿವೆ ಮೊದಲಿಗೆ ಊದು ಪೂಜೆ, ಜಂಡ ಮೆರವಣಿಗೆ ಹಾಗೂ ಸುಮಾರು ಒಂದು ತಿಂಗಳ ಮೊದಲು ವೇಷದಾರಿಗಳು ಮದು ಮಾಂಸವನ್ನು ಬಿಡಬೇಕಾಗುತ್ತದೆ.
5. ವೇಷದ ತಯಾರಿ – ಬಣ್ಣ, ರೋಮ ಮತ್ತು ಕಲೆಯ ಕಷ್ಟ
ವೇಷದಾರಿಗಳು ಅವರ ಗುರುಗಳು ಮತ್ತು ದೇವರ ಮುಂದೆ ನಮ್ಮ ತಪ್ಪಗಳನ್ನೆಲ್ಲ ಸರಿ ಮಾಡಿ ಹೋದಲ್ಲಿ ಬಂದ ದೇಲಗಲ್ಲಿ ನಮ್ಮನ್ನು ರಕ್ಷಣೆ ಮಾಡಬೇಕು ಎಂದೂ ಪ್ರಾರ್ಥಿಸಿ ಲೋಬನ ಹಾಕಿ ಬಟ್ಟೆ ಎಲ್ಲಾ ಕಳಚಿ ಕಡ್ಲೆ ಹಿಟ್ಟಿನಲ್ಲಿ ಸ್ನಾನವನ್ನು ಮಾಡಿ ಊದು ಹಾಕಿದ ನಂತರ ಎಲ್ಲರೂ ಬಣ್ಣ ಹಾಕಲು ನಿಲ್ಲುತ್ತಾರೆ. ಇದಕ್ಕೆ "ರಂಗ್" ಹಾಕುವುದು ಎನ್ನುತ್ತಾರೆ. ಈ ರಂಗ್ ಹಾಕುವುದು ಅಥವಾ ಬಣ್ಣವನ್ನು ಹಾಕುವುದು ಅಷ್ಟೊಂದು ಸುಲಭವಲ್ಲ. ಇದು ಸುಮಾರು ತಾಸು ತೆಗೆದುಕೊಳ್ಳುತ್ತದೆ. ಮುಂಚೆ ಸುಮಾರು ಒಂದು ದಿನದ ಲೆಕ್ಕ ಈಗ ಅತ್ಯಾದುನಿಕ ಉಪಕರಣವನ್ನು ಬಳಸಿ. ಬಣ್ಣ ಹಾಕಲಾಗುತ್ತದೆ ಹೇಗೆ ಹಾಕಿದರೂ ಸುಮಾರು ತಾಸು ಒಣಗಲು ಬೇಕಾಗುತ್ತದೆ.
6. ಚಿಟ್ಟೆ ಹುಲಿ – ಪಟ್ಟೆ ಹುಲಿ : ಎರಡು ರೂಪಗಳ ಸೊಗಸು
ಈ ಬಣ್ಣಗಳು ಕ್ರಮವಾಗಿ ಹುಲಿಯ ಎದೆಯ ಭಾಗಕ್ಕೆ ಹೊಟ್ಟೆ ಭಾಗಕ್ಕೆ ಅಂದರೆ ಎದುರು ಭಾಗಕ್ಕೆ ಸಾಮಾನ್ಯವಾಗಿ ಎಲ್ಲಾ ಹುಲಿಗಳಿಗೂ ಬಿಳಿ ಬಣ್ಣ. ಬೆನ್ನಿಣ ಭಾಗಕ್ಕೆ ಕೇಸರಿ,ಹಳದಿ ,ಕಪ್ಪು ,ಬಿಳಿ ಈ ರೀತಿ ಬಣ್ಣಗಳು ದೇಹಕ್ಕನುಗುಣವಾಗಿ ಹಾಕುತ್ತಾರೆ. ಇದರಲ್ಲಿಯೂ ಸಹ ಎರಡು ವಿಧಗಳಿವೆ ಚಿಟ್ಟೆ ಹುಲಿ ಮತ್ತು ಪಟ್ಟೆ ಹುಲಿ. ಚಿಟ್ಟೆ ಹುಲಿಯೆಂದರೆ ವೃತ್ತವಾಗಿ ಚಿರತೆ ರೀತಿ ಹಾಕುತ್ತಾರೆ ಮತ್ತು ಪಟ್ಟೆ ಹುಲಿಯೆಂದರೆ ಪಟ್ಟೆ ಪಟ್ಟೆಯಾಗಿ ಬಣ್ಣವನ್ನು ಹಾಕುತ್ತಾರೆ. ಮತ್ತೆ ಇದಕ್ಕೆ ರೋಮವನ್ನು ಹಾಕುವ ಕ್ರಮವಿದೆ. ಕುರಿಯ ರೋಮವನ್ನು ತಂದು ಅದನ್ನು ಬಿಸಿ ನೀರಲ್ಲಿ ಹಾಕಿ ಅದನ್ನು ಶುಚಿ ಮಾಡಿ ಸಣ್ಣವಾಗಿ ಮಾಡಿ ಬಣ್ಣ ಹಾಕಿದ ಕೂಡಲೇ ದೇಹಕ್ಕೆ ಹಾಕುತ್ತಾರೆ.
7. ಮುಖವರ್ಣಿಕೆ ಮತ್ತು ಹುಲಿ ತಲೆ – ಕಲಾತ್ಮಕ ಭವ್ಯತೆ
ಅದು ದೇಹಕ್ಕೆ ಹಿಡಿಯುತ್ತದೆ. ಬಣ್ಣ ಹಾಕುವಾಗ ಮೈ ಉರಿಯಲು ಪ್ರಾರಂಭವಾಗುತ್ತದೆ. ಒಂದು ರಾತ್ರಿ ಪೂರ್ತಿ ಜಾಗರಣೆ ಮಾಡಬೇಕಾಗುತ್ತದೆ. ಬಣ್ಣ ಒಣಗಿದ ನಂತರ ಅದಕ್ಕೆ ಹುಲಿಯ ಮೇಲಿನ ಬರೆಯ ಬಣ್ಣವನ್ನು ಹಾಕುತ್ತಾರೆ. ಮುಖಕ್ಕೆ ಉತ್ತಮ ಕಲಾವಿದರು ಮುಖವರ್ಣಿಕೆಯನ್ನು ಹಾಕುತ್ತಾರೆ. ಆಯಾ ದೇಹಕ್ಕೆ ಒಪ್ಪುವಂತೆ ಉಗ್ರಸ್ವರೂಪ ಅಥವಾ ಶಾಂತಸ್ವರೂಪವನ್ನು ಹಾಕುತ್ತಾರೆ. ಹುಲಿವೇಶದ ತಲೆ ಹುಲಿಯ ತಲೆಯ ರೀತಿಯ ರೂಪ ಹೊಂದಿರುವ ಶಿರಸ್ತ್ರನ ಅದಕ್ಕೆ ಅದರದ್ದೇ ಆದ ಪ್ರದಾನ್ಯತೆ ಇದೆ. ಹುಲಿಯು ದೇವಿಯ ವಾಹನವದ್ಧಾರಿಂದ ಅದಕ್ಕೆ ಅದರದ್ದೇ ದ ಗೌರವವನ್ನು ಕೊಟ್ಟು ಶ್ರದ್ದೆಯಿಂದ ಮಾಡುತ್ತಾರೆ.
8. ತಾಸೆ, ದೊಳು, ಟ್ರಂಪೆಟ್ – ಹುಲಿವೇಷದ ಶಕ್ತಿ ಸಂಗೀತ
ಹಿಂದೆ ಹುಲಿವೇಷ ಅಂದರೆ ಮೂರು ಜನ ನಾಲ್ಕು ಜನ. ಒಂದು ದೊಡ್ಡ ತಂಡವಾದರೆ ಏಳು ಜನ. ಎರಡು ತಾಸೆ ಒಂದು ದೊಳು. ಒಂದು ಟ್ರಂಪೆಟ್. ಹುಲಿ ಹೊರಡುವ ಮುಂಚೆಯು ಕ್ರಮವಿದೆ ನಿಂಬೆ ಹುಳಿ ಕಟ್ಟಬೇಕು. ನವಿಲು ಗರಿ ಕಟ್ಟಬೇಕು. ಈ ಸಮಯದಲ್ಲಿ ಹುಲಿವೇಶ ಪ್ರತಿಷ್ಠೆಯು ಹೌದು. ಒಂದು ಹುಲಿವೇಶದ ತಂಡಕ್ಕೆ ಸುಮಾರು ಲಕ್ಷದ ಲೆಕ್ಕದಲ್ಲಿ ಖರ್ಚಗುತ್ತದೆ. ಈ ಹುಲಿವೇಶಕ್ಕೆ ಒಂದು ಬಹಳ ಹಿಂದಿನ ಕಥೆಯಿದೆ. ಸುಮಾರು ನೂರು ವರ್ಷಗಳ ಹಿಂದೆ ಮಂಗಳ ದೇವಿಯಲ್ಲಿ ಒಂದು ಕುಟುಂಬಕ್ಕೆ ಮಗು ಹುಟ್ಟುವಾಗ ಆ ಗಂಡು ಮಗುವಿಗೆ ಕಾಲಿನ ಬಲ ಕಳೆದುಕೊಂಡು ನಡೆಯಲು ಸಾದ್ಯವಾಗದ ಕಾರಣ ಆ ಮಗುವಿನ ತಾಯಿ ಮಗುವನ್ನು ದೇವರ ಮುಂದೆ ಇಟ್ಟು ದೇವಿಯಲ್ಲಿ ನನ್ನ ಮಗು ನಡೆಯುವಂತಾದರೆ ನಾನು ಬರುವ ವರ್ಷ ಹರಕೆ ರೂಪದಲ್ಲಿ ಹುಲಿವೇಶ ಹಾಕಿ ನಿಲ್ಲಿಸುತ್ತೇನೆ ಎಂದೂ ಪ್ರಾರ್ಥಿಸುತ್ತಾಳೆ. ಇದೊಂದು ಕಥೆಯಾದರೆ ಇನ್ನೊಂದು ಕಥೆಯಿದೆ.
9. ಹರಕೆಯ ಕಥೆಗಳು – ಭಕ್ತಿಯಿಂದ ಹುಟ್ಟಿದ ವೇಷ
ಹಿಂದೆ ಕಾಡು ಜಾಸ್ತಿ ಇದ್ದುದರಿಂದ ಮಗುವಿಗೆ ಜನ್ಮನೀಡಿದ ಬಾನಂತಿ ತಾಯಿಯ ಮಗುವಿನ ವಾಸನೆಯ ಜಾಡು ಹಿಡಿದು ಹುಲಿ ಬಂದು ಮಗುವನ್ನು ಕೊಂಡೊಯ್ಯುತ್ತಿದ್ದ ಘಟನೆಯಿಂದಾಗಿ ಊರಿನ ಜನರು ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ನಮಗೆ ಈ ಸಮಸ್ಯೆಯಿಂದ ಮುಕ್ತಿ ಸಿಗುವಂತಾಗಲಿ. ನಮ್ಮ ಮಕ್ಕಳು ಹುಲಿವೇಶದ ರೀತಿ ಸೇವೆ ಕೊಡುತ್ತಾರೆ ಎಂದೂ ದೇವಿಗೆ ಪ್ರರ್ಥನೆ ಮಾಡುತ್ತಾರೆ. ಈ ಎರಡು ಕಥೆಗಳನ್ನು ನಾವು ನಮ್ಮ ಹಿರಿಯರಿಂದ ತಿಳಿದುಕೊಂಡು ಬಂದಿರುವಂತದ್ದು. ಹಲವು ಶ್ರದ್ದ, ಭಕ್ತಿ ಹರಕೆ ಮತ್ತು ಸಂಸ್ಕ್ರತಿಯ ಮಿಶ್ರಣವಿರುವ ಈ ವೇಷ ನಿಜಕ್ಕೂ ವಿಶೇಷವಾದದ್ದು.
10. ಹಳೆಯ ನಂಬಿಕೆಗಳಿಂದ ಜನಿಸಿದ ಪವಿತ್ರ ಆಚರಣೆ
ಹುಲಿವೇಶವನ್ನು ದಸರಾ,. ಕೃಷ್ಣಜನ್ಮಾಷ್ಟಮಿ,ಗಣೇಶ ಚತುರ್ಥಿಗೆ ಹಾಕುತ್ತಾರೆ. ಇದು ಕೇವಲ ವೇಷವಲ್ಲ ಒಂದು ಭಕ್ತಿ ಭಾವನೆಯ ಪ್ರತೀಕ. ಹುಲಿವೇಶವನ್ನು ನೋಡುವುದೇ ಒಂದು ವಿಶೇಷ. ಅದೊಂದು ತಾಸೆಯ ಶಬ್ದಕ್ಕೆ ನಾವೇ ಹುಚ್ಚೆದ್ದು ಕುಣಿಯುವಂತೆ ಅನುಭವ. ಜನರು ಹುಲಿವೇಷದಾರಿಗಳಿಗೆ ಸಾವಿರ ಲಕ್ಷದ ರೂಪದಲ್ಲಿ ಹಣ ನೀಡಿ ಗೌರವಿಸುತ್ತಾರೆ. ಇವೆಲ್ಲವೂ ಹುಲಿವೇಷದ ವೈಭವವನ್ನು ಹೆಚ್ಚಿಸುತ್ತದೆ.
11. ಕೇವಲ ವೇಷವಲ್ಲ – ಭಕ್ತಿ, ಶಕ್ತಿ ಮತ್ತು ಸಂಸ್ಕ್ರತಿಯ ಪ್ರತೀಕ
ತಾಸೆಯ ದ್ವನಿಯಲ್ಲಿ ಮೂಡುವ ಶಕ್ತಿ, ಜನತೆಯ ಬೆಂಬಲದಲ್ಲಿ ತೋರುವ ಸಂಸ್ಕ್ರತಿಯ ಗೌರವ ಎಲ್ಲವೂ ಅದ್ಬುತ. ಈ ಕಲೆಯು ದೇವಿಗೆ ನಮನ ಸಲ್ಲಿಸುವ ಹಬ್ಬದ ಭಾಗವಾಗಿದೆ. ಇತ್ತಿಚೆಗೆ ಹುಲಿವೇಷ ಸ್ಪರ್ಧಾತ್ಮಕ ಹುಲಿವೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಕಲೆಗೆ ದೇಶ ವಿದೇಶಗಳಿಂದ ಮೆಚ್ಚುಗೆ ಬರುತ್ತಿದೆ. ಈ ಕಲೆ ಜನರ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ದಾರಿಯಾಗಿದ್ದು, ಅದನ್ನು ಮುಂದಿನ ಪೀಳಿಗೆಗೂ ತಲಿಪಿಸುವ ಜವಾಬ್ದರಿ ನಮ್ಮೆಲ್ಲಾರ ಮೇಲಿದೆ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ಜೈ ತುಳುನಾಡ್.






Nice information ❤️
ReplyDelete