"ಕಂಬಳದ ಮರೆಯದ ಮಾಣಿಕ್ಯ - ಕಿಂಗ್ ಚೆನ್ನ"

 "ಕಂಬಳದ ಮರೆಯದ ಮಾಣಿಕ್ಯ - ಕಿಂಗ್ ಚೆನ್ನ"

ನಮಸ್ಕಾರ,

1. ಕಂಬಳದ ಕರೆಯಲ್ಲಿ ಮೆರೆಯುತ್ತಿದ್ದ ರಾಜ – ಚೆನ್ನ

ನಮ್ಮೆಲ್ಲ ಪ್ರೀತಿಯ ಓದುಗರಿಗೆ ನಮಸ್ಕಾರಗಳು. ಕಂಬಳ ಕ್ಷೇತ್ರದ ಅಪ್ರತಿಮ ಸಾಧಕ ತನ್ನ ಸುಂದರವಾದ ದೇಹದಡ್ಯದಿಂದ ಕಂಬಳದ ಕರೆಯಲ್ಲಿ ರಾಜನಂತೆ ಮರೆದಿದ್ದ. ಸಾವಿರಾರು ಜನರನ್ನು ಕಂಬಳದತ್ತ ತಿರುಗಿ ನೋಡುವಂತೆ ಮಾಡಿದಂತ ಸುಮಾರು ವರ್ಷಗಳ ಕಾಲ ಕಂಬಳ ಕೂಟದಲ್ಲಿ ಮೆರೆದು ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿ ಅವರ ಪ್ರೀತಿಯನ್ನು ಗಿಟ್ಟಿಸಿಕೊಂಡು. ಕಂಬಳದ ವಿದಾಯದ ನಂತರ ಅನೇಕ ಸನ್ಮಾನವನ್ನು ಪಡೆದುಕೊಂಡು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಮನಸ್ಸು ಗೆದ್ದು ತನ್ನನ್ನು ಸಾಕಿದ ಯಜಮಾನರ ಹೆಸರನ್ನು ಬಾನೆತ್ತರಕ್ಕೆ ಹಾರಿಸಿ.  ತನ್ನ ಕೊನೆಯ ಸಾವಿನ ಕ್ಷಣದಲ್ಲಿ ರಾಜನಂತೆ ಕೊನೆಯುಸಿರೇಲೆದ “ಕೊಳಚ್ಚುರ್ ಕೊಂಡೋಟ್ಟು ಸುಕುಮಾರ್ ಶೆಟ್ರ ”ಮನೆಯಲ್ಲಿ ರಾಜನಂತೆ ಮೆರೆದ “ಕಿಂಗ್ ಚೆನ್ನ ”. 

2. ಸಾವಿರಾರು ಅಭಿಮಾನಿಗಳ ಹೃದಯ ಗೆದ್ದ ಸಾಮ್ರಾಟ

ಹೌದು ಚೆನ್ನ ತನ್ನ ಜೀವನದ ಓಟವನ್ನು ಮುಗಿಸಿದ್ದಾನೆ.  ಕಂಬಳದ ಕ್ಷೇತ್ರದ ಅನಬಿಷಕ್ತ ದೊರೆ ಚೆನ್ನ ಆಸ್ತಾಗಾತಾನಾಗಿದ್ದಾನೆ ಎಂಬ ಸುದ್ದಿ ಆಗಸ್ಟ್ 14 ರಂದು ಕೇಳಿ ಎಲ್ಲರೂ ಸ್ಥಬ್ದವಾಗಿ ನಿಂತಿದ್ದು ಅಂತೂ ಸತ್ಯ.  ಕಂಬಲಭಿಮಾನಿಗಳ ಮನಸಿನನಲ್ಲಿ ದುಃಖದ ಕಾರ್ಮೋಡ ಸೃಷ್ಟಿಯಾಗಿತ್ತು. ನಿರಂತರ ಐದು ವರ್ಷ ಸರಣಿ ಶ್ರೇಷ್ಠ ಗೌರವ ಪಡೆದು ನೋರೈವತ್ತಾಕ್ಕೂ ಹೆಚ್ಚಿನ ಪ್ರಶಸ್ತಿಯನ್ನು 15 ವರ್ಷಗಳಲ್ಲಿ ಪಡೆದು ಕೊಳಚೂರ್ ಕೊಂಡೋಟ್ಟು ಸುಕುಮಾರ್ ಶೆಟ್ಟಿಯವರಿಗೆ ಕಂಬಳ ಕ್ಷೇತ್ರದಲ್ಲಿ ಗೌರವದ ಮಾಲೆಯನ್ನು ಹಾಕಿ ಇಪ್ಪತೈದು ವರ್ಷಗಳ ಕಾಲ ಬಾಳಿ ಬದುಕಿದ ಚೆನ್ನನ ಯುಗಂತ್ಯವಾಗಿದೆ. ಅರಗಿಸಿಕೊಳ್ಳಲಾರದ ನೋವು ತುಂಬಲಾರದ ನಷ್ಟ ಕಂಬಳದ ಕ್ಷೇತ್ರಕ್ಕೆ ಉಂಟಾಗಿದೆ.  ಇಷ್ಟೊಂದು ಸಾಧನೆಯ ಮಹಾಪುರವನ್ನೇ ಮಾಡಿದ ಚೆನ್ನನ ಹಿನ್ನಲೆ ಕಥೆಯನ್ನು ನೋಡುವ ಸಣ್ಣ ಪ್ರಯತ್ನವನ್ನು ಇಂದು ನಾವು ಮಾಡುವ.  

3. 2000ರಲ್ಲಿ ಪ್ರಾರಂಭವಾದ ಚೆನ್ನನ ಕಂಬಳ ಪಯಣ

ಕೊಳಚೂರು ಕೊಂಡೋಟ್ಟು ಸುಕುಮಾರ್ ಶೆಟ್ರ ಬಹಳ ಪ್ರೀತಿಯ ಕೊಂಡಾಟದ ಕೋಣ ನಮ್ಮ ಚೆನ್ನ.  2000 ಇಸವಿಯಲ್ಲಿ ಬೆಳುವಾಯಿಯ ಜಾನುವಾರು ಪೈರಿನಲ್ಲಿ ಇದ್ದ ಕೋನಗಳಲ್ಲಿ ಕಾಂತಾವರದ ಪ್ರಕಾಶ್ ಪೂಜಾರಿಯವರು ಒಂದು ಮರಿ ಕೋಣವನ್ನು ಆಯ್ಕೆ ಮಾಡಿ ತಂದರು.  ಕಡಂದಲೇ ಮುಡಾಯಿಬೆಟ್ಟು ಕಾಲು ಪಾಣಾರರು ಪ್ರಕಾಶ್ ಪೂಜಾರಿಯವರಿಂದ ತಂದರು. ಕಾಲು ಪಾಣಾರರು ಅದನ್ನು “ಚೆನ್ನ” ಎಂದು ಹೆಸರಿಟ್ಟರು. 

4. ಕೊಂಡೋಟ್ಟು ಸುಕುಮಾರ್ ಶೆಟ್ರ ಮನೆಯ ಹೆಮ್ಮೆ

ಅದನ್ನು ಮಂಗಳೂರು ತೊಕ್ಕೊಟ್ಟುವಿನ ರಾಣಿಪುರದ ಕೊನೆಯ ಕಂಬಳದಲ್ಲಿ ಕೊಣಾರೋಟ್ಟು ಮತ್ತು ಕಡಂದಲೇ ಮುಡಾಯಿಬೆಟ್ಟು ಕಾಲುಪಾಣಾರರಿಗೆ ಸಾಲು ಬಿತ್ತು. ಆ ಒಂದು ರೋಚಕ ಸಾಲು ಸಮ ಸಮ ಎರಡು ತಂಡಗಳು ಸಾಧಿಸಿದವು. ಕಂಬಳದ ನಿಯಮದ ಪ್ರಕಾರ ಸಮ ಸಮ ಸಾದಿಸಿದರೆ ಇನ್ನೊಂದು ಬಾರಿ ಕೋಣ ಓಡಿಸಲು ಇರುತ್ತದೆ.  ಆ ಸಾಲಿನಲ್ಲಿ ಚೆನ್ನ ಸೋತನು.  ಸೋಲೆ ಗೆಲುವಿನ ಮೆಟ್ಟಿಲು ಎಂಬಂತೆ ನಂತರ ಚೆನ್ನ ಸೋಲಿಲ್ಲದ ಸರದಾರನಾದ. 


5. ಸೋಲಿನಿಂದ ಗೆಲುವಿನತ್ತ – ಅಜೇಯ ಓಟಗಾರ

ಕಾಲು ಪಾಣಾರರಿಂದ ಬಾರಾಕೂರು ಶಾಂತರಾಮ ಶೆಟ್ರು ತೆಗೆದುಕೊಂದು ಹೋದರು.  ಅವರು ಚೆನ್ನನೊಂದಿಗೆ ತನ್ನ ಇನ್ನೊಂದು ಕೋಣವನ್ನು ಜೊತೆ ಮಾಡಿ ನಿರಂತರ ಮೂರು ವರ್ಷ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡನು.  ಅಲ್ಲಿಂದ ಚೆನ್ನ ಸೀದಾ ಅಡ್ವೇ ನಂದಿಕೂರು ಕೊಳಚೂರ್ ಕೊಂಡೋಟ್ಟು ಹಟ್ಟಿಗೆ ಬಂದನು.  

6. ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ ಶೆಟ್ರರ ಸಂಗಾತಿ

ಏಳು ವರ್ಷ ಚಾಂಪಿಯನ್ ಆಫ್ ದಿ ಇಯರ್ 150ಕ್ಕೂ ಹೆಚ್ಚಿನ ಬಹುಮಾನ ಗೆದ್ದ ಚೆನ್ನನ ಚಿನ್ನದ ಕಥೆ ಇನ್ನಷ್ಟು ತಿಳಿದುಕೊಳ್ಳೋಣ. ಪ್ರಾರಂಭದಲ್ಲಿ ಕೊಂಡೋಟ್ಟುನಲ್ಲಿ ಚೆನ್ನನನ್ನು ಪಳಗಿಸಲು ಸ್ವಲ್ಪ ಕಷ್ಟ ಇತ್ತು. ಸಾಮಾನ್ಯವಾಗಿ ಇದು ಕಂಬಳ ಕ್ಷೇತ್ರದಲ್ಲಿ ಸಾಮಾನ್ಯ ಕಂಬಳದ ಕೋಣವನ್ನು ಪಲಾಗಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಚೆನ್ನನ ಹಠಕ್ಕೆ ಅವನನ್ನು ಪಲಾಗಿಸುವುದು ಕಷ್ಟನೇ ಇತ್ತು.  ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ರು ಒಂದು ವರ್ಷ ಚೆನ್ನನನ್ನು ತನ್ನ ಬೊಲ್ಲನ ಜೊತೆ ಜೋಡಿ ಮಾಡಿ ಆ ವರ್ಷ 8 ಕಂಬಳದಲ್ಲಿ ಆರು ಪ್ರಥಮ ಒಂದು ದ್ವಿತೀಯ ಬಹುಮಾನ ಪಡೆದುಕೊಂಡರು.  ಆ ವರ್ಷ ಸೀತಾರಾಮ್ ಶೆಟ್ರು ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡರು.  

7. ಸ್ಪರ್ಧೆಯಲ್ಲಿ ಎದುರಾಳಿಗಳಿಗೆ ಸವಾಲಾಗಿದ್ದ ಓಟ

ಚೆನ್ನನ ಇನ್ನೊಂದು ವಿಶೇಷತೆ ಎಂದರೆ ಕಂಬಳದ ಸ್ಪರ್ಧೆ ಇರುವಾಗ ಎರಡು ಕೋಣಗಳು ನಡು ಕರೆಯಲ್ಲಿ ಸಮ ಸಮ ಇದ್ದಾರೆ ಚೆನ್ನ ಗುರಿ ತಲುಪುವಾಗ ಎದುರಿನ ಕೋಣಕ್ಕೆ ಬಹುಮಾನ ಬಿಟ್ಟು ಕೊಟ್ಟಿದ್ದು ಬಾರಿ ಕಡಿಮೆ.  ಆ ಸಮಯದಲ್ಲಿ ಕೊಳಚೂರ್ ಕೊಂಡೋಟ್ಟು ಮತ್ತು ಮೂಲ್ಕಿ ಪೆಯ್ಯೋಟ್ಟು ನಡುವೆ ತೀವ್ರ ಸ್ಪರ್ಧೆ ಇತ್ತು. ಮೂಲ್ಕಿ ಪೆಯ್ಯೋಟ್ಟುವಿನಲ್ಲಿ ಆ ಸಮಯದಲ್ಲಿ “ನಾಗರಾಜ ”ಎಂಬ ಕೋಣ ಇತ್ತು.  ಕಂಬಳ ಕ್ಷೇತ್ರಕ್ಕೆ ನಾಗರಾಜನ ಕೊಡುಗೆ ಅಪಾರವಾಗಿದೆ.  ನಾಗರಾಜಾ ಸುಮಾರು 150ಕ್ಕೂ ಹೆಚ್ಚಿನ ಬಹುಮಾನ ಪಡೆದ ಕೋಣ. ಭಾರತ ಸರಕಾರ ನಾಗರಾಜನ ಭಾವಚಿತ್ರ ಇರುವ ಅಂಚೆ ಸ್ಟ್ಯಾಂಪನ್ನು ಬಿಡುಗಡೆ ಮಾಡಿತ್ತು. ಇದು ಕಂಬಳದ ಕ್ಷೇತ್ರಕ್ಕೆ ಸಂದ ಮಹತ್ವದ ಗೌರವವಾಗಿದೆ.  

8. ಕಂಬಳದ ಇನ್ನೊಂದು ದಿಗ್ಗಜ – ನಾಗರಾಜನೊಂದಿಗೆ ಹೋಲಿಕೆ

ಕಂಬಳದ ಇತಿಹಾಸದಲ್ಲಿ ನೀಡಪ್ಪಳ್ಳಿಯ ಜೀವಂದರ ಅರಿಗರ ಜಯ ಗೋಪಾಲ ಕೋಣಕ್ಕೆ ಮೊದಲ ಸನ್ಮಾನ ನಡೆಯಿತು.  ಚೆನ್ನನು ಸಹ ಸಾಕಷ್ಟು ಸನ್ಮಾನವನ್ನು ಪಡೆದು ಕೊಂಡಿದ್ದಾನೆ.  ಚೆನ್ನ ಕೇವಲ ಕೊಳಚೂರು ಕೊಂಡೋಟ್ಟುವಿನ ಆಸ್ತಿಯಲ್ಲ ಅಡ್ವೇ ನಂದಿಕೂರಿನ ಆಸ್ತಿಯಲ್ಲ ತುಳುನಾಡಿನ ಸಮಸ್ತ ಕಂಬಳ ಅಭಿಮಾನಿಗಳ ಆಸ್ತಿ.  ಇಂದು ಅವನು ಮರೆಯದ ಮಾಣಿಕ್ಯ ಆದರು ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಹೃದಯ ಸಾಮ್ರಾಟ.  

9. ಸನ್ಮಾನಗಳ ಮಳೆಗರೆಸಿದ ಕಂಬಳದ ನಕ್ಷತ್ರ

ಅತ್ಮೀಯರು ನೆರೆಕರೆಯವರು ಅಭಿಮಾನಿಗಳು ಹೇಳುವಂತೆ ಚೆನ್ನಣ ಮಿಂಚಿನ ಓಟ ಜೊತೆ ಕತ್ತಿ ಸಹ ಓಟಗಾರ ಯಾರೇ ಆಗಿರಲಿ ತನ್ನ ಸಾಮರ್ಥ್ಯದ ಓಟದಿಂದ ಒಂದು ಹೆಜ್ಜೆ ಮುಂದೇ ಗುರಿ ಮುಟ್ಟಿ ತನ್ನ ಚಿನ್ನದ ಓಟವನ್ನು ಸಾಬೀತು ಪಡಿಸುತಿದ್ದ. ಚೆನ್ನನ ಓಟವನ್ನು ನೋಡಿದವರು ಹೇಳುವಂತೆ ಚೆನ್ನನನ್ನು ಕೊಳಚೂರ್ ಕೊಂಡೋಟ್ಟುಣ ಸದಸ್ಯನಂತೆ ಕಾಣುತ್ತಾರೆ. ಸುಕುಮಾರ್ ಶೆಟ್ರ ಮನೆಯ ಸದಸ್ಯರಿಗೆ ಚೆನ್ನ ಅವರ ಮನೆ ಮಗನಂತೆ. ಚೆನ್ನನಿಂದ ಕೊಳಚೂರ್ ಕೊಂಡೋಟ್ಟು ಸುಕುಮಾರ್ ಶೆಟ್ರ್ಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ದೊರೆಯಿತು. ಚೆನ್ನನನ್ನು ಕರೆಯಲ್ಲಿ ಓಡಿಸಿ ಬಹುಮಾನ ಪಡೆದ ಜಯಕರ ಮಡಿವಾಳ, ದೇವೇಂದ್ರ ಕೋಟ್ಯಾನ್ ರವರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿದೆ. ಇದು ಚೆನ್ನ ತನ್ನ ಯಜಮಾನ ಮತ್ತು ತನ್ನನ್ನು ಓಡಿಸಿದ ಓಟಗಾರರಿಗೆ ಕೊಟ್ಟ ದೊಡ್ಡ ಪ್ರಶಸ್ತಿ ಎಂದೇ ಹೇಳಬಹುದು. 

10. ಮನೆಗೆ ಮಗನಂತೆ ಕಂಡುಬಂದ ಚೆನ್ನನ ಬಂಧ

ಚೆನ್ನ ಕಂಬಳಕ್ಕೆ ಹೊರಡುವಾಗ ಹಟ್ಟಿಯಿಂದ ಸೀದಾ ಮನೆ ಅಂಗಳಕ್ಕೆ ಬಂದು ಅಲ್ಲಿ ದೈವ ದೇವರಿಗ ಮಂಡಿಯೂರಿ ನಮಸ್ಕರಿಸಿ, ತಿರುಗಿ ತುಳಸಿ ಕಟ್ಟೆ ಗೆ ಅಡ್ಡ ಬಿದ್ದು ನಮಸ್ಕಾರ ಮಾಡಿ ಅಲ್ಲಿಂದ ಗಟ್ಟಿ ಹಿಡಿದರೆ ಅಯ್ತು ಇಲ್ಲಾದರೆ ಸೀದಾ ಕಂಬಳದ ಟೆಂಪೋಗೆ ಮೇಲೆ ಹೋಗುತ್ತಾನೆ.  ಅವನನ್ನು ತಡೆದು ನಿಲ್ಲಿಸುವಂತಿಲ್ಲ ಅವನಿಗೆ ಇಷ್ಟ ಬಂದಂತೆ ಅದಕ್ಕೆ ಅವನ ಕೆಲಸಗಾರರು ಸ್ಪಂದಿಸಬೇಕು. ಚೆನ್ನನಿಗೆ ಅಸಮಾಧಾನ ಆಗುವಂತೆ ಅವರು ಮಾಡುವುದಿಲ್ಲ. ನೇಗಿಲು ಕಿರಿಯ, ಹಗ್ಗ ಕಿರಿಯ , ಹಗ್ಗ ಹಿರಿಯ ,ನೇಗಿಲು ಹಿರಿಯ ಹೀಗೆ ಎಲ್ಲಾ ವಿಭಾಗದಲ್ಲೂ ನಿರಂತರ ಬಹುಮಾನ ಪಡೆದುಕೊಂಡಿದ್ದಾನೆ. 

11. ಕ್ರೀಡಾರತ್ನ ಗೌರವ ತಂದ ಸಾಧಕ

ತನ್ನ 19 ನೇ ವಯಸ್ಸಿನಲ್ಲಿ ಬಾರಡಿ ಬೀಡು ಕಂಬಳದಲ್ಲಿ ಪ್ರಶಸ್ತಿ ಪಡೆದುಕೊಂಡನು. ಬಾರಡಿಯ ಕರೆ ಚೆನ್ನನ ನೆಚ್ಚಿನ ಕರೆಯಾಗಿತ್ತು. ಚೆನ್ನ ಕಂಬಳದ ಒಂದು ದಂತ ಕಥೆ ಎಂದರೆ ತಪ್ಪಾಗಲಾರದು.  ಅಷ್ಟೊಂದು ಸಾಧನೆ ಮಾಡಿದಕ್ಕಾಗಿ ಚೆನ್ನನಿಗೆ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಸಣ್ಣ ಪ್ರಾಯದಲ್ಲೇ ಹಗ್ಗ ಹಿರಿಯ ವಿಭಾಗದಲ್ಲಿ ಫೈನಲ್ ಚೆನ್ನ ತಲುಪಿದ್ದಾನೆ.

 ಮನೆಯ ಯಜಮಾನ್ರು ಸಂಗಡಿಗರು ಚೆನ್ನ ಮೆಡಲ್ ಮಾಡುತ್ತಾನೆ ಎಂದರೆ ಅವನು ಆ ಗಂತಲ್ಲಿ ನಿಲ್ಲುವ ಗತ್ತಾಲ್ಲೇ ಹೇಳುತ್ತಾರೆ ಇವತ್ತು ಚೆನ್ನ ಮೆಡಲ್ ಬಿಡುವುದಿಲ್ಲ. ಅಷ್ಟೊಂದು ರಾಜ ಗಾಂಭೀರ್ಯದಲ್ಲಿ ನಿಂತಿರುತ್ತಾನೆ. ರಾಕೆಟ್ ಮೋಡ ಎಂಬ ಕೋಣ ಇತ್ತು. ರಾಕೆಟ್ ಮೋಡ ಸಾಕಷ್ಟು ಬಹುಮಾನ ಮಾಡಿ ಹೆಸರು ಮಾಡಿದ ಕೋಣ. ಕಂಬಳದ ಅನುಭವಿಗಳು ಹೇಳುತ್ತಾರೆ ಕಂಬಳದ ಕರೆಯಲ್ಲಿ ಮೋಡನನ್ನು ಮೊದಲು ಅರ್ಧ ಕರೆ ಹಿಂದೆ ಹಾಕಿದ ಕೋಣ ಇರಲಿಲ್ಲ ಅಷ್ಟೊಂದು ವೇಗದಿಂದ ಓಟ ಪ್ರಾರಂಭಿಸುತ್ತಿತ್ತು. ಆದರೆ ಬೇಸರದ ಸಂಗತಿ ಎಂದರೆ ರಾಕೆಟ್ ಮೋಡ ಸಹ ಇವಾಗ ಸ್ವರ್ಗಸ್ತಾನಾಗಿದ್ದಾನೆ.

12. ರಾಕೆಟ್ ಮೋಡನೊಂದಿಗೆ ನೆನಪಿನ ಸ್ಪರ್ಧೆ

ಇಂದಿಗೂ ಮರೆಯಲಾಗದ ನೆನಪಾಗಿ ಉಳಿದಿದ್ದಾನೆ. ರಾಕೇಟ್ ಮೋಡ ನ ಹಿನ್ನಲೆ ಗತ್ತನ್ನು ಮುಂದಿನ ದಿನಗಳಲ್ಲಿ ತಿಳಿದು ಕೊಳ್ಳುವ ಪ್ರಯತ್ನ ಮಾಡುವ.  ಚೆನ್ನ ಮತ್ತು ರಾಕೆಟ್ ಮೋಡ ಹೊಕ್ಕಡಿಗೋಳಿ ಕಂಬಳದಲ್ಲಿ ಸ್ವಲ್ಪವೂ ತಿರುಗದೆ ಹಠ ಮಾಡದೇ ಒಂದೇ ಒಂದು ಪೆಟ್ಟು ಸಹ ಕರೆಯಲ್ಲಿ ತಿನ್ನದೆ ಮೆಡಲ್ ಮಾಡಿದೆ.  ಇದು ಬಹುಶ: ಕಂಬಳ ಇತಿಹಾಸದಲ್ಲೇ ಈ ತರ ಮೆಡಲ್ ಯಾವ ಕೋಣಗಳು ಮಾಡಿಲ್ಲ ಎಂದೂ ಅನುಭವಿಗಳು ಹೇಳುತ್ತಾರೆ.

13. ಹೊಕ್ಕಡಿಗೋಳಿ ಕಂಬಳದ ಮರೆಯಲಾಗದ ಓಟ

 ಆ ಎರಡು ಕೋಣಗಳ ಓಟವನ್ನು ಅಂದು ಕಣ್ಣುತುಂಬಿ ಕೊಂಡವರೇ ಪುಣ್ಯವಂತರು. ನಂದಲಿಕೆ ಶ್ರೀಕಾಂತ್ ಭಟ್ರ ಪಾಂಡುನೊಂದಿಗೆ ಸಹ ಬಹುಮಾನ ಪಡೆದುಕೊಂಡು ಹೆಸರು ಮಾಡಿದ್ದಾನೆ ಚೆನ್ನ. ಚೆನ್ನನಿಗೆ ಲಕ್ಷಣವೇ ಅವನ ಆ ಎರಡು ಕೊಂಬುಗಳು ಆ ಕೊಂಬುಗಳು ಎಷ್ಟು ಲಕ್ಷಣ ಎಂದರೆ ಅದನ್ನು ವರ್ಣಿಸಲು ಪದಗಳೇ ಸಾಲದು. ಆ ರೀತಿಯ ಕೊಂಬುಗಳು ಇರುವ ಕೆಲವೇ ಕೋಣಗಳ ಪೈಕಿ ಚೆನ್ನನು ಕೂಡ ಓರ್ವ. ಅವನ ಸಾವು ಹೃದಯದಲ್ಲಿ ಎಂದಿಗೂ ಮರೆಯಲಾಗದ ದುರಂತ.  ಒಂದು ಬಾರಿ ಓಡಿಸುವ ಜಯಕರ ಮಡಿವಾಳರು ನಡುಕರೆಯಲ್ಲಿ ಬಿದ್ದರು ಗುರಿಮುಟ್ಟಿ ಪ್ರಶಸ್ತಿಯನ್ನು ಚೆನ್ನ ಮತ್ತು ನಂದಲಿಕೆ ಶ್ರೀಕಾಂತ್ ಭಟ್ರ ಪಾಂಡು ಪಡೆದುಕೊಂಡಿದ್ದರು. 

14. ಕುಡ್ಲ ಚಾನೆಲ್ ಲೋಗೋದಲ್ಲಿ ಅಚ್ಚಳಿಯದ ರೂಪ

ನಮ್ಮ ಕುಡ್ಲ ಚಾನೆಲ್ನ ಲೋಗೋದಲ್ಲಿ ಚೆನ್ನನ ರೂಪವನ್ನು ಕಾಣಬಹುದು. ಸಾದು ಸ್ವಭಾವದ ಕೋಣ ಬಲಿಷ್ಠ ಕೋಣವು ಹೌದು. 13 ವರ್ಷಾ ನಿರಂತರ ಬಹುಮಾನ ಪಡೆದುಕೊಂಡು ಬಂದಿದ್ದಾನೆ. ಕಂಬಳದ ಒಂದು ದಿಗ್ಗಜ ಶ್ರೇಷ್ಠ ಕೋಣ. ಕಂಗಿನಮನೆ ವಿಜಯ್ ಕುಮಾರ್‌ರವರು ಹೇಳುತ್ತಾರೆ ಫಿನಿಶಿಂಗ್ ಮಾಡುವಾಗ ಒಂದು ಕಾಲು ಹಾಕಿಯಾದರೂ ಎದುರಿನ ಕೋಣಗಳಿಂದ ಮೆಡಲ್ ಚೆಣ್ಣ ಕಸಿದುಕೊಳ್ಳುತ್ತಿದ್ದ. ಅಷ್ಟೊಂದು ಸಾಮರ್ಥ್ಯದ ಓಟ. ಆದರೂ ಚೆನ್ನನ ಅಗಲಿಕೆ ಇಂದಿಗೂ ನಂಬಲು ಅಸಾಧ್ಯ.

15. ಅಭಿಮಾನಿಗಳ ನೋವು – ಮರೆಯಲಾಗದ ನಷ್ಟ

 ಹಿಂದಿನ ಅವನ ಓಟವನ್ನು ನೋಡಿದಾಗ ಒಂದೆಡೆ ಖುಷಿ  ಒಂದೆಡೆ ನುಂಗಲಾರದ ಬೇಜಾರು. ಚೆನ್ನನ ಆತ್ಮಕ್ಕೆ ಶಾಂತಿ ಸಿಗಲಿ. ಆ ಮನೆಯವರಿಗೆ ಅಭಿಮಾನಿಗಳಿಗೆ ಈ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದೂ ನಾವು ಭಗವಂತನಲ್ಲಿ ಪ್ರಾರ್ಥಿಸುವ.  ಚೆನ್ನ ಕಂಬಳದ ಹೆಮ್ಮೆ. ನಮ್ಮ ಪೂರ್ತಿ ತುಳುನಾಡಿನ ಕಂಬಳದ ಅಭಿಮಾನಿಗಳ ಹೆಮ್ಮೆ. ಇಷ್ಟು ಚೆನ್ನನ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ತಪ್ಪಿದ್ದಲ್ಲಿ ಈ ಪ್ರಯತ್ನಕ್ಕೆ ಕ್ಷಮೆ ಇರಲಿ.  

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 

ಜೈ ತುಳುನಾಡ್.

Comments

Popular posts from this blog

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ