"ತುಳುನಾಡಿನ ಪತ್ತನಾಜೆಯ ಆ ಹತ್ತು ದಿನಗಳು "
"ತುಳುನಾಡಿನ ಪತ್ತನಾಜೆಯ ಆ ಹತ್ತು ದಿನಗಳು "
ನಮಸ್ಕಾರ,
ತುಳುನಾಡಿನ ಜನರು ಪ್ರತಿ ಹಬ್ಬಕ್ಕೂ, ಆಚರಣೆಗೂ ತಮ್ಮದೇ ಆದ ವಿಶಿಷ್ಟ ಶೈಲಿಯುಳ್ಳ ಪದ್ಧತಿಯನ್ನು ಪಾಲಿಸುತ್ತಾರೆ. ಈ ಆಚರಣೆಗಳು ಕೇವಲ ಸಾಂಪ್ರದಾಯಗಳಷ್ಟೆ ಅಲ್ಲ, ಬದುಕಿನ ಭಾಗವೆ ಆಗಿದೆ. ಇಲ್ಲಿನ ಸಂಸ್ಕ್ರತಿಕ ನಂಬಿಕೆ ಪರಂಪರೆ ಸಾಂಪ್ರದಾಯಗಳ ಸಂಕಲನ. ಇಲ್ಲಿನ ಜನರು ಎಲ್ಲಾ ರೀತಿಯ ಹಬ್ಬಗಳಿಗೆ ತಮ್ಮದೇ ಆದ ಧಾರ್ಮಿಕ ಮತ್ತು ಸಾಮಾಜಿಕ ಗಡುವನ್ನು ಹೊಂದಿದ್ದಾರೆ. ತುಳುನಾಡಿನ ಪತ್ತನಾಜೆಯ ಬಳಿಕ ಮಳೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
1. ಪತ್ತನಾಜೆ ಪರಿಚಯ
2. ಹಬ್ಬದ ಇತಿಹಾಸ ಮತ್ತು ಸಂಪ್ರದಾಯಗಳು
ತುಳುನಾಡಿನಲ್ಲಿ 30ಕ್ಕೂ ಹೆಚ್ಚು ಜನಪದ ಕಥೆಗಳಿವೆ. ಅವುಗಳು ಕೆಲವು ವಿವಿಧ ಜಾತಿಗಳಿಂದ ನಡೆಯುತ್ತದೆ. ಆಟಿಯಿಂದ ಪತ್ತನಾಜೆಯವರೆಗೆ ಮಗ್ಗಗಳು ವಿಭಿನ್ನವಾಗಿ ನಡೆಯುತ್ತಿರುತ್ತದೆ. ಅವು ಆಟಿ ಕಳಂಜ, ಸೋಣದ ಜೋಗಿ, ಸೋಣದ ಮದಿಮಾಲ್,ಕಾವೇರಿ ಪುರುಸೆ, ಮಾದಿರ, ಮಾಯೆರ್ದ ಪುರುಸೆ, ಮಾಕಲಿ, ಮಾರುವೆ, ಕನ್ಯ ಪೂ, ಪೊಲ್ಸೊಂಡಿ ಪೋಪಿನಿ, ಮೂರ್ಲೆ ನಲಿಕೆ. ಇವುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರತ್ರವಿದೆ. ಪತ್ತನಾಜೆಯ ದಿನ ಗುಳಿಗ, ಭೈರವ ಮತ್ತು ದೈವಗಳ ಎಲ್ಲಾ ಇತರ ಪೂಜಾ ಸ್ಥಳಗಳು ದೈವ ದೇಗುಲ, ವಿಶೇಷ ಚೇತನವನ್ನ ಸಮಾದಾನ ಪಡಿಸಲು ಬಾಳೆ ಎಲೆಯಲ್ಲಿ "ಪೊರಿ ಪನಿಯಾರ"ವನ್ನು ಅರ್ಪಿಸಲಾಗುತ್ತದೆ.
4. ಪತ್ತನಾಜೆ ಮತ್ತು ಊರಿನ ಜನಪದ ಕಲಾ ಪರಂಪರೆ
ಪತ್ತನಾಜೆಯ ಹೆಚ್ಚಿನ ಆಚರಣೆಗಳನ್ನು ಮನೆಯ ಹೊರಗೆ ಹೆಚ್ಚಾಗಿ ದೈವಸ್ಥನ, ಗುಳಿಗನ ಕಟ್ಟೆ, ಬೈರವನ ಕಟ್ಟೆ, ಅಥವ ದೈವದ ಕಲ್ಲಿನ ಮುಂದೆ ಆಚರಿಸಲಾಗುತ್ತದೆ. ತುಳುನಾಡಿನ ಸತ್ತಮುತ್ತಲಿನ ಪ್ರದೇಶಗಳ ಎಲ್ಲಾ ಯಕ್ಷಗಾನ ಮೇಳದವರು ತಮ್ಮ ವೇಷ ಭೂಷಣಗಳನ್ನು ತೆಗೆದು ಅದನ್ನು ಮುಂದಿನ ಅವಧಿಯವರೆಗೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾರೆ. ಇದನ್ನು "ಗೆಜ್ಜೆ ಬಿಚ್ಚವುನು" ಎಂದು ಕರೆಯಲಾಗುತ್ತದೆ.
5. ಪತ್ತನಾಜೆಯ ಆಚರಣೆ

7. ದೈವ ಸೇವೆಗಳು
ದೈವ ನರ್ತಕರು ತಮ್ಮ ತಮ್ಮ ಸೇವೆಯನ್ನು ಮುಗಿಸಿ ತಮ್ಮ ಗಗ್ಗರಗಳಿಗೆ ತಂಬಿಲ ಸೇವೆಯನ್ನು ಕೊಡುವ ಪದ್ದತಿಯು ಕೂಡ ಇಂದಿಗೂ ನಡೆಯುತ್ತಿದೆ. "ಹಳೆ ಬೇರು...ಹೊಸ ಚಿಗುರು ಕೂಡಿರಲು ಮರಸೊಬಗು," ಹಳೇ ಬೇರನ್ನು ನಾವು ತುಂಡರಿಸದೆ, ಹೊಸ ಚಿಗುರು ಬೆಳೆಯಲು ಅವಕಾಶ ಕೊಟ್ಟು ಇಲ್ಲಿನ ವಿಶಿಷ್ಟ ಆಚರಣೆ ಸಾಂಪ್ರದಾಯವನ್ನು ಜನರು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ದೊಡ್ಡ ಆಸ್ತಿಯನ್ನು ಈ ಆಚರಣೆಗಳ ಮುಖಾಂತರ ಬೆಳೆಸಿಕೊಂಡು ಬಂದಿದ್ದಾರೆ. ಇಂತಹ ಸಂಸ್ಕ್ರತಿ ಹಿರಿಯರಿಂದ ಬಂದಂತಹ ಸಂಪ್ರದಾಯಗಳನ್ನು ಉಳಿಸಿ...ಬೆಳೆಸುವುದು ನಮ್ಮ ಕರ್ತವ್ಯ. ಈ ಪತ್ತನಾಜೆಯ ಸಮಯದಲ್ಲಿ ತುಳುನಾಡಿನ ಜನರು ವಿಶೇಷವಾಗಿ ಹಲಸಿನ ಹಣ್ಣಿನ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ತಜಂಕ್, ಕಲಲಾಂಬು, ಪೆರ್ಗೆಲಾಂಬು(ಅಣಬೆ), ನರ್ತೆ, ಡೆಂಜಿ(ಏಡಿ) ಹೀಗೆ ಹಲವಾರು ವಿಶಿಷ್ಟವಾದ ಆಹಾರವನ್ನು ಮಳೆಗಾಲದ ಸಮಯದಲ್ಲಿ ಸವಿಯುತ್ತಾರೆ. ಈ ಪತ್ತನಾಜೆಯ ದಿನಗಳು ಕಳೆದ ನಂತರ ನಾಗರಪಂಚಮಿಯ ಬಳಿಕ ಹೆಚ್ಚಾಗಿ ಎಲ್ಲ ವಿಶೇಷ ಆಚರಣೆಗಳು ಪುನ: ಪ್ರಾರಂಭವಾಗುತ್ತದೆ.
ಸಮಾರೋಪ
ತುಳುನಾಡಿನ ಪತ್ತನಾಜೆ ಹಬ್ಬ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿದೆ. ಹತ್ತು ದಿನಗಳ ಉತ್ಸವಗಳಲ್ಲಿ ಯಕ್ಷಗಾನ, ಕೋಳಿ ಕಾಳಗ, ರಥೋತ್ಸವ ಮತ್ತು ಜನಪದ ನೃತ್ಯಗಳ ಮೂಲಕ ಜನರು ತಮ್ಮ ಪರಂಪರೆಯನ್ನು ಉಳಿಸಿ, ಹೊಸ ಪೀಳಿಗೆಗೆ ತಲುಪಿಸುತ್ತಾರೆ. ಹಳೆಯ ವೇಷಭೂಷಣ ಮತ್ತು ಆಚರಣೆಗಳನ್ನು ಸಂರಕ್ಷಿಸುವ “ಗೆಜ್ಜೆ ಬಿಚ್ಚವುನು” ಪದ್ಧತಿ, ಹಳೆ ಬೇರು ಮತ್ತು ಹೊಸ ಚಿಗುರುಗಳಂತೆ ನಮ್ಮ ಸಂಸ್ಕೃತಿಯ ನೆಲೆ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಪತ್ತನಾಜೆಯ ಸಮಯದಲ್ಲಿ ತಯಾರಾಗುವ ವಿಶೇಷ ಆಹಾರಗಳು, ಮನೆಮಾತೃಕೆಯ ಆಚರಣೆಗಳು, ದೈವಸ್ಥಾನದಲ್ಲಿ ಅರ್ಪಣೆಗಳು ಎಲ್ಲಾವೂ ಜನರ ಜೀವನದಲ್ಲಿ ಹಬ್ಬದ ಸಂತೋಷವನ್ನು, ಕುಟುಂಬ ಮತ್ತು ಸಮುದಾಯದ ಬಲವನ್ನು ಹೆಚ್ಚಿಸುತ್ತವೆ. ಈ ಹಬ್ಬ ನಮಗೆ ಸಾಂಪ್ರದಾಯ, ಸಂಸ್ಕೃತಿ ಮತ್ತು ಜೀವನ ಶೈಲಿಯ ಮಹತ್ವವನ್ನು ತಿಳಿಸುತ್ತದೆ.
ಮಳೆಗಾಲದ ಈ ಹಬ್ಬವು ನಮಗೆ ಸಂಭ್ರಮವನ್ನು ನೀಡುವಷ್ಟೆ ಅಲ್ಲ, ನಮ್ಮ ಸಂಸ್ಕೃತಿಯಲ್ಲಿನ ಹಳೆಯ ಪರಂಪರೆಯನ್ನು ಉಳಿಸಲು ಪ್ರೇರಣೆಯಾದಂತೆ, ನಮ್ಮ ದಿನಚರಿಯಲ್ಲಿ ಇದನ್ನು ಜೀವಂತವಾಗಿರಿಸುವ ಕರ್ತವ್ಯವನ್ನು ನಮಗೆ ನೆನಪಿಸುತ್ತದೆ.
ತುಳುನಾಡಿನ ಪತ್ತನಾಜೆ ಹಬ್ಬ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿದೆ. ಹತ್ತು ದಿನಗಳ ಉತ್ಸವಗಳಲ್ಲಿ ಯಕ್ಷಗಾನ, ಕೋಳಿ ಕಾಳಗ, ರಥೋತ್ಸವ ಮತ್ತು ಜನಪದ ನೃತ್ಯಗಳ ಮೂಲಕ ಜನರು ತಮ್ಮ ಪರಂಪರೆಯನ್ನು ಉಳಿಸಿ, ಹೊಸ ಪೀಳಿಗೆಗೆ ತಲುಪಿಸುತ್ತಾರೆ. ಹಳೆಯ ವೇಷಭೂಷಣ ಮತ್ತು ಆಚರಣೆಗಳನ್ನು ಸಂರಕ್ಷಿಸುವ “ಗೆಜ್ಜೆ ಬಿಚ್ಚವುನು” ಪದ್ಧತಿ, ಹಳೆ ಬೇರು ಮತ್ತು ಹೊಸ ಚಿಗುರುಗಳಂತೆ ನಮ್ಮ ಸಂಸ್ಕೃತಿಯ ನೆಲೆ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಜೈ ತುಳುನಾಡ್

Nys❤️
ReplyDeleteGood information ❤️
ReplyDeleteNice 👍
ReplyDelete