Posts

Showing posts from May, 2025

ದೇವಿ ಪುಣ್ಯ ಕ್ಷೇತ್ರಗಳ...ಭಕ್ತಿಯ ಪಯಣ

Image
 ದೇವಿ ಪುಣ್ಯ ಕ್ಷೇತ್ರಗಳ...ಭಕ್ತಿಯ ಪಯಣ   ನಮಸ್ಕಾರ, ಕರಾವಳಿಯಲ್ಲಿ ಕಟೀಲ್ದಪ್ಪೆ ಎಂದೇ ಪ್ರಸಿದ್ಧಿ ಹೊಂದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ  ತಾಯಿ, ಅಪಾರ ಭಕ್ತರನ್ನು ತನ್ನತ್ತ ಸೆಳೆಯುತ್ತಾಳೆ. ಆರು ಕಾಲುಗಳನ್ನು ಹೊಂದಿರುವ ದುಂಬಿಯಾಗಿ, ಭ್ರಮರಾಂಬಿಕೆಯ ರೂಪದಲ್ಲಿ ಅರುಣಾಸುರನನ್ನು ಸಂಹರಿಸುತ್ತಾಳೆ. ಆದಿ ಶಕ್ತಿಯನ್ನು ನಂದಿನಿಯ ಕುಟಿಯ ಲಿಂಗ ಸ್ವರೂಪದಲ್ಲಿ ಕಾಣಬಹುದು. ದೇವಸ್ಥಾನದಲ್ಲಿ ಲಿಂಗ ಸ್ವರೂಪಕ್ಕೆ ಅಭಿಷೇಕ ನಡೆಯುತ್ತದೆ. ನಂದಿನಿ ನದಿಯಲ್ಲಿ 2 ದ್ವೀಪಗಳಿವೆ- ಒಂದು ದೇವಿಯ ಮೂಲ ಸ್ಥಾನ, ಮತ್ತೊಂದು ಈಗೀನ ಪ್ರಸಿದ್ಧವಾದ ಕಟೀಲು ಕ್ಷೇತ್ರ ಮೂಲ ಕ್ಷೇತ್ರವಾಗಿದ್ದು,  ಅರುಣಾಸುರನನ್ನು ಸಂಹರಿಸಿದ ದೇವಿಯನ್ನು ಎಳನೀರಿನ ಅಭಿಷೇಕ ಮಾಡಿ ಶಾಂತ ರೂಪಕ್ಕೆ ತಂದು ಪೂಜಿಸುತ್ತಾರೆ. ಶುಕ್ರವಾರ 800 ರಿಂದ 1000 ಎಳನೀರು ಭಕ್ತರಿಂದ ದೇವಿಗೆ ಸೇರುತ್ತದೆ.  ಈ ಕ್ಷೇತ್ರದಲ್ಲಿ 2 ಹೊತ್ತು ಪೂಜೆ ಹಾಗೂ ಪ್ರಸಾದದ ರೂಪದಲ್ಲಿ ಅನ್ನದಾನ ನಡೆಯುತ್ತದೆ.   ಇಲ್ಲಿ ನಂದಿನಿ ನದಿ 16 ಮೈಲು ಉಗಮಿಸಿ, ಮತ್ತಷ್ಟು 16 ಮೈಲುಗಳ ಆಚೆ ಸಮುದ್ರ ಸೇರುತ್ತದೆ. ನಂದಿನಿಯ ಮದ್ಯೆ ಭಾಗದಲ್ಲಿ ಉದ್ಭವಿಸಿದ್ದರಿಂದ ಇದನ್ನು "ಕಟಿ ಪ್ರದೇಶ"ವೆಂದು ಹೇಳುತ್ತಾರೆ. ಹೀಗಾಗಿ ಈ ಸ್ಥಳಕ್ಕೆ ಕಟೀಲು ಎಂಬ ಹೆಸರು ಬಂತು. 1927ನೇ ಇಸವಿಯಲ್ಲಿ  ಕಟೀಲು ಕ್ಷೇತ್ರಕ್ಕೆ ಶರೂರು ಮಠದೀಶರು ಭೇಟಿ ನೀಡಿ, "ಹ್ಯಾದ್ರಿ ಖಂಡ " ಎಂಬ ತಾಳೆ ...

ತುಳುನಾಡಿನ “ನಾಗಾರಾಧನೆ”

Image
ತುಳುನಾಡಿನ “ನಾಗಾರಾಧನೆ” ನಮಸ್ಕಾರ,  ನಮ್ಮೆಲ್ಲ ಪ್ರೀತಿಯ ಓದುಗಾರರಿಗೆ ನಮಸ್ಕಾರಗಳು, ನಾಗ ನಡೆಯ ಸರ್ಪ ಜಡೆಯ ಪುಣ್ಯ ನಾಡು ನಮ್ಮ ಈ ತುಳುನಾಡು.  ನಾಗದೇವರು ನಡೆದಾಡಿದ ನಾಡು, ಹೆಡೆ ಎತ್ತಿ ಮೆರೆದ ನಾಡು ಎಂದು ತುಳುನಾಡನ್ನು ವರ್ಣಿಸುತ್ತಾರೆ. ಈ ನಮ್ಮ ತುಳುನಾಡನ್ನು ನಾಗದೇವತೆಗಳ ಸೃಷ್ಟಿ ಎಂದು ಕರೆಯುತ್ತಾರೆ. ನಾವು ಮೊದಲೇ ನೋಡಿದಂತೆ, ಓದಿದಂತೆ, ಕೇಳಿದಂತೆ, ತುಳುನಾಡು ಎನ್ನುವಾಗಲೆ ನಮ್ಮ ಕಣ್ಣ ಮುಂದೆ ಅನೇಕ ಸಂಸ್ಕೃತಿಗಳು,ಆರಾಧನೆಗಳು, ಕ್ರೀಡೆಗಳು ಆಚರಣೆಗಳು ಮೂಡಿಬರುತ್ತವೆ. ನುಡಿದ ಮಾತನ್ನು ತಪ್ಪದೆ ಅನುಸರಿಸುವ ಇಲ್ಲಿನ ದೈವಗಳ ಕಾರ್ಣಿಕ ಒಂದು ಕಡೆ ಇದ್ದರೆ, ಕಂಬಳ ಕೋಲಿಯಂಕದಂತಹ ಜಾನಪದ ಕ್ರೀಡೆಗಳು ಇನ್ನೊಂದು ಕಡೆ ವಿಶಿಷ್ಟವಾಗಿ ಕಾಣಿಸುತ್ತವೆ. ಇಂತಹ ವಿಭಿನ್ನ ಆಚರಣೆ ಹೊಂದಿರುವ ತುಳುನಾಡಿನಲ್ಲಿ ನಾಗಾರಾಧನೆಯು ಮಹತ್ವದ ಸ್ಥಾನ ಪಡೆದುಕೊಂಡಿದೆ. ಇಲ್ಲಿ ನಾಗರಾಧನೆಗೆ  ಸಂಬಂಧಿದಂತೆ ನಾಗಬನ, ನಾಗನಕಲ್ಲು ,ನಗರಹುತ್ತ, ನಾಗನದೇವಾಲಯ ಕಾಣಬಹುದು.  ಈ ನಾಗಾರಾಧನೆ ಇಷ್ಟೊಂದು ಮಹತ್ವ ಪಡೆಯಲು ಕಾರಣವೇನು..? ಅದರ ಹಿನ್ನೆಲೆಯನ್ನು ತಿಳಿದುಕೊಳ್ಳೋಣ. 1. ಪರಿಚಯ: ತುಳುನಾಡು – ನಾಗದೇವರ ಪುಣ್ಯ ಭೂಮಿ ಪರಶುರಾಮರು ತನ್ನ ತಂದೆ "ಜಮಧಗ್ನಿ" ಮಹರ್ಷಿಗಳ ಸಾವಿಗೆ ಕಾರಣರಾದ ಕ್ಷತ್ರಿಯರನ್ನು ಕೊಂದು ಅದರ ನಂತರ ತನ್ನ ಪಾಪದ ಪರಿಹಾರರ್ಥವಾಗಿ ತಮ್ಮಲ್ಲಿರುವ ಎಲ್ಲಾ ಭೂಮಿಯನ್ನು ದಾನ ಮಾಡಿ ತಮ್ಮ ಕೊಡಲಿಯನ್ನು ಹಿಡಿದುಕೊಂಡು ...

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

Image
"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ" ನಮಸ್ಕಾರ ; ಪರಿಚಯ ನಮ್ಮ ಪ್ರೀತಿಯ ಓದುಗರಿಗೆ ಹೃದಯಪೂರ್ವಕ ನಮಸ್ಕಾರ. ತುಳುನಾಡು ಎಂದರೆ ನೈಸರ್ಗಿಕ ಸೌಂದರ್ಯ, ಪೌರಾಣಿಕ ಐತಿಹಾಸಿಕ ಮಹತ್ವ ಮತ್ತು ವೈವಿಧ್ಯಮಯ ಸಂಸ್ಕೃತಿಯ ತವರೂರಾಗಿದೆ. ಈ ಪ್ರದೇಶವು ದೈವ ಕೋಲಾ, ಯಕ್ಷಗಾನ, ನಾಗರಾಧನೆ, ಕಂಬಳ ಇಂತಹ ವಿವಿಧ ಸಂಪ್ರದಾಯಿಕ ಕಲಾ ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ತುಳುನಾಡು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕಾಸರಗೋಡು ಜಿಲ್ಲೆಗಳವರೆಗೆ ವ್ಯಾಪಿಸಿದೆ. ಈ ನೈಸರ್ಗಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ತುಳುನಾಡನ್ನು ಪ್ರವಾಸಿಗರ ಹೃದಯದಲ್ಲಿ ವಿಶೇಷ ಸ್ಥಾನಕ್ಕೆ ತರುತ್ತವೆ. ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಹಳ್ಳಿಗಳ ಜೀವನ ಶೈಲಿಯನ್ನು ಸಮಗ್ರವಾಗಿ ತಿಳಿಯಲು ಕಂಬಳದಂತಹ ಪರಂಪರೆಯ ಕ್ರೀಡೆ ಮಹತ್ವಪೂರ್ಣವಾಗಿದೆ. ಕಂಬಳವು ಕೇವಲ ಸ್ಪರ್ಧೆಯೇ ಅಲ್ಲ; ಅದು ಹಳ್ಳಿ ಜನರ ಶ್ರಮ, ಸಾಮರಸ್ಯ ಮತ್ತು ಸಮರ್ಪಣೆಯ ಸಂಕೇತ. ಕೋಣಗಳ ಆರೈಕೆ, ಓಟಗಾರರ ನಿಪುಣತೆ ಮತ್ತು ಯಜಮಾನರ ಪ್ರೀತಿ, ಒಟ್ಟಾಗಿ ಈ ಕ್ರೀಡೆಯ ವೈಭವವನ್ನು ರೂಪಿಸುತ್ತವೆ. ಕಂಬಳದ ವೇಗ, ಹಳ್ಳಿ ಉತ್ಸವದ ಉತ್ಸಾಹ ಮತ್ತು ಅಭಿಮಾನಿಗಳ ಪ್ರೀತಿ ಎಲ್ಲವೂ ತುಳುನಾಡಿನ ಜೀವನಶೈಲಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತವೆ ತುಳುನಾಡಿನ ಕಂಬಳದ ವೈಭವ ತುಳುನಾಡಿನ ಕಂಬಳವು ಈ ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಕಂಬಳವು ಕೇವಲ ಆಟ ಅಥವಾ...

ನಾರಾವಿ- ಪ್ರಕೃತಿಯ ಮಡಿಲಲ್ಲೊಂದು ಸುಂದರ ಹಳ್ಳಿ

Image
  ನಾರಾವಿ - ಪ್ರಕೃತಿಯ ಮಡಿಲಲ್ಲೊಂದು ಸುಂದರ ಹಳ್ಳಿ   ನಮಸ್ಕಾರ, ನಾರಾವಿ, ಕರ್ನಾಟಕದ ದಕ್ಷಿಣ ಕನ್ನಡ, ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಶಾಂತ ಹಾಗೂ ಆನಂದದ ಹಳ್ಳಿ.  ಇದು ಸುವರ್ಣ ನದಿಯ ತೀರದಲ್ಲಿದುವ ಅಪರೂಪದ ಐತಿಹಾಸಿಕ ಸ್ಥಳವಾಗಿದೆ. ಇಡೀ ಹಳ್ಳಿಯು ಪ್ರಕೃತಿಯ ಮಡಿಲಲ್ಲಿ ನೆಲೆಸಿದ್ದು, ಇಲ್ಲಿನ ಪರಿಸರ ನಿಜಕ್ಕೂ ಮನ ಸೆಳೆಯುವಂತಿದೆ. ಈ ಹಳ್ಳಿಯ ಜನರು ತಮ್ಮ ಮುಗ್ದತೆ, ಆತ್ಮೀಯತೆಯಲ್ಲಿ ಪ್ರಸಿದ್ದರು. ಸಣ್ಣ ಊರಾದರೂ ಸಹ ಇಲ್ಲಿ ಎಲ್ಲ ಧರ್ಮಗಳ ಪ್ರರ್ಥನಾ ಮಂದಿರಗಳು ಕಾಣಸಿಗುತ್ತವೆ. ಹಿಂದೂ ದೇವಸ್ಥಾನ, ಕ್ರೈಸ್ತ ಚರ್ಚ್‌ ಹಾಗೂ ಮಸೀದಿ. ನಾರಾವಿಯಲ್ಲಿ ಉತ್ಸವಗಳು ಹಾಗೂ ಸ್ಥಳೀಯ ಆಚರಣೆಗಳು ಕೂಡ ಬಹಳ ವೈವಿಧ್ಯಮಯವಾಗಿದೆ. ವರ್ಷದ ನಿರ್ದಿಷ್ಟ ಸಮಯದಲ್ಲಿ ನಡೆಯುವ ಜಾತ್ರೆಗಳು, ದೈವದ ಕೋಲ, ಎಲ್ಲವೂ ಅದ್ಬುತ.          ಶ್ರೀ ಸೂರ್ಯನಾರಾಯಣ ದೇವಸ್ಥಾನ.   ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ  ಶ್ರೀ ಸೂರ್ಯನಾರಾಯಣ ದೇವಸ್ಥಾನವು ಬಹಳ ಪ್ರಮುಖ್ಯತೆಯನ್ನು ಹೊಂದಿದೆ. ಸೂರ್ಯ ದೇವರನ್ನು ಎಲ್ಲರು ಪೂಜಿಸುತ್ತಾರೆ ಆದರೆ ಸೂರ್ಯನ ದೇವಾಲಯ ಬೆರಳೆನಿಕೆಯಷ್ಟು ಮಾತ್ರ. ಅದರಲ್ಲು ಎರಡು ಸೂರ್ಯ ದೇವಸ್ಥಾನಗಳು ನಮ್ಮ ದಕ್ಷಿಣ ಕನ್ನಡದಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಒಂದು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮಂಗಳೂರು, ಹಾಗೂ ಇನ್ನೊಂದು  ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿ. ನ...