ಕರಾವಳಿಯ ಉದ್ಯೋಗಗಳು ಮತ್ತು ಸ್ಥಳೀಯ ಆರ್ಥಿಕತೆ

 ಕರಾವಳಿಯ ಉದ್ಯೋಗಗಳು ಮತ್ತು ಸ್ಥಳೀಯ ಆರ್ಥಿಕತೆ

ಪರಿಚಯ - ಅಲೆಗಳ ಮಧ್ಯೆ ಶ್ರಮದ ನಾಡು ಕರಾವಳಿಯು ಕೇವಲ ಸಮುದ್ರದ ಅಲೆಗಳು ತೆಂಗಿನ ಮರಗಳ ಸಾಲು ಹಾಗೂ ಹಸಿರಿನಿಂದ ಕೂಡಿದ ಹೊಲಗಳು ಎಂಬಷ್ಟೇ ಅಲ್ಲ ಇಲ್ಲಿ ಜೀವಿಸುತ್ತಿರುವ ಜನರು ಅವರ ಜೀವನ ಶೈಲಿ ಮತ್ತು ಪ್ರಕೃತಿಯೊಡನೆ ಬೆಸೆದ ಬದುಕು , ಇವೆಲ್ಲವೂ ಈ ನಾಡಿನ ವೈಶಿಷ್ಟ್ಯ.

ಕರಾವಳಿಯ ಆರ್ಥಿಕತೆ ದೊಡ್ಡ ಕೈಗಾರಿಕೆಗಳ ಮೇಲೆ ನಿಂತಿಲ್ಲ ಅದು ಜನರ ಶ್ರಮದ ಮೇಲೆ ನಿಂತಿದೆ ಮೀನುಗಾರರು ಬಿಡಿ ಕಾರ್ಮಿಕರು ಗೋಡಂಬಿ ತಯಾರಿಕರು ರೈತರು ಶಿಲ್ಪಿಗಳು ಇವರೆಲ್ಲರೂ ಕರಾವಳಿಯ ನಾಡಿನ ನಿಜವಾದ ಆರ್ಥಿಕ ಶಕ್ತಿ ಅವರ ಶ್ರಮದಿಂದಲೇ ಸಮುದ್ರದಂತೆ ಜೀವಂತವಾಗಿರುವ ಈ ನಾಡು ಇಂದು ತುಳುನಾಡು ಎಂದೇ ಹೆಮ್ಮೆಪಡುತ್ತಿದೆ.


ಮೀನುಗಾರರ ಜೀವನ - ಅಲೆಗಳಲ್ಲಿ ಆಶಯ 

ಕರಾವಳಿಯ ಬೋಟ್ ಇಂಜಿನ್ ಗಳ ಶಬ್ದದಿಂದ ಆರಂಭವಾಗುವುದು ಬೆಳಗಿನ ಕತ್ತಲೆಯಲ್ಲಿ ಮೀನುಗಾರರು ತಮ್ಮ ಬಲೆ ಮತ್ತು ನಂಬಿಕೆಯೊಂದಿಗೆ ಸಮುದ್ರದತ್ತ ಪ್ರಯಾಣಿಸುತ್ತಾರೆ ಸಮುದ್ರದ ಅಲೆಗಳು ಅವರಿಗೆ ಅಪಾಯವಾದರೂ ಅದೇ ಅಲೆಗಳು ಅವರ ಜೀವನ ಆಶೆಯು ಹೌದು 

ಸಮುದ್ರದ ಮಧ್ಯೆ ಗಂಟೆಗಟ್ಟಲೆ ಬಲೆ ಎಸೆದು ಅಲೆಗಳ ನಡುವೆ ತೂಗುತ್ತಾ ಹೊರಡುವುದು ಅವರ ದೈನಂದಿನ ಬದುಕು ಅಲೆಗಳು ತುಂಬಿ ಬರುವಾಗ ಅವರ ಮುಖದಲ್ಲಿ ಮೂಡುವ ನಗುವೆ ನಿಜವಾದ ಯಶಸ್ಸಿನ ನಗು ಅವರ ಪತ್ನಿಯರು ಅಥವಾ ಮಹಿಳೆಯರು ಬೆಳಗ್ಗೆ ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಮಾಡುವುದರಲ್ಲಿ ತೊಡಗಿರುತ್ತಾರೆ.

ಮೀನುಗಾರರ ಜೀವನ ಕಷ್ಟವಾದರೂ ಆದಾಗ ನಂತರ ಅದರಲ್ಲಿ ಕಂಡು ಬರುವ ಸಮುದ್ರದ ನಂಬಿಕೆ ಪರಸ್ಪರ ಸಹಕಾರ ಮತ್ತು ಸಮುದಾಯದ ಬಾಂಧವ್ಯ ಕರಾವಳಿಯ ಆತ್ಮವಾಗಿದೆ ಅವರ ಶ್ರಮದಿಂದಲೇ ಈ ನಾಡಿನ ಆಕಾರ ಭದ್ರತೆ ಮತ್ತು ಆರ್ಥಿಕ ಚಟುವಟಿಕೆ ಮುಂದುವರೆಯುತ್ತಿದೆ.

ಬೀಡಿ ಕಾರ್ಮಿಕರು ಮತ್ತು ಗೋಡಂಬಿ ಕಾರ್ಖಾನೆಗಳು -ಕಾಣದ ಶ್ರಮದ ಕಥೆ 

ಕರಾವಳಿಯ ಮಹಿಳೆಯರ ಶ್ರಮ ಕರಾವಳಿಯ ಆರ್ಥಿಕತೆಯ ನಿಜವಾದ ಬೆನ್ನೆಲುಬು ಬೀಡಿ ತಯಾರಿಕಾ ಕಾರ್ಖಾನೆಗಳು ಹಾಗೂ ಗೋಡಂಬಿ ಸಂಸ್ಕರಣ ಘಟಕಗಳು ಇಲ್ಲಿನ ಸಾವಿರಾರು ಮಹಿಳೆಯರ ಜೀವನಕ್ಕೆ ಆಧಾರವಾಗಿದೆ 


ಬೆಳಗ್ಗೆ ಮನೆಯ ಕೆಲಸ ಮುಗಿಸಿಕೊಂಡು ಅವರು ಬೀಡಿ ಕಟ್ಟಲು ಕುಳಿತುಕೊಳ್ಳುತ್ತಾರೆ. ದಿನದ ಉದ್ದಕ್ಕೂ ಅವರ ಕೈಗಳು ಕೆಲಸದಲ್ಲೇ ತೊಡಗಿಸಿಕೊಂಡಿರುತ್ತವೆ. ಕೆಲವು ಮಂದಿ ಕಾರ್ಖಾನೆಗಳಲ್ಲಿ ಗೋಡಂಬಿಯ ಕವಲು ತೆಗೆದು, ತೊಳೆದು, ಒಣಗಿಸುವ ಕೆಲಸ ಮಾಡುತಾರೆ. ಈ ಕೆಲಸಗಳು ತುಂಬಾ ಸೂಕ್ಷ್ಮ ಆದರೆ ವೇತನ ಅಷ್ಟೇ ಕಡಿಮೆ 


ಆದರೂ ಇವರ ಶ್ರಮದಿಂದ ಸ್ಥಳೀಯ ಕೈಗಾರಿಕಾ ಆರ್ಥಿಕತೆ ಚಲಿಸುತಿದೆ ಈ ಮಹಿಳೆಯರು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಶ್ರಮದ ನೈಜ್ಯತೆ ತೋರಿಸುತ್ತಾರೆ. ಬೀಡಿ ಕೆಲಸ ಮತ್ತು ಗೋಡಂಬಿ ಕೈಗಾರಿಕೆಗಳು ಕರಾವಳಿಯ ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ದಾರಿ ತೋರಿಸುವುದು ನಿಸ್ಸಾಂಶಯ.

ಭತ್ತ, ತೆಂಗು ಮತ್ತು ಅಡಿಕೆ - ಕರಾವಳಿಯ ಹಸಿರು ಚಿನ್ನ 

ಕರಾವಳಿಯ ದೃಶ್ಯವನ್ನು ತೆಂಗಿನ ಮರಗಳಿಲ್ಲದೆ ಊಹಿಸುವುದು ಅಸಾಧ್ಯ ತೆಂಗು ಮರವನ್ನು ಕಲ್ಪವೃಕ್ಷ ಎಂದೇ ಕರೆಯುತ್ತಾರೆ ಅದರ ಪ್ರತಿಯೊಂದು ಭಾಗವು ಉಪಯುಕ್ತ  ಹಣ್ಣು ಆಹಾರಕ್ಕೆ, ಎಣ್ಣೆ ಅಡುಗೆಗೆ, ಎಲೆ ತಾತ್ಕಾಲಿಕ ಮನೆಗಳಿಗೆ, ಚಪ್ಪರಕ್ಕೆ ಹೀಗೆ ತೆಂಗಿನ ಮರ ನಾಡಿನ ಜನಜೀವನದ ಭಾಗವಾಗಿದೆ.


ಅಡಿಕೆಯ ಕೃಷಿಯು ಕರಾವಳಿಯ ಆರ್ಥಿಕತೆಯ ಮತ್ತೊಂದು ಸ್ತಂಭ ಅಡಿಕೆ ತೋಟಗಳು ಮನೆಮನೆಗೂ ಆದಾಯ ತರುತ್ತಿವೆ ಅಡಿಕೆಯ ವ್ಯಾಪಾರದಿಂದ ಅನೇಕ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿವೆ.

ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಬೆವರು ಸುರಿದು ಈ ಹಸಿರು ಆರ್ಥಿಕತೆಯನ್ನು ಜೀವಂತವಾಗಿರಿಸುತ್ತಾರೆ ಹವಾಮಾನದ ಬದಲಾವಣೆಗಳು ಮಾರುಕಟ್ಟೆಯಲ್ಲಿ ಏರುಪೇರಾದರು, ಈ ರೈತರು ತಮ್ಮ ನಂಬಿಕೆಯಿಂದ ಕೃಷಿಯನ್ನು ಮುಂದುವರಿಸುತ್ತಿದ್ದಾರೆ.

ಶೇಂದಿ ತಯಾರಕರು ಮತ್ತು ಉಪ್ಪಿನ ತಯಾರಕರು-ಮಾಯವಾಗುತ್ತಿರುವ ವೃತ್ತಿಗಳ ನೆನಪು

ಒಂದು ಕಾಲದಲ್ಲಿ ಶೇಂದಿ ತಯಾರಕರು ಕರಾವಳಿಯ ಪ್ರತಿಯೊಂದು ಹಳ್ಳಿಯಲ್ಲೂ ಕಾಣುವ ದೃಶ್ಯವಾಗಿತ್ತು ಅವರು ತಾಳೆ ಮರದ ಮೆಟ್ಟಿಲು ಹತ್ತಿ ತಾಜಾ ಶೇಂದಿ ಸಂಗ್ರಹಿಸುವುದು ಅವರ ವೃತ್ತಿ, ಬಿಸಿಯ ಗಾಳಿ, ಎತ್ತರದ ಮರಗಳು, ಅಪಾಯಕರ ಕೆಲಸ ಆದರೂ ಧೈರ್ಯದಿಂದ ಅವರು ಬದುಕು ಕಟ್ಟಿಕೊಳ್ಳುತ್ತಿದ್ದರು 


ಇಂದಿನ ಪೀಳಿಗೆಗಳಲ್ಲಿ ಈ ವೃತ್ತಿ ನಿಧಾನವಾಗಿ ನಾಶವಾಗುತ್ತಿದೆ ಪಾನೀಯಗಳ ಮೇಲಿನ ನಿಯಂತ್ರಣಗಳು ಮತ್ತು ಜೀವನ ಶೈಲಿಯ ಬದಲಾವಣೆಗಳಿಂದ ಶೇಂದಿ ತಯಾರಕರ ಜೀವನ ಮಾಯವಾಗುತ್ತಿರುವ ವೃತ್ತಿಗಳ ಪಟ್ಟಿ ಸೇರಿದೆ.

ಅದೇ ರೀತಿಯಲ್ಲಿ ಉಪ್ಪು ತಯಾರಕರು ಕೆಲಸ ಮಾಡುತ್ತಿದ್ದ ಜನರ ಜೀವನವು ನಿಧಾನವಾಗಿ ಮರೆಯಾಗುತ್ತಿದೆ ಬಿಸಿಯಾ ಸೂರ್ಯನ ಕೆಳಕ್ಕೆ ಉಪ್ಪಿನ ನೀರು ಹಾಕಿ ಅದು ಒಣಗುವವರೆಗೂ ಕಾಯುವ ಶ್ರಮದ ಕೆಲಸ ಇಂದಿನ ಯಂತ್ರ ಯುಗದಲ್ಲಿ ಅಪರೂಪವಾಗಿದೆ ಆದರೂ ಈ ವೃತ್ತಿಗಳು ಕರಾವಳಿಯ ಸಂಸ್ಕೃತಿಯ ಹಳೆಯ ಪುಟಗಳಲ್ಲಿ ಅಮರವಾಗಿ ಉಳಿದಿದೆ.

 ಸ್ಥಳೀಯ ಕೈಗಾರಿಕೆಗಳು - ಶಿಲ್ಪದ ಸುವಾಸನೆ 

ಕರಾವಳಿಯ ಜನರಿಗೆ ಕಲೆ ಎಂಬುದು ರಕ್ತದಲ್ಲಿ ಬೆರೆಯಲಾಗಿದೆ ಸಮುದ್ರದ ಶಂಖ, ತೆಂಗಿನ ಮರ ಮತ್ತು ಕಲ್ಲುಗಳಿಂದ ತಯಾರಾಗುವ ಕೈ ಕಲೆಗಳು ಇಲ್ಲಿನ ವೈಶಿಷ್ಟ್ಯ 


ಯಕ್ಷಗಾನದ ಮುಖವಾಡ ತಯಾರಿಕಾ ಕಲೆ ವೈಶಿಷ್ಟ್ಯವಾದುದ್ದು ಪ್ರತಿಯೊಂದು ಮುಖವಾಡವು ಒಂದು ಕಥೆ ಹೇಳುತ್ತದೆ ಪೌರಾಣಿಕ ಪಾತ್ರದ ವೈಭವವನ್ನು ಜೀವಂತ ಗೊಳಿಸುವುದೇ ಈ ಕಲೆಗಾರರು.

ಶಿಲ್ಪದ ಮೂಲಕ ಸಂಸ್ಕೃತಿಯ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಇದೇ ರೀತಿ ಶಂಖಗಳಿಂದ ಆಭರಣ ತೆಂಗಿನ ಗರಿಯಿಂದ ಅಲಂಕಾರ ವತ್ತು ಕಲ್ಲಿನಿಂದ ಕಲೆ ಇವು ಗ್ರಾಮೀಣ ಆರ್ಥಿಕತೆಯ ಭಾಗ ಈ ಕೈಗಾರಿಕೆಗಳು ಕೇವಲ ಕಲೆಯಲ್ಲ ಜೀವನೋಪಾಯವೂ ಆಗಿದೆ.

ಆಧುನಿಕತೆಯ ಪರಂಪರೆಯೊಡನೆ ಹೊಸ ದಾರಿ 

ಇಂದಿನ ಕಾಲದಲ್ಲಿ ಕರಾವಳಿಯ ಉದ್ಯೋಗಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ ಯುವಕರು ಹೊಸ ಉದ್ಯೋಗಗಳತ್ತ ಆಕರ್ಷಿತರಾಗಿದ್ದಾರೆ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ತಂತ್ರಜ್ಞಾನ ಸೇವೆಗಳು, ಇವು ಹೊಸ ಆರ್ಥಿಕ ಮಾರ್ಗಗಳಾಗಿವೆ . ಆದರೂ ಕರಾವಳಿಯ ಪಾರಂಪರಿಕ ಉದ್ಯೋಗಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಾರದು ಈ ವೃತ್ತಿಗಳು ಕೇವಲ ಉದ್ಯೋಗವಲ್ಲ ಅದು ನಾಡಿನ ಸಂಸ್ಕೃತಿಯ ಜೀವಂತ ಸಂಕೇತ ಈ ಪರಂಪರೆ ಮುಂದಿನ ಪೀಳಿಗೆಗೂ ತಲುಪುವಂತೆ ಉಳಿಸಿಕೊಳ್ಳುವುದು ನಮ್ಮ ಹೊಣೆ.

 ಹೈನುಗಾರಿಕೆ- ಶ್ರಮದ ಹಾಲು ಸ್ವವಲಂಬನೆಯ ದಾರಿ

ಕರಾವಳಿಯ ಹಳ್ಳಿಗಳ ಬೆಳಗ್ಗೆ ಹಾಲಿನ ಪರಿಮಳ, ಕರುಗಳ ಮುತ್ತು ಮಾತು, ಮತ್ತು ಹಾಲು ಕರೆಯಲು ಬಂದ ಮಹಿಳೆಯರ ಧ್ವನಿ ಅಲಂಕರಿಸುತ್ತದೆ. ಇಲ್ಲಿನ ಜನರಿಗೆ ಹೈನುಗಾರಿಕೆ ಕೇವಲ ಪಶು ಪಾಲನೆಯ ಉದ್ಯೋಗವಲ್ಲ ಅದು ಜೀವನದ ಒಂದು ಭಾಗ


ಅನೇಕರ ಮನೆಗಳಲ್ಲಿ ಎರಡು ಮೂರು ಹಸುಗಳು ಇರುತ್ತವೆ. ಪ್ರತಿದಿನ ಬೆಳಗ್ಗೆ ಹಾಲನ್ನು ಸ್ಥಳೀಯ ಹಾಲು ಸಂಘಗಳಿಗೆ ನೀಡುವುದು ಅಥವಾ ನೇರವಾಗಿ ಹಾಲು ಮಾರಾಟ ಮಾಡಬಹುದು ಅವರ ದಿನಚರಿಯ ಭಾಗವಾಗಿದೆ ಈ ಹಾಲಿನಿಂದ ಲಭ್ಯವಾಗುವ ಆದಾಯ ಕುಟುಂಬದ ಕರ್ಚಿಗೆ ಮಕ್ಕಳ ಶಿಕ್ಷಣಕ್ಕೆ ಮತ್ತು ಹಸುಗಾವಲು ನಿರ್ವಹಣೆಗೆ ಮುಖ್ಯ ಆಧಾರ.ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವವಾದದ್ದು.

ಹಾಲು ಮಾರುವುದು ಆಹಾರ ನೀಡುವುದು ಹಸುಗಳ ಆರೈಕೆ ಇವೆಲ್ಲ ಕೆಲಸಗಳಲ್ಲಿ ಮಹಿಳೆಯರ ಕೈಪಾಡು ಉತ್ಕೃಷ್ಟ ಅವರು ಸ್ವಂತ ಉದ್ಯೋಗ ರೂಪದಲ್ಲಿ ಹಾಲನ್ನು ಮಾರಾಟ ಮಾಡಿ ಪ್ರತಿದಿನದ ಆದಾಯವನ್ನು ಗಳಿಸುತ್ತಾರೆ 

ಕೆಲವರು ಹಾಲಿನಿಂದ ಮೊಸರು, ಬೆಣ್ಣೆ ತುಪ್ಪ ತಯಾರಿಸಿ ಮಾರಾಟ ಮಾಡುವ ಮೂಲಕ ಸಣ್ಣ ಹೈನು ಪದಾರ್ಥ ಉದ್ಯಮವನ್ನು ನಿರ್ಮಿಸಿದ್ದಾರೆ. 

ಮಣ್ಣಿನ ಮಡಕೆ ಕರಾವಳಿಯ ಮಣ್ಣಿನ ಸ್ಪಂದನೆ 

ಮಣ್ಣು ನೀರು ಮಿಶ್ರಣದಿಂದ ಹುಟ್ಟುವ ಅದ್ಭುತ ಕಲೆ ಮಣ್ಣಿನ ಮಡಕೆ ಕರಾವಳಿಯ ಹಳ್ಳಿಗಳಲ್ಲಿ ಮಡಕೆ ತಯಾರಿಸುವ ಪರಂಪರೆ ಶತಮಾನಗಳ ಹಿಂದಿನಿಂದ ಮುಂದುವರೆದಿದೆ ಮಣ್ಣಿನ ಶಿಲ್ಪದಿಂದ ಅಡುಗೆಗೆ ಬೇಕಾದ ಪಾತ್ರೆಗಳಿಂದ ಹಿಡಿದು ದೇವರ ಪ್ರತಿಮೆಗಳವರೆಗೆ ಈ ಕಲೆಯ ವ್ಯಾಪ್ತಿ ವಿಶಾಲ ಹಳೆಯ ಕಾಲದಲ್ಲಿ ಪ್ರತಿಯೊಂದು ಮನೆಗಳಲ್ಲಿ ಮಣ್ಣಿನ ಪಾತ್ರೆಗಳೇ ಮುಖ್ಯವಾಗಿದ್ದವು, ಮಡಕೆಗಳಲ್ಲಿ ನೀರು ತಂಪಾಗಿ ಉಳಿಯುತ್ತಿತ್ತು ಸಣ್ಣ ಪಾತ್ರೆಗಳು ಅಡುಗೆಗೆ ಬಳಸಲ್ಪಡುತ್ತಿತ್ತು ಇದು ಉಪಯೋಗಕ್ಕೆ ಮಾತ್ರವಲ್ಲ ಸಂಸ್ಕೃತಿಯ ಒಂದು ಗುರುತು ಕೂಡ 


ಮಡಿಕೆಯ ಹೊಸ ರೂಪಗಳು ಹತ್ತವೃತ್ತಿ ಉದ್ಯಮದ ಹೊಸ ಮುಖ 

ಇಂದಿನ ಕಾಲದಲ್ಲಿ ಸ್ಟೀಲ್ ಪ್ಲಾಸ್ಟಿಕ್ ಪಾತ್ರೆಗಳು ಮಣ್ಣಿನ ಪಾತ್ರೆಗಳನ್ನು ಬದಲಾಯಿಸಿದರು ಏಕೋ ಫ್ರೆಂಡ್ಲಿ ಉತ್ಪನ್ನಗಳ ಯುಗದಲ್ಲಿ ಮಣ್ಣಿನ ಮಡಕೆ ಮತ್ತೆ ಪ್ರಚಲಿತಕ್ಕೆ ಬರುತ್ತಿದೆ. ಮಣ್ಣಿನ ಕಪ್ಪುಗಳು ಪ್ಲಾಂಟರ್ಗಳು ಹಾಗೂ ಹೋಂ ಡೆಕೋರೇಟರ್ ಇವುಗಳ ಬೇಡಿಕೆ ನಗರಗಳಲ್ಲಿ ಹೆಚ್ಚಿದೆ ಹಲವಾರು ಯುವಕರು ಈಗ ಪೋಟ್ರೆ ವರ್ಕ್ ಶಾಪ್ ನಡೆಸಿ ಹೊಸ ತಲೆಮಾರಿಗೆ ಈ ಕಲೆ ಪರಿಚಯಿಸುತ್ತಿದ್ದಾರೆ ಕೆಲವು ಮಹಿಳಾ ಸಂಘಗಳು ಈ ಮಡಿಕೆ ಉದ್ಯಮವನ್ನು ತಮ್ಮ ಸ್ವಂತ ಅಸ್ತವೃತ್ತಿಯಾಗಿ ನಡೆಯುತ್ತಿವೆ. ಸಣ್ಣ ಮಟ್ಟದಲ್ಲಿ ತಯಾರಿಸಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ.


ಮಣ್ಣಿನಿಂದ ಹುಟ್ಟಿ ಮಣ್ಣಿನಲ್ಲಿ ಕರಗುವ ಮಡಿಕೆಯ ಜೀವನದಲ್ಲಿ ಅದರ ಕಲೆ ಶಾಶ್ವತ ಕರಾವಳಿಯ ಈ ಮಡಕೆಯ ಪರಂಪರೆಯನ್ನು ಉಳಿಸಿಕೊಂಡರೆ ಅದು ಮುಂದಿನ ಪೀಳಿಗೆಗೆ ಕೇವಲ ಸ್ಮರಣೆ ಅಲ್ಲ ಬದುಕಿನ ತತ್ವದ ಪಾಠವಾಗುತ್ತದೆ.

ಕಟ್ಟಡ ಕಾರ್ಮಿಕರು ಕರಾವಳಿಯ ಶ್ರಮದ ಅಡಿಪಾಯ 

ಕರಾವಳಿಯ ಅಭಿವೃದ್ಧಿಯ ನಿಜವಾದ ಕಲ್ಲುಬಂಡೆ ಎಂದರೆ ಕಟ್ಟಡ ಕಾರ್ಮಿಕರ ಶ್ರಮ, ಇಲ್ಲಿನ ಮನೆ ಹೋಟೆಲ್ ರಸ್ತೆ ದೇವಾಲಯ ಎಲ್ಲಾ ಕಟ್ಟಡಗಳ ಹಿಂದೆ ಈ ಶ್ರಮಜೀವಿಗಳ ಶ್ರಮವಿದೆ ಬಹುಶಹ ಬಡ ಜನರಿಗೆ ಕಟ್ಟಡ ಕೆಲಸವೇ ಮೂಲ ವೃತ್ತಿ , ಒಳ್ಳೆಯ ಸಂಬಳ ದೊರೆಯುತ್ತದಾದರು ಸುರಕ್ಷತಾ ಸೌಲಭ್ಯಗಳು ಕಡಿಮೆ. 


ಅವರ ಪರಿಶ್ರಮದಿಂದ ಸ್ಥಳೀಯ ಆರ್ಥಿಕ ಚಕ್ರ ಚಲಿಸುತ್ತದೆ, ಸ್ಥಳೀಯ ಅಂಗಡಿಗಳಿಗೆ ಲಾಭದ ಪ್ರಭಾವ, ಕಟ್ಟಡಕ್ಕೆ ಕಲ್ಲು, ಮರ, ಸಿಮೆಂಟ್, ಬಣ್ಣ, ಎಲೆಕ್ಟ್ರಿಕ್ ವಸ್ತುಗಳು ಬೇಕಾಗುತ್ತದೆ ಕಾರ್ಮಿಕರು ಈ ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ಅಂಗಡಿಗಳ ಮಾರಾಟ ಹೆಚ್ಚಾಗುತ್ತದೆ


ಸಾರಿಗೆ ಉದ್ಯಮಕ್ಕೆ ಪ್ರಭಾವ, ಟ್ರಕ್ ಆಟೋ ಲೊರಿ ಸೇವೆಗಳ ಮೂಲಕ ಸಾಮಗ್ರಿಗಳನ್ನು ತಲುಪಿಸುವುದು ಕಾರ್ಮಿಕರ ದೈನಂದಿನ ಪ್ರಯಾಣದಿಂದ ಸಾರಿಗೆ ಉದ್ಯಮ ಚಲನೆ ಕಾಪಾಡುತ್ತದೆ. ಈ ಪ್ರಭಾವ ಕೆಲಸದ ಹೊತ್ತಿನಲ್ಲಿ ಊಟ, ಚಹಾ, ತಿಂಡಿಗಳನ್ನು ಕರಿದಿಸಲು ಟಿ ಶಾಪ್ ಸಣ್ಣ ಸಣ್ಣ ಹೋಟೆಲ್ ಗಳಿಗೆ ಸ್ಥಿರ ಗ್ರಾಹಕರಂತೆ ಆದಾಯವನ್ನು ನೀಡುತ್ತಾರೆ.

ಕಟ್ಟಡ ಕಾರ್ಮಿಕರು ತಮ್ಮ ಶ್ರಮದಿಂದ ಕೇವಲ ಕಟ್ಟಡವನ್ನು ನಿರ್ಮಿಸುವುದಲ್ಲ ಅವರ ಖರೀದಿ ಪ್ರಮಾಣ ಮತ್ತು ಆಹಾರ ಬಳಕೆ ಎಲ್ಲಾ ಸ್ಥಳೀಯ ಉದ್ಯಮಗಳ ಚಾಲನೆಗೆ ಉತ್ಸಾಹ ನೀಡುತ್ತದೆ ಅವರ ಶ್ರಮವೇ ಸ್ಥಳೀಯ ಆರ್ಥಿಕತೆಯ ಹೃದಯ ಮೀಡಿತ

ಇಲ್ಲಿನ ಬೆಳವಣಿಗೆಯ ಮಧ್ಯೆ ಕಾಣುವ ಬಿರುಕುಗಳು

 ಕರಾವಳಿಯ ಜನರು ಶ್ರಮಶೀಲರು ಪ್ರಾಮಾಣಿಕರು ಪ್ರಕೃತಿ ಪ್ರಿಯರು ಇದು ನಿಸ್ಸಂದೇಹ, ಆದರೆ ಈ ಶ್ರದ್ದೆಯ ನಡುವೆ ಕೆಲವು ಅಲ್ಪ ತಪ್ಪುಗಳು ಅವರ ಅಭಿವೃದ್ಧಿಯನ್ನು ತಡೆಹಿಡಿಯುತ್ತಿವೆ.

  • ಹೊಸ ಯೋಜನೆಗಳತ್ತ ಆಸಕ್ತಿ ಕಡಿಮೆ 
  •  ಇಲ್ಲಿನ ಜನರು ಪಾರಂಪರಿಕ ಉದ್ಯೋಗಗಳಲ್ಲಿ ಸೀಮಿತವಾಗುತ್ತಾರೆ 
  •  ಹೊಸ ತಂತ್ರಜ್ಞಾನ ಮಾರ್ಕೆಟಿಂಗ್ ಅಥವಾ ಆನ್ಲೈನ್ ವ್ಯವಹಾರಗಳತ್ತ ಆಸಕ್ತಿ ತೋರಿಸುತ್ತಿಲ್ಲ

 ನಮ್ಮ ಹಳೆಯ ವಿಧಾನವೇ ಸಾಕು ಎಂಬ ಮನೋಭಾವದಿಂದ ಹೊಸ ಅವಕಾಶಗಳು ಕೈ ತಪ್ಪುತ್ತವೆ ಆನ್ಲೈನ್ ಮಾರಾಟಗಳತ್ತ ಮುಖ ಮಾಡಿದರೆ ಹೆಚ್ಚು ಆದಾಯ ಗಳಿಸಬಹುದು.

ಸಂಘಟಿತ ಕೆಲಸದ ಕೊರತೆ, ಕರಾವಳಿಯವರು ಒಬ್ಬೊಬ್ಬರಾಗಿ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಆದರೆ ಸಹಕಾರ ಮತ್ತು ಸಂಘಟನೆಯ ಮನೋಭಾವ ಇನ್ನೂ ಬೆಳೆಯಬೇಕಿದೆ 

 ಹಾಲು, ಮಸಾಲೆ ಅಥವಾ ತಿಂಡಿ ಉತ್ಪನ್ನಗಳ ಉತ್ಪಾದಕರು ಒಟ್ಟಿಗೆ ಬಂದರೆ ದೊಡ್ಡ ಬ್ರಾಂಡ್ ನಿರ್ಮಿಸಬಹುದು 

 ಆದರೆ ನಾನು ನನ್ನದೇ ಕೆಲಸ ಎಂಬ ಮನೋಭಾವದಿಂದ ಹುಟ್ಟಿನ ಶಕ್ತಿ ಕುಗ್ಗುತ್ತದೆ 

ಬದಲಾವಣೆಯ ಅಗತ್ಯ

ಗ್ರಾಮಗಳಲ್ಲಿ ಕೆಲಸದ ಅವಕಾಶಗಳಿದ್ದರೂ ಯುವಕರು ನಗರಗಳತ್ತ ಹರಿಯುತ್ತಾರೆ. ತಮ್ಮ ಪಿತೃಪಾರಂಪರ್ಯ ಉದ್ಯೋಗವನ್ನು ಸಣ್ಣದು ಎಂದು ನೋಡುತ್ತಾರೆ.

 ಇದರ ಪರಿಣಾಮವಾಗಿ ಹಳ್ಳಿಯ ಪಾರಂಪರಿಕ ಕೌಶಲ್ಯಗಳು ನಿಧಾನವಾಗಿ ನಶಿಸುತ್ತಿವೆ ಗ್ರಾಮೀಣ ಉದ್ಯೋಗಗಳಿಗೂ ಆಧುನಿಕತೆ ತಂತ್ರಜ್ಞಾನ ಗೌರವ ನೀಡಬೇಕು 

ಪರಿಸರ ನಿರ್ಲಕ್ಷ್ಯ ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಸಮುದ್ರಮಾಲಿನ್ಯ, ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ, ಮೀನುಗಾರಿಕೆಯಲ್ಲಿ ಅತಿ ಮೀನುಗಾರಿಕೆ, ಬೆಟ್ಟದ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಇವು ಪ್ರಕೃತಿಯ ಸಮತೋಲನವನ್ನು ಹಾಳು ಮಾಡುತ್ತಿವೆ.

ಆರ್ಥಿಕ ಯೋಜನೆ ಮತ್ತು ಬ್ರಾಂಡಿಂಗ್ ಅರಿವು ಕೊರತೆ 

 ಅನೇಕರು ಉತ್ತಮ ಉತ್ಪನ್ನ ತಯಾರಿಸುತ್ತಾರೆ ಆದರೆ ಬ್ರಾಂಡ್ ಮಾರ್ಕೆಟಿಂಗ್ ಬಗ್ಗೆ ಅರಿವು ಕಡಿಮೆ ಈ ಕಾರಣದಿಂದ ಸ್ಥಳೀಯ ಉತ್ಪನ್ನಗಳು ದೊಡ್ಡ ಮಾರುಕಟ್ಟೆ ತಲುಪಲಾರವು

ಹೆಣ್ಣು ಮಕ್ಕಳ ಶ್ರಮಕ್ಕೆ ಸಮಾನ ಗೌರವದ ಕೊರತೆ 

 ಹಲವಾರು ಮಹಿಳೆಯರು ಗೃಹೋದ್ಯಾಮಿಗಳಾಗಿ ಶ್ರಮಿಸುತ್ತಾರೆ ಆದರೆ ಅವರ ಕೆಲಸವನ್ನು ಮನೆ ಕೆಲಸ ಎಂದು ತಳ್ಳಲಾಗುತ್ತದೆ ಆರ್ಥಿಕ ನಿರ್ಧಾರಗಳಲ್ಲಿ ಅವರಿಗೆ ಸಮಾನ ಸ್ಥಾನ ನೀಡಬೇಕು ಆರ್ಥಿಕ ನಿರ್ಧಾರಗಳಲ್ಲಿ ಅವರಿಗೆ ಸಮಾನ ಸ್ಥಾನ ನೀಡಬೇಕು ಅವರ ಕೈಚಳಕವನ್ನು ಉದ್ಯಮದ ಮಟ್ಟಕ್ಕೆ ತರುವ ಜವಾಬ್ದಾರಿ ವಹಿಸಬೇಕು.

"ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ

ಜೈ ತುಳುನಾಡ್"




 

 

Comments

Popular posts from this blog

ಕಾರ್ಕಳ ಎಕ್ಸ್ಪ್ರೆಸ್ “ಮುಕೇಶ”

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ