ಕರಾವಳಿಯ ಉದ್ಯೋಗಗಳು ಮತ್ತು ಸ್ಥಳೀಯ ಆರ್ಥಿಕತೆ
ಕರಾವಳಿಯ ಉದ್ಯೋಗಗಳು ಮತ್ತು ಸ್ಥಳೀಯ ಆರ್ಥಿಕತೆ ಪರಿಚಯ - ಅಲೆಗಳ ಮಧ್ಯೆ ಶ್ರಮದ ನಾಡು ಕರಾವಳಿಯು ಕೇವಲ ಸಮುದ್ರದ ಅಲೆಗಳು ತೆಂಗಿನ ಮರಗಳ ಸಾಲು ಹಾಗೂ ಹಸಿರಿನಿಂದ ಕೂಡಿದ ಹೊಲಗಳು ಎಂಬಷ್ಟೇ ಅಲ್ಲ ಇಲ್ಲಿ ಜೀವಿಸುತ್ತಿರುವ ಜನರು ಅವರ ಜೀವನ ಶೈಲಿ ಮತ್ತು ಪ್ರಕೃತಿಯೊಡನೆ ಬೆಸೆದ ಬದುಕು , ಇವೆಲ್ಲವೂ ಈ ನಾಡಿನ ವೈಶಿಷ್ಟ್ಯ. ಕರಾವಳಿಯ ಆರ್ಥಿಕತೆ ದೊಡ್ಡ ಕೈಗಾರಿಕೆಗಳ ಮೇಲೆ ನಿಂತಿಲ್ಲ ಅದು ಜನರ ಶ್ರಮದ ಮೇಲೆ ನಿಂತಿದೆ ಮೀನುಗಾರರು ಬಿಡಿ ಕಾರ್ಮಿಕರು ಗೋಡಂಬಿ ತಯಾರಿಕರು ರೈತರು ಶಿಲ್ಪಿಗಳು ಇವರೆಲ್ಲರೂ ಕರಾವಳಿಯ ನಾಡಿನ ನಿಜವಾದ ಆರ್ಥಿಕ ಶಕ್ತಿ ಅವರ ಶ್ರಮದಿಂದಲೇ ಸಮುದ್ರದಂತೆ ಜೀವಂತವಾಗಿರುವ ಈ ನಾಡು ಇಂದು ತುಳುನಾಡು ಎಂದೇ ಹೆಮ್ಮೆಪಡುತ್ತಿದೆ. ಮೀನುಗಾರರ ಜೀವನ - ಅಲೆಗಳಲ್ಲಿ ಆಶಯ ಕರಾವಳಿಯ ಬೋಟ್ ಇಂಜಿನ್ ಗಳ ಶಬ್ದದಿಂದ ಆರಂಭವಾಗುವುದು ಬೆಳಗಿನ ಕತ್ತಲೆಯಲ್ಲಿ ಮೀನುಗಾರರು ತಮ್ಮ ಬಲೆ ಮತ್ತು ನಂಬಿಕೆಯೊಂದಿಗೆ ಸಮುದ್ರದತ್ತ ಪ್ರಯಾಣಿಸುತ್ತಾರೆ ಸಮುದ್ರದ ಅಲೆಗಳು ಅವರಿಗೆ ಅಪಾಯವಾದರೂ ಅದೇ ಅಲೆಗಳು ಅವರ ಜೀವನ ಆಶೆಯು ಹೌದು ಸಮುದ್ರದ ಮಧ್ಯೆ ಗಂಟೆಗಟ್ಟಲೆ ಬಲೆ ಎಸೆದು ಅಲೆಗಳ ನಡುವೆ ತೂಗುತ್ತಾ ಹೊರಡುವುದು ಅವರ ದೈನಂದಿನ ಬದುಕು ಅಲೆಗಳು ತುಂಬಿ ಬರುವಾಗ ಅವರ ಮುಖದಲ್ಲಿ ಮೂಡುವ ನಗುವೆ ನಿಜವಾದ ಯಶಸ್ಸಿನ ನಗು ಅವರ ಪತ್ನಿಯರು ಅಥವಾ ಮಹಿಳೆಯರು ಬೆಳಗ್ಗೆ ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಮಾಡುವುದರಲ್ಲಿ ತೊಡಗಿರುತ್ತಾರೆ. ಮೀನುಗ...