ಕಲಿಯುಗದ ಕಾರ್ಣಿಕ ಮೂರ್ತಿ, ಸ್ವಾಮಿ ಕೊರಗಜ್ಜ.
ಕಲಿಯುಗದ ಕಾರ್ಣಿಕ ಮೂರ್ತಿ, ಸ್ವಾಮಿ ಕೊರಗಜ್ಜ. ನಮಸ್ಕಾರ, 1. ತುಳುನಾಡಿನ ಜನರ ನಂಬಿಕೆಯ ಮೂರ್ತಿ ತುಳುನಾಡಿನ ಜನರ ನಂಬಿಕೆಯ ಮೂರ್ತಿ ಕಲಿಯುಗದ ಸತ್ಯ ಸ್ವಾಮಿ ಕೊರಗಜ್ಜ. ಸೋತು ಹೋಗಿರುವ ಜೀವನದ ಓಟದಲ್ಲಿ ನೊಂದು ಬೆಂದು ಕುಸಿದಿರುವ ಹೃದಯದಲ್ಲಿ ನಮ್ಮ ಕೈ ಹಿಡಿದು ನಡೆಸುವ ಸತ್ಯ. "ಯಾರು ಇಲ್ಲ"... ಎಂಬ ಭಾವನೆ ಕಾಡುವಾಗ.... ನಿರಾಸೆಯ ಮೌನದಲ್ಲಿ ಕತ್ತಲಾದಾಗ "ನಾನು ನಿನ್ನೊಂದಿಗಿರುವೆನು" ಎಂಬ ನಂಬಿಕೆಯ ಬೆಳಕಿನ ಪಾಠ ಹೇಳುವ ಅಜ್ಜ. ಆತನ ಸ್ಮರಣೆ ಔಷಧ...ಆತನ ನುಡಿ ಸಾಂತ್ವನ...ಆತನ ಸಾನಿದ್ಯ ಶಕ್ತಿ... ತುಳುನಾಡಿನ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ. ಅಜ್ಜನಿಲ್ಲದೆ ತುಳುನಾಡು ಪೂರ್ತಿಯಾಗದು, ಜನರ ನಂಬಿಕೆ ಮತ್ತು ನಿತ್ಯ ಜೀವನದ ಭಾಗವೆಂದೇ ಹೇಳಬಹುದು. ತುಳುನಾಡಿನ ಜನರು ತಮ್ಮ ಅಗತ್ಯ ವಸ್ತುಗಳನ್ನು ಕಳೆದುಕೊಂಡಾಗ "ಸ್ವಾಮಿ ಕೊರಗಜ್ಜ" ಎಂದು ಅಜ್ಜನಿಗೆ ಪ್ರೀಯವಾದ ಶೇಂಧಿ, ಚಕ್ಕುಲಿ,ಹಾಗೂ ಬೀಡ ಕೊಡುವುದಾಗಿ ಹರಕೆ ಹೇಳುತ್ತಾರೆ. ಅಜ್ಜನ ಹಸ್ತ ನಮ್ಮ ತಲೆ ಮೇಲಿದೆ ಎಂಬ ಭರವಸೆಯು ಸದಾ ಜೀವಂತ . ಕೊರಗಜ್ಜನ ಜೀವನ ಚರಿತ್ರೆಯ ಸಂಗತಿಗಳನ್ನು ತಿಳಿಯುವ ಮೂಲಕ ಅಜ್ಜನ ನಂಬಿಕೆಯ ಶಕ್ತಿಯನ್ನು ತಿಳಿಯಬಹುದು. 2. ಕೊರಗತನಿಯ ಜನನ ಮತ್ತು ಬಾಲ್ಯಕಥೆ ಏನ್ಸೂರು ಬರ್ಕೆ ಕೊರಗರ ಕೊಪ್ಪ ಎಂಬ ಪ್ರದೇಶದಲ್ಲಿ ಕೊರಗ ತನಿಯ ಜನಿಸುತ್ತಾನೆ. ತನಿಯನ ತಾಯಿ ಕೊರಪೋಲು ಮೈರೆ ಜಾತಿ ಸಮುದಾಯದವರೆಲ್ಲ ಸೇರಿ ಕ...